ಮಳೆ ಬಂದರೆ ವಿನಾಕಾರಣ ವಿದ್ಯುತ್ ಕಡಿತ ದಲಿತ ವಿದ್ಯಾರ್ಥಿ ಪರಿಷತ್ ಮನವಿ ಸಲ್ಲಿಕೆ

 

ಮಸ್ಕಿ : ತಾಲೂಕಿನ ಮೆದಿಕಿನಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ವಿನಾಕಾರಣ ಪದೇ ಪದೇ ವಿದ್ಯುತ್ (ಕರೆಂಟ್) ಸರಬರಾಜು ವ್ಯವಸ್ಥೆಯನ್ನು ಕಡಿತಗೊಳಿಸುತ್ತಿದ್ದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಮೆದಿಕಿನಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ವಿನಾಕಾರಣ ಪದೇ ಪದೇ ವಿದ್ಯುತ್ (ಕರೆಂಟ್) ಸರಬರಾಜು ವ್ಯವಸ್ಥೆಯನ್ನು ಕಡಿತಗೊಳಿಸುತ್ತಿದ್ದು,ಈ ಭಾಗದ ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲಿ ಓದಲು ಬಹಳ ಕಷ್ಟವಾಗಿರುತ್ತದೆ. ಅಲ್ಲದೇ ರಾತ್ರಿ ಸಮಯದಲ್ಲಿ ಊರಿನ ಜನರು, ವೃದ್ಧರು, ವಿದ್ಯಾರ್ಥಿಗಳು ನಡೆದಾಡಲು ಕಷ್ಟವಾಗಿರುತ್ತದೆ. ವಿದ್ಯುತ್ ಸಮಸ್ಯೆಯಿಂದ ಯಾವುದೇ ರೀತಿಯ ಆನ್‌ಲೈನ್ ಕೆಲಸಗಳು ಮತ್ತು ಇನ್ನಿತರೇ ಕೆಲಸ ಕಾರ್ಯಗಳು ಆಗುತ್ತಿಲ್ಲ.

ಅಲ್ಲದೇ, ಮಳೆ ಬಂದಿದೆ ಎಂದು ತಿಳಿದರೆ ಸಾಕು. ವಿನಾ ಕಾರಣ ನೀಡಿ ಮೇನ್ ಲೈನ್ ಪಾಲ್ಟ್ ಇದೆ ಎಂದು ಸುಖಾ ಸುಮ್ಮನೆ ವಿದ್ಯುತ್ ತೆಗೆಯುವುದರಿಂದ ಇಂದಿನ ತಂತ್ರಜ್ಞಾನ ಬ್ಯಾಟರಿ ಮೇಲೆ ಕೆಲಸ ಮಾಡುತ್ತೆ, ಅದರಲ್ಲೂ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ನಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಆನ್ಲೈನ್ ಕ್ಲಾಸಸ್ ಮತ್ತು ಇನ್ನಿತರೆ ಕಚೇರಿ ಕೆಲಸ ಮಾಡಲು ವಿದ್ಯುತ್ ಕಡಿತ ಬಹಳ ತೊಂದರೆಯನ್ನುಂಟು ಮಾಡಿದೆ. ಆದ್ದರಿಂದ ಇದನ್ನು ಮನಗಂಡು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ, ಕಚೇರಿ ಸಿಬ್ಬಂದಿಗಳಿಗೆ ಹಾಗೆಯೇ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗಿ ಪರಿಣಮಿಸಿದ್ದು ವಿದ್ಯುತ್ ಕಡಿತ ಮಾಡದೇ, ಕೂಡಲೇ ಸರಿಪಡಿಸಿ ಅನುಕೂಲ ಮಾಡಿ ಕೊಡಬೇಕು. ಇಲ್ಲವಾದರೆ ನಿಮ್ಮ ಕಚೇರಿಯ ಮುಂಭಾಗದಲ್ಲಿ ನಮ್ಮ ಸಂಘಟನೆಯ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ಇರಕಲ್ ಇವರು ವೆಂಕಟೇಶ ಸಹಾಯಕ ಕಾರ್ಯಪಾಲಕ ಅಭಿಯಂತರರು ಜೆಸ್ಕಾಂ ಇಲಾಖೆ ಮಸ್ಕಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*