ನಿಮಗೆ ಉಸಿರಾಡಲು ಆಮ್ಲ ಜನಕ ಬೇಕಾದರೆ ಮನೆಗೊಂದು ಮರ ಬೆಳೆಸಿ : ಶಿವಮೂರ್ತಿ ಗದ್ಗಿಮಠ ಮನವಿ

 

ಮಸ್ಕಿ : ಪ್ರಕೃತಿ ಫೌಂಡೇಶನ್ ಹಾಗೂ ಅಭಿನಂದನ್ ಸಂಸ್ಥೆಯ ಸಹಯೋಗದಲ್ಲಿ ಪರಿಸರ ಜಾಗೃತಿ ಅಂಗವಾಗಿ ಮಸ್ಕಿ ಹಸಿರು ಬೃಂದಾವನ - ಮನೆಗೊಂದು ಮರ ಅಭಿಯಾನದ ಕಾರ್ಯಕ್ರಮ ಪಟ್ಟಣದ ಪಲ್ಲೇದ್ ಲೇಔಟ್ ನಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು.

ಇದೇ ವೇಳೆ ಪ್ರಕೃತಿ ಫೌಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ರವರು ಮಾತನಾಡಿ ಪ್ರತಿಯೊಬ್ಬರಿಗೂ ಉಸಿರಾಡಲು ಆಮ್ಲ ಜನಕ ಬೇಕೇ ಅಂದ್ರೇ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಒಂದರಂತೆ ಮರ ಬೆಳೆಸಿ

ಈ ಪರಿಸರದ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿದಾಗ ಕೆಲವೇ ವರ್ಷ ಗಳಲ್ಲಿ ಮಸ್ಕಿ ಪಟ್ಟಣ ಹಸಿರುಮಯವಾಗುತ್ತದೆ. ನಮಗಾಗಿ ಇರುವ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದರು.

ಶಿಕ್ಷಕರಾದ ಸಿದ್ದಾರೆಡ್ಡಿ ಗಿಣಿವಾರ ರವರು ಮಾತನಾಡಿ, ಮನೆಗೊಂದು ಮರ ಅಭಿಯಾನ" ಎಂಬ ಈ ಪರಿಸರ ಕಳಕಳಿಯ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಸಿಕ್ಕರೆ ಮಸ್ಕಿಯು ಹಸಿರು ನಗರ ಆಗುವಲ್ಲಿ ಯಾವ ಅನುಮಾನವಿಲ್ಲ. ಈ ಒಂದು ಅಭಿಯಾನಕ್ಕೆ ಕರೆ ನೀಡಿದ ಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ ಬಳಗಾನೂರ ಹಾಗೂ ಅಭಿನಂದನ್ ಸಂಸ್ಥೆಗೆ ಇನ್ನಷ್ಟು ಶಕ್ತಿ ಜೊತೆಯಾಗಲಿ ಅವರ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದರು.

ಈ ವೇಳೆ, ಸಮಾಜ ಸೇವಕರಾದ ಸಿದ್ದಯ್ಯ ಹೆಸರೂರು, ರಾಮಣ್ಣ ಹಂಪರಗುಂದಿ, ಕುಮಾರೆಪ್ಪ , ಬಸವರಾಜ ಯದ್ದಲದಿನ್ನಿ, ಶಾಂತಕುಮಾರ್, ರಾಜಣ್ಣ ಸಾನಬಾಳ, ವೀರೇಶ ಕಮತರ, ಸೂಗುರಯ್ಯ, ಸುರೇಶ್ ಬ್ಯಾಳಿ, ಮಲ್ಲಿಕಾರ್ಜುನ ಪಾಲೀಲ್,ಸೂಗೂರೆಡ್ಡಿ, ನಾಗರಾಜ ಕುಂಬಾರ, ಸೋಮಶೇಖರ್ ಸಿರವಾರಮಠ,ಸ್ಪೂರ್ತಿ ಧಾಮದ ಮಕ್ಕಳ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*