ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ
ಮಸ್ಕಿ : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನ ಆವರಣದಲ್ಲಿ ಪುರಸಭೆ ವತಿಯಿಂದ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ಹಾಗೂ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ.
ನಂತರ ಮಾತನಾಡಿ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ಹಾಗೂ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನ ಒಂದು ಮಹತ್ವವಾದ ಯೋಜನೆ ಇಂತಹ ಕಾರ್ಯಕ್ರಮ ವಿರಳ ಎಂದು ಪುರಸಭೆ ಸದಸ್ಯರಾದ ಶರಣಬಸವ ಸೊಪ್ಪಿಮಠ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಶಿವರಾಜ್ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೇತನ್ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ
ನರಸರೆಡ್ಡಿ , ಕಾಲೇಜಿನ ಪ್ರಾಂಶುಪಾಲರಾದ ತಿಪ್ಪಣ್ಣ, ಶಂಕರ್, ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಮತ್ತು ಪದಾಧಿಕಾರಿಗಳು, ಹಿರಿಯ ಮಹಿಳಾ ಮುಖಂಡರು ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ