ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಂಡ ಮಣ್ಣೆತ್ತಿನ ಅಮಾವಾಸ್ಯೆ
ಮಸ್ಕಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಂಗಾರು ಮಳೆಯು ಸಮೃದ್ಧವಾಗಿದ್ದು, ರೈತಾಪಿ ವರ್ಗವೂ ಮಣ್ಣೆತ್ತು ಪೂಜಿಸುವ ಮೂಲಕ ಮಳೆ, ಬೆಳೆಯು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲು ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗುವಂತೆ ಸ್ಥಳೀಯ ಕುಂಬಾರರು ವಿವಿಧ ಬಗೆಯ ಮಣ್ಣೆತ್ತಿನ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.
ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಪೂಜೆಗಾಗಿ ತಯಾರಿಸಿರುವ ಮಣ್ಣಿನ ಎತ್ತುಗಳ ಮಾರಾಟ ನಡೆದಿತ್ತು. ಸಾರ್ವಜನಿಕರು ಸಂಭ್ರಮದಿಂದ ಮಣ್ಣೆತ್ತು ಖರೀದಿಸಿದರು. ಎತ್ತುಗಳ ಅಳತೆಯ ಮೇಲೆ ಅವುಗಳಿಗೆ ದರ ನಿಗದಿ ಮಾಡಲಾಗಿದೆ.
ಮಣ್ಣೆತ್ತು ಜೋಡಿಗೆ ₹20ರಿಂದ 50 ಮಾರಾಟ ಮಾಡಲಾಗುತ್ತಿದೆ. ಪಟ್ಟಣ ಹಾಗೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಮಣ್ಣಿನ ಎತ್ತುಗಳನ್ನು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುವ ಮೂಲಕ ಆಚರಣೆ ಮಾಡುತ್ತಾರೆ.
ಸುಮಾರು 50 ವರ್ಷಗಳಿಂದ ನಮ್ಮ ಮನೆಯಲ್ಲಿ ಮಣ್ಣೆತ್ತು ತಯಾರು ಮಾಡುತ್ತಿದ್ದು, ನಾವು ಜಹಗೀರ ಗುಡದೂರ ಕೆರೆಯಿಂದ ಮಣ್ಣು ತಂದು ತಯಾರಿಸುತ್ತೇವೆ. ಆದರೆ ಈ ವರ್ಷ ಪಿಒಪಿ ಎತ್ತುಗಳು ಮಾರಾಟಕ್ಕೆ ಬಂದ ಹಿನ್ನೆಲೆ ನಮ್ಮ ಮಣ್ಣೆತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಕೋಳಬಾಳ ಗ್ರಾಮದ ನಿವಾಸಿ ಯಲ್ಲಮ್ಮ ಕುಂಬಾರ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ