ಮಸ್ಕಿ : "ಪಿ.ಎಂ.ಶ್ರೀ ಧನಗರವಾಡಿ ಸರಕಾರಿ ಶಾಲೆಯಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆ

 

ಮಸ್ಕಿ : ಪಟ್ಟಣದ ಪಿ.ಎಂ.ಶ್ರೀ ಧನಗರವಾಡಿ ಸರಕಾರಿ ಶಾಲೆ ಹಾಗೂ ನಮ್ಮ ಕ್ಲಿನಿಕ್ ಸಂಯೋಗದಲ್ಲಿ ಶಾಲೆಯ ಆವರಣದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ.ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ ಎಂದು ಧನಗರವಾಡಿ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಕಾಂತಮ್ಮ ಜಂಗಮರಹಳ್ಳಿ ರವರು ಹೇಳಿದರು.

ನಮ್ಮ ಕಿನ್ಲಿಕ್ ಸಿಬ್ಬಂದಿ ವರ್ಗದ ಶಶಿ ರೇಖಾ ರವರು ಮಾತನಾಡಿ, ಮಾನವೀಯ ಮೌಲ್ಯಗಳಲ್ಲಿ ನಾವು ಅರಳುವಂತೆ ಮಾಡುವ ಅತ್ಯುತ್ತಮ ಸಾಧನವೆಂದರೆ ಯೋಗ ಎಂದು ಹೇಳಿದರು.

ಶಿಕ್ಷಕರಾದ ಸಿದ್ದಯ್ಯ ಹಿರೇಮಠ ಹಾಗೂ ಮಧು ಮತಿ ರವರು ಯೋಗವನ್ನು ಅಭ್ಯಾಸ ಮಾಡಿಸಿದರು. ಯೋಗದಿಂದ ಆಗುವ ಲಾಭಗಳನ್ನು ತಿಳಿಸಿ ಯೋಗದ ವಿವಿಧ ವಿಧಾನಗಳನ್ನು ತಿಳಿಸಿದರು.

ಇದೇ ವೇಳೆಯಲ್ಲಿ ಶಿಕ್ಷಕರಾದ ಬಸವರಾಜ, ಶಿವಾನಂದ,ನಮ್ಮ ಕ್ಲಿನಿಕ್ ಸಿಬ್ಬಂದಿಗಳಾದ ನಿಂಗಮ್ಮ, ಯಮನೂರ.ಎಚ್. ಜಿ,ಸೇರಿದಂತೆ ಶಾಲೆ ಶಿಕ್ಷಕರು,ಮಕ್ಕಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*