ವನಸಿರಿ ವತಿಯಿಂದ ಪರಿಸರ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳಿಗೆ 500 ಗಿಡ ವಿತರಣೆ
ಮಸ್ಕಿ : ನಗರದ ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ವನಸಿರಿ ಪೌಂಡೇಷನ್ ಪೌಂಡೇಷನ್(ರಿ)ರಾಜ್ಯ ಘಟಕ ರಾಯಚೂರು ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಹಬ್ಬ ಹಾಗೂ ವಿದ್ಯಾರ್ಥಿಗಳಿಗೆ 500 ಸಸಿ ವಿತರಣೆಯ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಸಸಿ ನೆಟ್ಟು ನೀರುಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ನಂತರ ಮಾತನಾಡಿ ಮರ ದೇವನಿತ್ತ ವರ ಮರದ ರಕ್ಷಣೆ ಮಹಾದೇವನ ರಕ್ಷಣೆ ಮಾಡಿದಂತೆ ಎನ್ನುವ ಕೊಪ್ಪಳದ ಗವಿ ಶ್ರೀಗಳ ಒಂದು ಅಮೃತ ವಾಣಿಯಂತೆ ಗಿಡ ಮರಗಳನ್ನು ಉಳಿಸಿ ಬೆಳಸುವ ಮೂಲಕ ಹಸಿರುಕರಣ ಮಾಡಿ ಮಹಾದೇವನ ಕೃಪೆಗೆ ಪಾತ್ರರಾಗೋಣ. ನಾವುಗಳೆಲ್ಲರೂ ಪ್ರತಿಯೊಂದು ಹುಟ್ಟುಹಬ್ಬದ,ಮದುವೆ ಇನ್ನಿತರ ಸಮಾರಂಭಗಳಲ್ಲಿ ಸಸಿಗಳನ್ನು ನೆಟ್ಟು ಆಚರಿಸಬೇಕು.ಅದೇರೀತಿ ರಕ್ಷಾ ಬಂಧನ ಬಂದಾಗ ಗಿಡಗಳಿಗೆ ರಾಖಿ ಕಟ್ಟಿ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು.ಇಲ್ಲದ್ದಿದ್ದರೆ ಆಧುನಿಕತೆಯ ಭರಾಟೆಯಲ್ಲಿ ಪರಿಸರ ವಿನಾಶದತ್ತ ಸಾಗುತ್ತದೆ.ನಾವುಗಳೆಲ್ಲರೂ ಈಗಿನಿಂದಲೇ ಒಂದು ಪ್ರತಿಜ್ಞೆ ಮಾಡೋಣ ಸಾಲುಮರದ ತಿಮ್ಮಕ್ಕನ ಆರ್ಶಿವಾದದೊಂದಿಗೆ ಮಗುವಿಗೊಂದರಂತೆ ಮನೆಗೊಂದು ಗಿಡಮರಗಳನ್ನು ಬೆಳೆಸೋಣ ಎಂದು ತಿಳಿಸಿದರು.
ಇದೇವೇಳೆ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಕಿರು ನಾಟಕ ಪ್ರದರ್ಶಿಸಲಾಯಿತು.ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಗುವಿಗೊಂದರಂತೆ 500 ಸಸಿಗಳನ್ನು ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಎಸ್ ಡಿ ಎಂ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ ನ್ಯಾಯನೆಗಲಿ,ಚಂದ್ರಶೇಖರ, ಉಮಾಕಾಂತ ಹಳ್ಳಿ,ಪರಿಸರ ಪ್ರೇಮಿಗಳಾದ ಅಮರೇಶ ಪತ್ತಾರ ಬಳಗಾನೂರ,ಶ್ರೀಧರ, ರಾಜು ಪತ್ತಾರ,ಚನ್ನಪ್ಪ ಕೆ ಹೊಸಹಳ್ಳಿ,ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ