ಸರಕಾರಿ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಮಸ್ಕಿ : ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕೆಂಪೇಗೌಡರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಕರ್ಪೂರ ಹಚ್ಚಿ ಕಾಯಿ ಒಡೆಯುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು.

ನಂತರ ಜಯಂತಿಯ ಕುರಿತು ಮಾತನಾಡಿ ಶಿಸ್ತುಬದ್ಧ ಆಡಳಿತ, ಯೋಜನೆ-ಯೋಚನೆಗಳ ಮೂಲಕ ಬಾಲ್ಯದಲ್ಲಿ ಕಂಡ ಜನಪರ ಕನಸನ್ನು ನನಸಾಗಿಸಲು ಕೆಂಪೇಗೌಡರ ತ್ಯಾಗ ಹಾಗೂ ಶ್ರಮವನ್ನು ನೆನಪು ಮಾಡಿಕೊಳ್ಳಬೇಕು ಎಂದು ಶಾಲೆ ಮುಖ್ಯ ಗುರುಗಳಾದ ಶ್ರೀಕಾಂತಮ್ಮ ರವರು ಹೇಳಿದರು.

ಇಪ್ಪತ್ತಮೂರು ವರ್ಷಗಳ ಕಾಲ ಆಡಳಿತ ನಡೆಸಿ ಇಂದಿನ ಬಹುದೊಡ್ಡ ಸುಸಜ್ಜಿತ ನಗರ ವೊಂದಕ್ಕೆ ಶಾಶ್ವತ ಬದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ಎಂದು ಶಾಲೆಯ ಶಿಕ್ಷಕರಾದ ಸಿದ್ದಯ್ಯ ಹಿರೇಮಠ ರವರು ತಿಳಿಸಿದರು.

ಈ ವೇಳೆ, ಶಿಕ್ಷಕರಾದ,ಮಧುಮತಿ,ಬಸವರಾಜ, ಶಿವನಂದಾ,ಪವಿತ್ರ, ಮಲ್ಲಮ್ಮ,ಯಶೋಧ, ಸೇರಿದಂತೆ ಶಿಕ್ಷಕರು ಮಕ್ಕಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*