"ಕಾಳಾಪುರ ಪಿ.ಡಿ.ಓ. ಲಂಚ ಪಡೆದಿರುವುದು ಸುಳ್ಳು ಆರೋಪ "










ಕೊಟ್ಟೂರು : ಕಾಳಾಪುರ ಗ್ರಾಮ ಪಂಚಾಯಿತಿ ಮೂಲತಃ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳೇ ಹೆಚ್ಚಾಗಿದ್ದು, ತೆರಿಗೆ ವಸೂಲಾತಿಯು ಸಹ ಅಷ್ಟಕ್ಕಷ್ಟೇ ಇದೆ. ಪಂಚಾಯ್ತಿ ವ್ಯಾಪ್ತಿಯ ನೀರುಗಂಟಿ ಹಾಗೂ ಇತರೆ ಸಿಬ್ಬಂದಿಗಳಿಗೆ 5 ವರ್ಷಗಳಿಂದ  ಸರಿಯಾಗಿ ವೇತನ ಪಾವತಿ ಅಗದೆ ಕಾರಣ ಸಮಾನ್ಯ ಸಭೆಯಲ್ಲಿ ಅಡಳಿತತ್ಮಕ ಹಿತದೃಷ್ಟಿಯಿಂದ ಅಬಿವೃದ್ದಿ ಶುಲ್ಕ ಪಡಯುಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು 

ಆದ್ದರಿಂದ ಸಾತಾಳ ಮಂಜಪ್ಪ ಮತ್ತು ಕೊಲ್ಲಪ್ಪ ಅವರಿಂದ ೫೦೦೦ ರೂ. ಗಳನ್ನು ಪಡೆದು, ಸರ್ಕಾರದ ರಸೀದಿ ಕೊಟ್ಟಿದ್ದಾರೆ. ಆದರೆ ಮಾಹಿತಿ ತಿಳಿಯದೆ ಅನಕ್ಷರಸ್ಥರಾಗಿದ್ದು ವ್ಯಕ್ತಿಯಿಂದ  ಹಣ ಪಾವತಿ ಮಾಡಿದ ಬಗ್ಗೆ ತೇಜಾವಧೆ ಮಾಡಲಿಕ್ಕೆ ಅವರಿಗೆ ಬೇಕಾದ ವಿಡಿಯೋ ಪಡೆದು ಯುಟ್ಯೂಬ್‌ನಲ್ಲಿ ಲಂಚ ಪಡೆದಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು  ಪತ್ರಿಕೆಗೆ ತಿಳಿಸಿದರು.

ಭಾನುವಾರ ಮಧ್ಯಾಹ್ನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಚುನಾಯಿತ ಪ್ರತಿನಿಧಿಗಳಾದ  ಅಧ್ಯಕ್ಷರು,ಉಪಧ್ಯಕ್ಷರು ಹಾಗೂ ಸರ್ವ ಸದಸ್ಯರು ನಮ್ಮ ಪಂಚಾಯಿತಿಯ ಪಿ.ಡಿ.ಓ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಾರಲ್ಲೂ ಯಾವುದೇ ಕೆಲಸಕ್ಕೂ ಹಣ ಪಡೆದಿಲ್ಲ. ಆಗದೇ ಇರುವವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಅವರು ಕೊಟ್ಟಿರುವ ೫೦೦೦ ರೂ.ಗಳಿಗೆ ಪಂಚಾಯಿತಿ ವತಿಯಿಂದ ಕೊಟ್ಟಿರುವ ರಸೀದಿ ಸಮೇತ ಪತ್ರಿಕೆಗೆ ತಿಳಿಸಿದರು. ಸುಖಾಸುಮ್ಮನೆ ಪಿ.ಡಿ.ಓ. ಅವರ ತೇಜೋವಧೆ ಮಾಡಲು ಈ ರೀತಿ ಮಾಡಿದ್ದಾರೆ ಎಂದರು. ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಆಗಿರುವುದಿಲ್ಲ. ಸುಳ್ಳು ಸುಳ್ಳಾಗಿ ಆರೋಪ ಮಾಡಿ ವಿಡಿಯೋ ಮಾಡಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಬಿ.ಸುರೇಶ, ಉಪಾಧ್ಯಕ್ಷೆ ಕೊಟ್ರಮ್ಮ, ಸದಸ್ಯರಾದ ಮಂಜುನಾಥ ಪೂಜಾರ, ಹಾರಕನಾಳು ಭರಮಪ್ಪ, ನಿಂಗಮ್ಮ, ಗೀತಮ್ಮ, ಸಿ.ನಾಗರಾಜಗೌಡ, ಸಾತಾಳ ಅಂಜಿನಪ್ಪ, ಶಿವಮ್ಮ, ಸರಸ ಬಿ.ಮಠದ್, ಪದ್ಮ, ಹಾರಕನಾಳು ನಾಗಪ್ಪ, ಕನ್ನಕಟ್ಟಿ ನಾಗಪ್ಪ, ಮಾರಕ್ಕ ಉಪಸ್ಥಿತರಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*