ಕಳಪೆ ಕಾಮಗಾರಿ,ಲೋಕಾಯುಕ್ತಕ್ಕೆ ದೂರು ಕ್ರಮ ಯಾವಾಗ ? : ಶರಣ ಬಸವ

 

ಮಸ್ಕಿ : ತಾಲ್ಲೂಕಿನ ಮುದಬಾಳ ಕ್ರಾಸ್ – ಮಾರಲದಿನ್ನಿನಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಸಾರ್ವಜನಿಕರಾದ ಶರಣಬಸವ ಕಾಟಗಲ್ ಎಂಬವರು 18/10/2022 ರಂದು ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲು.

ಹೌದು ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ರಸ್ತೆ ಡಾಂಬರು ಹಾಕಿದ ದಿನವೇ ಕಿತ್ತು ಹೋಗಿದೆ.ಪಂಚಾಯತ್ ರಾಜ್ ಇಲಾಖೆ ಎಂಜಿನಿಯರಿಂಗ್‌ ವಿಭಾಗದಿಂದ ಬಿಆರ್‌ಜಿಎಫ್ ಯೋಜನೆ ₹1.60 ಕೋಟಿ ವೆಚ್ಚದಲ್ಲಿ 4.5 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ರಾಯಚೂರು ಮೂಲದ ನರಸರೆಡ್ಡಿ ಎನ್ನುವರು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ.

ಕಳಪೆ ಕಾಮಗಾರಿಯ ಕಾರಣಕ್ಕೆ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಕಾಟಗಲ್, ಉಸ್ಕಿಹಾಳ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಕಾಮಗಾರಿ ಬಂದ್ ಮಾಡಿಸಿ ರಸ್ತೆ ಮೇಲೆಯೇ ಹೋರಾಟ ಮಾಡಿದರು.

ಎಫ್.ಶಿವಕುಮಾರ್ ಸಹಾಯಕ ಕಾರ್ಯಪಾಲಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಲಿಂಗಸ್ಗೂರು ಇವರು ಅಪರ ನಿಭಂದಕರು ವಿಚಾರಣೆಗಳು -5

ಕರ್ನಾಟಕ ಲೋಕಾಯುಕ್ತರು ಬೆಂಗಳೂರು ಇವರಿಗೆ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗಿಲ್ಲ ಎಂದು ವರದಿ ಸಲ್ಲಿಸಿದ್ದಾರೆ.

ದೂರಿನ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಿದರು. ಆದರೆ ಯಾವ ಹಂತದಲ್ಲಿದೆ ಎಂಬುದು ಗೌಪ್ಯ ವರದಿಯಾಗಿದೆ.ಕ್ಷೇತ್ರದಲ್ಲಿ ಈ ರೀತಿಯಲ್ಲಿ ಇನ್ನೂ ಎಷ್ಟು ಕಾಮಗಾರಿಗಳು ಇವೆ 

ರೀತಿಯಲ್ಲಿ ನಡೆಯುತ್ತವೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಲೇ ಸವಾರಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಕ್ಷೇತ್ರದಲ್ಲಿ ಬರುವ ಅನೇಕ ರೀತಿಯ ಕಾಮಗಾರಿಯ ಗುಣಮಟ್ಟದ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ.

ಲೋಕಾಯುಕ್ತ ತನಿಖೆಯಲ್ಲಿದೆ ಎಂದು ಉಪಲೋಕ್ಎಲ್ ಬಿ 4171 ಎಂಬ ಲೋಕಾಯುಕ್ತ ದೂರಿನ ಅರ್ಜಿಯ ಸ್ಥಿತಿಯು ಹೇಳಲ್ಪಟ್ಟಿದೆ. ಒಮ್ಮೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದ್ದು, ಅರ್ಜಿದಾರರ ಮುಖೇನ ಕಾಮಗಾರಿ ಪರಿಶೀಲನೆ ನಡೆಸಿದ್ದು ಮತ್ತೊಮ್ಮೆ ಅರ್ಜಿದಾರ ಶರಣಬಸವ ಕಾಟಗಲ್ ಅವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಬೆಂಗಳೂರು ಲೋಕಾಯುಕ್ತ ಕಚೇರಿ ಮೂಲಗಳು ತಿಳಿಸಿವೆ ಹಾಗೆಯೇ ಅಂದಿನ ಕಾಮಗಾರಿ ಗುತ್ತಿಗೆದಾರರಾದ ನರಸರೆಡ್ಡಿ ರಾಯಚೂರು ಅವರ ಲೈಸನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಮತ್ತು ಸಹಾಯಕ ಕಾರ್ಯಪಾಲಕ ಎಫ್ ಶಿವಕುಮಾರ್ ಹಾಗೂ ಕಿರಿಯ ಇಂಜಿನಿಯರ್ ತ್ರಿವೇಣಿ ರವರ ಮೇಲೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯರಾದ ಶರಣ ಬಸವ ಕಾಟಗಲ್ ಪತ್ರಿಕೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*