ಪರಿಶ್ರಮದ ಮೂಲಕ ಕನಸು ನನಸಾಗಿಸಬೇಕು : ನಾಗಭೂಷಣ ಬಾರಿಕೇರ್

 

ಮಸ್ಕಿ : ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ .ಎಸ್ ಬೋಸ್ ರಾಜ್ ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ

ಅವರ ಹುಟ್ಟಹಬ್ಬದ ಪ್ರಯುಕ್ತ ಸಹಕಾರಿ ಸಂಘದ ಅಧ್ಯಕ್ಷ ನಾಗಭೂಷಣ ಬಾರಿಕೇರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು,

ಪಟ್ಟಣದ ಪಿಎಂ ಶ್ರೀ ಧನಗರವಾಡಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್, ಹಾಗೂ ಸಿಹಿ ವಿತರಿಸುವ ಮೂಲಕ ವಿಶೇಷವಾಗಿ ಸಚಿವರುಗಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ವೇಳೆ,ಹಿರಿಯರಾದ ನಾರಾಯಣಪ್ಪ ಕಾಸ್ಲಿ ರವರು ಮಾತನಾಡಿ, ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರಿ ಅಭಿವೃದ್ಧಿ ಜೊತೆಗೆ ಬೇಸಿಗೆ ಕಾಲದಲ್ಲಿ ಸಾರ್ವಜನಿಕ ರಿಗೆ ಕುಡಿಯುವ ನೀರಿನ ಅರವಟ್ಟಿಗೆ ಹಾಗೂ ಸರಕಾರಿ ಶಾಲೆ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ನೋಟ್ ಬುಕ್ ವಿತರಣೆ ಸೇರಿದಂತೆ ಅನೇಕ ಸಮಾಜ ಸೇವೆ ಮಾಡುತ್ತಾ ಬರುತ್ತಿರುವುದು ಅವರ ದೊಡ್ಡ ಗುಣ ಅವರ ಸಮಾಜಮುಖಿ ಕಾರ್ಯಕ್ಕೆ ಮನಸೋಲದ ವ್ಯಕ್ತಿಗಳೇ ಇಲ್ಲಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅದೇ ರೀತಿ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಪರಿಶ್ರಮದ ಮೂಲಕ ಅದನ್ನುನನಸಾಗಿಸಿಕೊಳ್ಳಬೇಕು ಎಂದು ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ ರವರು ಹೇಳಿದರು.

ಏಕಾಗ್ರತೆಯಿಂದ ಸತತ ಅಭ್ಯಾಸ ಮಾಡುವುದರಿಂದ ಜೀವನದ ಗುರಿ ಮುಟ್ಟಲು ಸಾಧ್ಯವಿದೆ ಎಂದು ರವಿ ಚಿಗಿರಿ ರವರು ತಿಳಿಸಿದರು.

ಈ ವೇಳೆ, ಶಾಲೆಯ ಮುಖ್ಯ ಶಿಕ್ಷಕಿ ಶ್ರಿಕಾಂತಮ್ಮ,ಪುರಸಭೆ ಸದಸ್ಯ ಮಲ್ಲಯ್ಯ ಪೂಜಾರಿ,ಮಲ್ಲಯ್ಯ ಮುರಾರಿ, ರವಿ‌ ಮಡಿವಾಳ,ರವಿ ಚಿಗಿರಿ, ಶಶಿಕುಮಾರ್,ಮಲ್ಲಿಕ್ ಮುರಾರಿ,ಮೈಬೂಬ್ ಹಣಗಿ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*