ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆ ಸರ್ಕಾರ ನಿರ್ಧಾರದ ವಿರುದ್ಧ ಜನರ ಆಕ್ರೋಶ-ತಕ್ಷಣದ ಕ್ರಮಕ್ಕೆ ಮಸ್ಕಿ ಯುವ ಬ್ರಿಗೇಡ್ ಮನವಿ.
ಮಸ್ಕಿ : ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಜನರ ಆಕ್ರೋಶ-ತಕ್ಷಣದ ಕ್ರಮಕ್ಕೆ ಒತ್ತಾಯಿಸಿ ಮಸ್ಕಿ ಯುವ ಬ್ರಿಗೇಡ್ ವತಿಯಿಂದ ಮಾನ್ಯ ರಾಜ್ಯಪಾಲರು ರಾಜಭವನ, ಬೆಂಗಳೂರು ಇವರಿಗೆ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು.
ದಸರಾ ಹಬ್ಬವು ನಮ್ಮ ಸಂಸ್ಕೃತಿ ಮತ್ತು ನಮ್ಮ ನಂಬಿಕೆಯ ಗುರುತು. ನಮ್ಮ ಪರಂಪರೆಯ ಪ್ರತೀಕವಾದ ದಸರಾ ಹಬ್ಬದಲ್ಲೂ ರಾಜಕೀಯ ತಂದು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಆದರೆ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರವು ಜನರ ಭಾವನೆ ಮತ್ತು ನಾಡಿನ ಪರಂಪರೆಯನ್ನು ಲೆಕ್ಕಿಸದೇ, ಹಿಂದೂಗಳ ಶ್ರದ್ದಾ ಭಾವನೆಯನ್ನು ಒಪ್ಪದ, ಗೌರವಿಸದ ಬಾನು ಮುತ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ನೇರವಾಗಿ ಜನರ ಹೃದಯಕ್ಕೆ ಹೊಡೆತ ಕೊಟ್ಟಿದೆ.
ಈ ನಿರ್ಧಾರವನ್ನು ನಾವು ಸಹಿಸುವುದಿಲ್ಲ!
ಸರ್ಕಾರದ ದುರಾಲೋಚನೆಯ ಈ ನಿರ್ಧಾರ ಜನರ ಕೋಪಕ್ಕೆ ಗುರಿಯಾಗಿದ್ದು, ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಿ ಅನ್ಯಾಯದ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.ಆದ್ದರಿಂದ ರಾಜ್ಯ ಸರ್ಕಾರವು ತಕ್ಷಣ ತನ್ನ ನಿರ್ಧಾರವನ್ನು ಹಿಂಪಡೆಯಬೇಕು.
ದಸರಾ ಉದ್ಘಾಟನೆಯ ಗೌರವವು ಹಿಂದೂ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವವರ ಪಾಲಾಗಬೇಕು.
ಇಲ್ಲದಿದ್ದರೆ ಸರ್ಕಾರವೇ ಜನರ ಕೋಪಕ್ಕೆ ಕಾರಣವಾಗಿ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರತಿಭಟನೆಗಳು ರಾಜ್ಯವ್ಯಾಪಿ ನಡೆಸುವುದು ಅನಿವಾರ್ಯವಾಗುತ್ತದೆ.
ಆದ್ದರಿಂದ ಗೌರವಾನ್ವಿತ ಮಾನ್ಯ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಕರ್ನಾಟಕದ ಸಂಸ್ಕೃತಿಯ ಹಬ್ಬವನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ,ಮಸ್ಕಿ ಯುವಾ ಬ್ರಿಗೇಡ್ ತಾಲೂಕು ಮಸ್ಕಿ ಸಂಚಾಲಕರಾದ ಅಶೋಕ ಬೆಳಗಲ್, ದೇವರಾಜ್ ಬಳಗಾನೂರ,ವಿನೋದ್, ಮಹಿಳಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಚಂದ್ರಕಲಾ ದೇಶಮುಖ್, ಪುಷ್ಪ ಬಿಜ್ಜಳ, ಶಿವಾನಿ ಮಹಿಳಾ ಸಂಘ, ಕಸ್ತೂರಿ ಇತ್ಲಿ ರಾಷ್ಟ್ರಸೇವಿಕ ಸಮಿತಿಯ ಅಮೃತಾ ಜೋಗಿನ್, ಲತಾ ಪಿ ಮಸ್ಕಿ ಅರುಣ ಹೊಸಮಠ,ಕಾರ್ತಿಕ್ ಎಸ್ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ