"ಕೊಟ್ಟೂರಿನಲ್ಲಿ ಪವಿತ್ರ ಬಕ್ರಿದ್ ಹಬ್ಬದ ಆಚರಣೆ "

*ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಆಚರಣೆ*

ಕೊಟ್ಟೂರು : ತಾಲ್ಲೂಕಿನ ಪಟ್ಟಣದ ಹ್ಯಾಳ್ಯ ರಸ್ತೆಯಲ್ಲಿ ಬರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂದವರು ಶನಿವಾರ ಪ್ರಾರ್ಥನೆ ಸಲ್ಲಿಸಿದರು . ಬಕ್ರೀದ್ ಹಬ್ಬ ಆಚರಣೆಗೆ ಕಾರಣವಾದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹ ಮುಂದಾಗುತ್ತಾರೆ. ಕನಸಿನಲ್ಲಿ ಬರುವ ಅಲ್ಲಾಹ ಜಗತ್ತಿನಲ್ಲಿ ನಿಮಗೆ ಅತ್ಯಂತ, ಪ್ರಿಯರು ಯಾರು ಎಂದು ಕೇಳಿದಾಗ ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿಯಿಂದು ಇಬ್ರಾಹಿಂ(ಸ) ಹೇಳ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಗುತ್ತದೆ. ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನ బలిಗೆ ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ದಗೊಳ್ಳುತ್ತಾರೆ. ಕತ್ತಿ ಆದರೆ  ಮಗನನ್ನು ಬಲಿ ಕೊಡಲು ನೀಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಬೀಸಲು ಸಿದ್ದರಾಗುತ್ತಾರೆ. ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯು ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ.

ದೇವನಲ್ಲಿ ತಮಗಿರುವ ಸತ್ವನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲಾಗುವುದು ಧರ್ಮ ಗುರುಗಳಾದ ಯಾಸಿನ್ ಮುಕ್ತಾರ್ ಸಾಬ್,ಅವರು ಹೇಳಿದರು. 

ಈ ಸಂದರ್ಭದಲ್ಲಿ ನಜೀರ್ ಸಾಬ್. ಹೆಗ್ಗಡೆ ಮೆಬು ಸಾಬ್. ನೂರ್ ಮುಹಮ್ಮದ್ , ಗೌಸ್ ಮುಸ್ಲಿಂ  ಮುಖಂಡರು ಮತ್ತು ಡಿವ್ಯೆಎಸ್ಪಿ ಮಲ್ಲೇಶ್ ದೊಡ್ಮಮನಿ.ಸಿಪಿಐ ವೆಂಕಟಸ್ವಾಮಿ.ಪಿಎಸ್ಐ ಗೀತಾಂಜಲಿ ಶಿಂಧೆ. ಎ ಎಸ್ ಐ ಹುಲುಗಪ್ಪ. ರೇವಣಸಿದ್ದಪ್ಪ. ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*