*ಬಯಲು ಸೀಮೆಯನ್ನು ಹಸುರಾಗಿಸಿದ ಹಸಿರು ಹೊನಲು ಸೇವಾ ಸಂಸ್ಥೆ*

"ಹಸಿರು ಹೊನಲು ಸೇವಾ ಸಂಸ್ಥೆಯಿಂದ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಗೆ ಸಾಕ್ಷಿ "

ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ ಸಂದೇಶ

ಕೊಟ್ಟೂರು: ಸದಾ ಬರಗಾಲಕ್ಕೆ ಹೆಸರುವಾಸಿವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆಯು ಸದಾ ಪರಿಸರ ಸಂರಕ್ಷಣೆ, ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಮಡಿದವರ ಹೆಸರಿನಲ್ಲಿ ಗಿಡ ನೆಡುವ, ನೆಟ್ಟಿರುವ ಗಿಡವನ್ನು ಬೆಳೆಸಿ ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ. ಇದೇ ತರಹ ಪ್ರತಿಯೊಬ್ಬರೂ ಗಿಡ ನೆಡುವ ಕೆಲಸ ಮಾಡಬೇಕು ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ಇದಕ್ಕೂ ಮೊದಲು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಇವರಿಂದ ಜೂನ್ ಒಂದರಿಂದ ಒಂದು ತಿಂಗಳ ಕಾಲ ಗಿಡ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅದರ ಸಮಾರೋಪ ಸಮಾರಂಭ ಭಾನುವಾರದಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಿಂದ ಹಸಿರ ಹಬ್ಬ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮೆರವಣಿಗೆ ಎಂದರೆ ವಧು-ವರರ ಮೆರವಣಿಗೆ ಅಥವಾ ಗಣ್ಯರ ಮೆರವಣಿಗೆ ನೋಡಿದ್ದೇವೆ ಕೇಳಿದ್ದೇವೆ ಆದರೆ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಗೆ ಸಮಾಳ, ನಂದಿಕೋಲುಗಳು ದಾರಿಯುದ್ದಕ್ಕೂ ಶಬ್ದದಿಂದ ಮೆರವಣಗೆಗೆ ಮೆರಗನ್ನು ತಂದಿತ್ತು. ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ ಸಂದೇಶವನ್ನು ಬಿತ್ತರಿಸಲಾಗಿತ್ತು. ಹಿರೇಮಠದಿಂದ ಹೊರಟ ಮೆರವಣಿಗೆಯು ಗಾಂಧಿ ಸರ್ಕಲ್, ಬಸ್ಟ್ಯಾಂಡ್, ರೇಣುಕಾ ಟಾಕೀಸ್ ರೋಡ್, ಉಜ್ಜಿನಿ ಸರ್ಕಲ್ ಮಾರ್ಗವಾಗಿ ಕೊಟ್ಟೂರೇಶ್ವರ ಕಾಲೇಜಿನ ಎಚ್ ಜಿ ರಾಜ್ ಭವನದವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಪ್ಟಟಣದ ಕೊಟ್ಟೂರೇಶ್ವರ ಕಾಲೇಜಿನ ಎಚ್.ಜಿ.ರಾಜ್ ಭವನದಲ್ಲಿ ಅಯೋಜಿಸಿದ್ದ ಪರಿಸರ ಸಮಾರೋಪ ಸಮಾರಂಭ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಡೋಣೂರು ಚಾನುಕೋಟಿಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು  ಹಾಗೂ ಪರಿಸರ ತಜ್ಞ ಶಿವಾನಂದ ಕಳವೆ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತ್ತು. 

ವಿಶೇಷ ಉಪನ್ಯಾಸವನ್ನು ನೀಡಲು ಆಗಮಿಸಿದ ಪರಿಸರ ತಜ್ಞರಾದ ಶಿವಾನಂದ ಕಳವೆ ಮಾತನಾಡಿದರು ಕಲ್ಯಾಣ ಕರ್ನಾಟಕ ಭಾಗವು ಸದಾ ಬರಗಾಲಕ್ಕೆ ಹೆಸರುವಾಸಿಯಾಗಿದೆ ಆದರೆ ಕೊಟ್ಟೂರಿನ ಹಸಿರು ಹೊನಲು ಸೇವಾ ಸಂಸ್ಥೆ ಎಂಬ ಪ್ರತಿನಿತ್ಯ ಗಿಡ ಹಾಕುವುದು ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವುದು, ಮಡಿದವರ  ಹೆಸರಿನಲ್ಲಿ ಗಿಡ ಹಾಕುವುದು ಇವರ ಕೆಲಸವನ್ನು ನೋಡಿ   ಸರ್ಕಾರವು  ಕಲಿಯಬೇಕಿದೆ ಎಂದರು.

ರೈತರು ಕೃಷಿ ಮಾಡುವ ಮುಂಚೆ ಕಾಡಿನಲ್ಲಿ ಪ್ರಾಣಿಗಳು ಪಕ್ಷಿಗಳು ಕೃಷಿ ಕೆಲಸ ಮಾಡುತ್ತಿದ್ದವು . ಹಿಂದಿನ ಕಾಲದ ರಾಜ್ಯ ಮನೆತನಗಳು ಪರಿಸರ ಬಗ್ಗೆ ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದು ಇಟ್ಟಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನ ರಾಗಿ ರತ್ನಮ್ಮ ಎಂಬ ಮಹಿಳೆ ತಮ್ಮ ನಾಲ್ಕು ಎಕರೆ ಹೊಲದಲ್ಲಿ ಪರಿಸರವನ್ನು ಬೆಳೆಸಿ ಅಂದಿನ ದೇಶದ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಅವರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದರು . ಪರಿಸರ ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸಂಘ ಸಂಸ್ಥೆ ಅವರ ಅಲ್ಲ ಪ್ರತಿಯೊಬ್ಬರು ತಮ್ಮ ಊರಿನಲ್ಲಿರುವ ಕೆರೆ, ನದಿ, ಮರಗಳನ್ನು ಉಳಿಸಿ ಬೆಳೆಸಬೇಕು ಹಾಗೆ ಪ್ರತಿಯೊಬ್ಬ ಮನುಷ್ಯನು ಪರಿಸರಕ್ಕೆ ಕೇವಲ ಕನಿಷ್ಠ ಸಮಯವನ್ನು ಮೀಸಲಿಟ್ಟರೆ ಪರಿಸರ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರಕ್ಕೆ ಹಾನಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ನಂತರ ಡಾ. ಡೋಣೂರು ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹಸಿರು ಹೊನಲು ಸೇವಾ ಸಂಸ್ಥೆಯು ಸಾಮಾಜಿಕ ಕೆಲಸದಲ್ಲಿ ತೊಡಗಿರುತ್ತದೆ. ಹೊನಲು ತಂಡವು ಒಂದು ತಿಂಗಳ ಕಾಲ ಗಿಡ ನೆಡುವ ಅಭಿಯಾನವನ್ನು ನಡೆಸಿದೆ. ಹಾಗೆ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ. ಪ್ರತಿಯೊಂದು ಜಿಲ್ಲೆಯಲ್ಲಿ ಸ್ಥಳೀಯವಾಗಿ ಪರಿಸರ ಬಗ್ಗೆ ಜಾಗೃತಿ ಮತ್ತು ಪರಿಸರ ಕೆಲಸವಾಗಬೇಕಿದೆ. ಈ ಹಸಿರು ಒನಲು ತಂಡವು ೩೦,೦೦೦ ಗಿಡಗಳನ್ನು ನೆಟ್ಟು ಬೆಳೆಸಿ ದೊಡ್ಡ ಮರವಾಗಳಾಗಿವೆ. ಈ ತಂಡವು ಕೇವಲ ಪರಿಸರಕ್ಕೆ ಸೀಮಿತವಾಗದೆ ಗೋವುಗಳ ರಕ್ಷಣೆ ಪ್ರತಿನಿತ್ಯ ಪಾರ್ಕುಗಳ ಅಭಿವೃದ್ಧಿಗಳಿಗೆ ಶ್ರಮಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬ ನಾಗರೀಕನು ಪರಿಸರ ಮನೋಭಾವನೆ ಬೆಳೆಸಿಕೊಂಡರೆ ಕೊಟ್ಟೂರು ಪಟ್ಟಣವು ಹಸಿರು ಪಟ್ಟಣವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಸ್ತುತರಾದ ಕುಂ. ವೀರಭದ್ರಪ್ಪ, ದೇವರ ಮನೆ ಕೊಟ್ರೇಶ್, ನಿರ್ಮಲಾ ಶಿವನಗುತ್ತಿ, ಶಿವನಗುತ್ತಿ, ಹಸಿರು ಹೊನಲು ಸಂಸ್ಥೆಯ ಅಧ್ಯಕ್ಷ ಗುರುರಾಜ್ ಎಸ್, ಉಪಾಧ್ಯಕ್ಷರಾದ ಬಿ ಆರ್ ವಿಕ್ರಂ ಕುಮಾರ್, ನಿರೂಪಣೆ ಕಾವ್ಯ, ಪ್ರಾಸ್ತಾವಿಕ ನುಡಿ ಡಾ. ಸತೀಶ್ ಪಾಟೀಲ್, ಸ್ವಾಗತ ನಾಗರಾಜ್ ಬಂಜಾರ್, ವಂದನ ಅರ್ಪಣೆ ನವೀನ್ ಕುಮಾರ್ ನೆರವೇರಿಸಿದರು. ಎನ್‌ಸಿಸಿ ವಿದ್ಯಾರ್ಥಿಗಳು, ಹಸಿರು ಹೊನಲು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*