"ಕರ್ನಾಟಕ ಪ್ರಸ್ ಕ್ಲಬ್ ಹಗರಿ ಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ಶಿವಶಂಕರ ಸ್ವಾಮಿ ಅವಿರೋಧವಾಗಿ ಆಯ್ಕೆ"
*ಕರ್ನಾಟಕ ಪ್ರಸ್ ಕ್ಲಬ್ ತಾಲೂಕು ಘಟಕ ಪ್ರಾರಂಭೋತ್ಸವ*
ಹಗರಿಬೊಮ್ಮನಹಳ್ಳಿ: ಕರ್ನಾಟಕ ಪ್ರಸ್ ಕ್ಲಬ್ ಹಗರಿ ಬೊಮ್ಮನಹಳ್ಳಿ ತಾಲೂಕು ನೂತನ ಅಧ್ಯಕ್ಷರಾಗಿ ಶಿವ ಶಂಕರ್ ಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ರಂದು ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಉಪಾಧ್ಯಕ್ಷ ಕೆ ಕೊಟ್ರೇಶ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಕರ್ನಾಟಕ ಪ್ರಸ್ ಕ್ಲಬ್ ಸಂಘದಿಂದ ಆರೋಗ್ಯ ವಿಮೆ, ಮೃತ ಹೊಂದಿದ ಸದಸ್ಯರಿಗೆ ಸಹಾಯಧನ ಮತ್ತು ವಿವಿಧ ಸೌಲಭ್ಯಗಳ ಅನುಕೂಲಕ್ಕೆ ಸಂಘದಿಂದ ಪ್ರೋತ್ಸಾಹ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು
ತಾಲೂಕು ಕರ್ನಾಟಕ ಪ್ರಸ್ ಕ್ಲಬ್ ಸಂಘದ ಸರ್ವಸದಸ್ಯರ ಸಂಯುಕ್ತ ಕರ್ನಾಟಕ ವರದಿಗಾರರು ಉಮೇಶ್ ನೆಲ್ಕುದ್ರಿ, ಕನ್ನಡ ಪ್ರಭ ವರದಿಗಾರರು ಸುರೇಶ್ ಯಳಕಪ್ಪನವರನ್ನು ಒಮ್ಮತದಿಂದ ಜಿಲ್ಲಾ ಸಂಘಕ್ಕೆ ಆಯ್ಕೆ ಮಾಡಲಾಯಿತು.
ಪದಾಧಿಕಾರಳ ವಿವರ: ಹಗರಿ ಬೊಮ್ಮನಹಳ್ಳಿ ತಾಲೂಕು ಉಪಾಧ್ಯಕ್ಷ ಫಕೀರಪ್ಪ, ಚಂದ್ರಶೇಖರ್, ಏಳು ಕೋಟಿ,ಪ್ರಧಾನ ಕಾರ್ಯದರ್ಶಿ ಪೂಜಾರ್ ಸಿದ್ದಪ್ಪ , ಸಹ ಕಾರ್ಯದರ್ಶಿ ಫಕ್ರುದ್ದೀನ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಡಿಗೇರ್, ಪ್ರಜಾಂಚಿ ಎನ್ ಪರಶುರಾಮ್,ಸದಸ್ಯರಾದ .ಆರ್ ಪ್ರಕಾಶ್ ದೊಡ್ಡ ಬಸವರಾಜ. ಮೈಲಪ್ಪ. ಸಂತೋಷ.ಇದ್ದರು
ಈ ಸಂದರ್ಭದಲ್ಲಿ ಕೊಟ್ಟೂರಿನ ಹಿರಿಯ ಪತ್ರಕರ್ತರು ಡಿ ಸಿದ್ದಪ್ಪ ,ಹಿರಿಯ ಪತ್ರಕರ್ತರು ಪರುಶುರಾಮ ಎಸ್ ,ಎಸ್ ಪ್ರಕಾಶ್ , ಜೆ ಕೆ ರೇವಂತ್ ಉಪಸ್ಥಿತರಿದ್ದರು



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ