ದಶಕಗಳಿಂದ ಬೀಡುಬಿಟ್ಟಿರುವ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ವರ್ಗಾವಣೆ ಯಾವಾಗ ?

ವರದಿ : ಗ್ಯಾನಪ್ಪ ದೊಡ್ಡಮನಿ 

ಮಸ್ಕಿ : ತಾಲ್ಲೂಕು ಆಡಳಿತದ ‘ಶಕ್ತಿ ಕೇಂದ್ರ’ ಎನಿಸಿರುವ ಇಲ್ಲಿನ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಆರು ಏಳು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಆಡಳಿತ ಜಡ್ಡುಗಟ್ಟಿ ಹೋಗಿದೆ. ಸಿಬ್ಬಂದಿಯ ನಿರ್ಲಕ್ಷ್ಯ ಮನೋಭಾವದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ– ಕಾರ್ಯಗಳಿಗೆ ನಿತ್ಯ ಅಲೆಯಬೇಕಾದ ದುಸ್ಥಿತಿ ಇದೆ.

ಸಾರ್ವಜನಿಕ ದಾಖಲೆ ವಿಭಾಗ, ಭೂಮಾಪನ ಇಲಾಖೆ , ಆರ್.ಆರ್.ಟಿ, ಭೂಮಿ ವಿಭಾಗದ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಇಲ್ಲಿನ ಬಹುತೇಕ ಸಿಬ್ಬಂದಿ 6-7 ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಸುದೀರ್ಘ ಅವಧಿಯಿಂದ ಇಲ್ಲೇ ಕೆಲಸ ಮಾಡಿರುವುದರಿಂದ ‘ಪ್ರಭಾವಿ’ಗಳಾಗಿರುವ ಸಿಬ್ಬಂದಿಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಎಂಬುದು ಜನರ ದೂರು.

ಜಿಲ್ಲೆಯಲ್ಲಿ ಅನೇಕ ಕಂದಾಯ ಇಲಾಖೆಯ ಕಛೇರಿಯಲ್ಲಿ ಬಹುತೇಕ ಸಿಬ್ಬಂದಿ ನಿತ್ಯವೂ ವಿವಿಧ ಹಳ್ಳಿಗಳಿಂದ

ಬರುತ್ತಾರೆ. ಬೆಳಿಗ್ಗೆ 11 ಗಂಟೆಯ ನಂತರ ಒಬೊಬ್ಬರಾಗಿ ಕಚೇರಿಗೆ ಆಗಮಿಸುತ್ತಾರೆ. ಮಧ್ಯಾಹ್ನ 1 ಗಂಟೆ ವೇಳೆಗಾಗಲೇ ಊಟಕ್ಕೆ ತೆರಳುತ್ತಾರೆ. 4 ಗಂಟೆಗೆ ಊರಿಗೆ ಮರಳುವ ತರಾತುರಿಯಲ್ಲಿರುತ್ತಾರೆ. ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ತೀವ್ರ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಲ್ಲಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ಎಲ್ಲಾ ವಿಭಾಗಗಳಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯ ಕುರ್ಚಿಗಳು ಖಾಲಿ ಇರುತ್ತವೆ. ಅವರು ಯಾವಾಗ ಬರುತ್ತಾರೋ, ಯಾವಾಗ ವಾಪಸ್‌ ಹೋಗುತ್ತಾರೋ ತಿಳಿಯುವುದಿಲ್ಲ. 

10-15 ವರ್ಷಗಳಿಂದ ಬಹುತೇಕ ಸಿಬ್ಬಂದಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಕೆಲವರು ಕಚೇರಿಯಲ್ಲಿ ಸರಿಯಾಗಿ ಇರುವುದಿಲ್ಲ. ದಿನದಲ್ಲಿ ಒಂದೆರೆಡು ಬಾರಿ ಮಾತ್ರ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಾರೆ, ಇವರ ಬಗ್ಗೆ ಕಛೇರಿಯ ಸಿಬ್ಬಂದಿಯನ್ನು ಕೇಳಿದರೆ ಸಾಹೇಬರು ಫೀಲ್ಡಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ನಿತ್ಯ ಹಳ್ಳಿಗಳಿಂದ ಬರುವವರು ಅಹವಾಲು ಕೇಳುವವರಿಲ್ಲದೇ ಬರಿಗೈಲಿ ಹಿಂದಿರುಗುತ್ತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಗೋನಾಳಕರ್ ದೂರಿದರು.

ಅರ್ಚಕ ರಿಗೆ ನೀಡುವ ತಸ್ಥಿಕ ಭತ್ಯೆ ಖಾತೆ ನೋಡಿಕೊಳ್ಳುವ ‌ಕಂದಾಯ ಇಲಾಖೆಯ ಅಧಿಕಾರಿಗಳು ಹಲವು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಹಳೆಯ ಪಹಣಿ, ಮ್ಯುಟೇಷನ್ ಮುಂತಾದ ಭೂ ದಾಖಲೆಗಳನ್ನು ಕೊಡಲು ರೈತರಿಂದ ಹಾಗೂ ಅರ್ಚಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ.

ಎಂಬ ದೂರಿನ ಹಿನ್ನೆಲೆಯಲ್ಲಿ ಕೆಲವರನ್ನು ವರ್ಗಾ ಮಾಡಿದ್ದರು. ಆದರೆ, ಪ್ರಭಾವ ಬೀರಿ ಮತ್ತೆ ಇಲ್ಲಿಗೇ ವರ್ಗಾ ಆಗಿ ಬಂದಿದ್ದಾರೆ ಎಂದು ಆರೋಪಿಸಿದರು.

5 ವರ್ಷ ಮೀರಿದ ಸಿಬ್ಬಂದಿ ವಿವರ ಕೇಳಿದ ಸರ್ಕಾರ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಕಚೇರಿಯಲ್ಲಿ ಜನರಿಗೆ ಲಭ್ಯರಾಗಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಂದೇ ಸ್ಥಳದಲ್ಲಿ 5 ವರ್ಷ ಮೀರಿ ಸೇವೆಯಲ್ಲಿದ್ದಲ್ಲಿ ಯಾವುದೇ ದೂರುಗಳಿದ್ದಲ್ಲಿ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ಬಗ್ಗೆ ವಿವರವಾದ ವರದಿ ಸಲ್ಲಿಸಿ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಆದೇಶ ಮಾಡಿದ್ದಾರೆ.ಆದರೂ ಅವರ ಆದೇಶವನ್ನು ಪಾಲನೆ ಮಾಡುವವರೇ ಇಲ್ಲವೇ ಎಂಬ ಪಶ್ನೆ ಎಲ್ಲರನ್ನೂ ಕಾಡುತ್ತಿದೆ.


ಹೇಳಿಕೆ ೧

ಕಂದಾಯ ಇಲಾಖೆಯ ಅಧಿಕಾರಿಗಳು ಆರು ಏಳು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ರೈತರಿಂದ ಹಾಗೂ ಅರ್ಚಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ.ಕೆಲವು ಅಧಿಕಾರಿಗಳು

ಪ್ರಭಾವ ಬೀರಿ ಮತ್ತೆ ಇಲ್ಲಿಗೇ ವರ್ಗಾ ಆಗಿ ಬಂದಿದ್ದಾರೆ.

ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಕಚೇರಿಯಲ್ಲಿ ಜನರಿಗೆ ಲಭ್ಯರಾಗಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕದ ರೈತ ಸಂಘದ ಮಸ್ಕಿ ತಾಲೂಕ ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪುರ ರವರ ಒತ್ತಾಯ.


ಹೇಳಿಕೆ ೨

ನೂತನ ತಾಲೂಕು ಕೇಂದ್ರವಾಗಿ 7 ರಿಂದ 8 ವರ್ಷ ಆಯ್ತು.ಹುದ್ದೆ ಮಂಜೂರಾತಿ ಪ್ರಕಾರ ಇನ್ನು ಖಾಲಿ ಹುದ್ದೆಗಳಿದ್ದು

ಭರ್ತಿ ಆಗಿಲ್ಲ. ಮಸ್ಕಿ ತಾಲೂಕಿಗೆ ಹೊಸ ಸಿಬ್ಬಂದಿಗಳು ಬರಲಿಕ್ಕೆ ಹಿಂದೇಟು ಹಾಕುತ್ತಿದ್ದು ಸರ್ಕಾರ ಈಗಾಗಲೇ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಮಾಹಿತಿ ಕೇಳಿದ್ದು, ಅಂತಹ ಸಿಬ್ಬಂದಿಗಳನ್ನು ವರ್ಗಾವಣೆ ನಿಯಮ ಅನುಸಾರ 6% ಮಾತ್ರ ಅವಕಾಶ ಇದ್ದು, ಅದರಂತೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.

ಡಾ.ಮಲ್ಲಪ್ಪ. ಕೆ.ಯರಗೋಳ 

ತಹಶೀಲ್ದಾರರು ಮಸ್ಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*