ತಲೇಖಾನ್ : ವಸತಿ ಹಂಚಿಕೆ ಗೋಲ್ಮಾಲ್ ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರ ಭೇಟಿ

 

ವರದಿ : ಗ್ಯಾನಪ್ಪ ದೊಡ್ಡಮನಿ 

ಮಸ್ಕಿ : ತಾಲೂಕಿನ ತಲೇಖಾನ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 200 ಮನೆಯ ಅಕ್ರಮ ಮಂಜೂರು ಮಾಡಿದ ಪಟ್ಟಿ ರದ್ದು ಪಡಿಸಬೇಕು ಎಂಬ ತನಿಖಾ ಸಭೆಯಲ್ಲಿ ಮಾತನಾಡಿದ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ಆದ ಉಸ್ಮಾನ್ ಪಾಷಾ ಇವರು ರಾಜ್ಯದಲ್ಲಿ ನೂತನ ವಸತಿ ನಿರ್ಮಾಣಕ್ಕೆ ನಿಗಮದಲ್ಲಿ 2 ಸಾವಿರ ಕೋಟಿ ಹಣವಿದ್ದು ಬರೀ 125 ಕೋಟಿ ಖರ್ಚು ಮಾಡಲಾಗಿದೆ ಸದ್ಭಳಕೆ ಮಾಡಿಕೊಳ್ಳಿ. ಸಭೆಯ ಸ್ಥಳದಲ್ಲಿಯೇ 412 ಮನೆ ಪಟ್ಟಿಯನ್ನು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ವಾರ್ಡ್ ವಾರು ಪಟ್ಟಿ ವಿತರಿಸಿದರು.

ಮಸ್ಕಿ ತಾಲೂಕಿಗೆ 7241 ಮನೆ ಬಂದಿದ್ದು 2 ಸಾವಿರ ಮನೆ ಮಾತ್ರ ಮಂಜೂರು ಮಾಡಲಾಗಿದೆ ಎಂದು ತನಿಖಾ ವಿಷಯದ ಬಗ್ಗೆ ಸಭೆಯಲ್ಲಿಯೇ ಶಾಂತ ರೀತಿಯಲ್ಲಿ ತಿಳಿಸಿದರು.

ನಂತರ ಮದ್ಯಾಹ್ನದ ಊಟ ಆದ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಬಾಯಿ ಸಿಬ್ಬಂದಿ ಮತ್ತು ಮಸ್ಕಿ ಠಾಣೆಯ ರಂಗಯ್ಯ ಕೆ ಮತ್ತು ಸಿಬ್ಬಂದಿ ಹಾಗೂ ರಿಸರ್ವ್ ಪೊಲೀಸರ ತಂಡದ ಸಹಕಾರದೊಂದಿಗೆ ಯರದೊಡ್ಡಿ ಗ್ರಾಮಕ್ಕೆ ತೆರಳಿ 200 ಮನೆಯಲ್ಲಿನ ಫಲಾನುಭವಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ಸಂದರ್ಭದಲ್ಲಿ ಮೊದಲ ಮನೆ ಪರಿಶೀಲನೆ ಮಾಡಿದಾಗ ಮಂಜುರಿಗೆ ಮೊದಲೇ ಮನೆ ಕಟ್ಟಿದ್ದು ಈಗ ಪ್ರಸ್ತುತ ಮನೆ ಮಂಜೂರು ಪಟ್ಟಿಯಲ್ಲಿ ಮನೆ ಮಾಲಿಕೆಯ ಹೆಸರಿದೆ, 10 ರಿಂದ 20 ಸಾವಿರ ಹಣ ಕೊಟ್ಟವರಿಗೆ ಮನೆ,ಮನೆ ಇದ್ದವರಿಗೆ ಮನೆ, ಗ್ರಾಮ ಪಂಚಾಯತ್ ವಸತಿ ಮಂಜೂರು ಪಟ್ಟಿಯಲ್ಲಿ ಫಲಾನುಭವಿ ಹೆಸರಿದೆ ನೋಡಲ್ ಅಧಿಕಾರಿಯ ಲಾಗಿನ್ ಅಲ್ಲಿ ಫಲಾನುಭವಿ ಹೆಸರಿಲ್ಲ, ಇದನ್ನು ಮನಗಂಡ ಉಪ ನಿರ್ದೇಶಕರು ಒಂದು ಕ್ಷಣ ಶಾಕ್ ಸಾರ್ವಜನಿಕರು ಈ ಎಲ್ಲಾ ವಿಷಯದ ಕುರಿತು ಮಾತಿನ ಚಕಮಕಿಯೂ ನಡೆಯಿತು. ಮನೆಗೆ ಹೋದಲ್ಲೆಲ್ಲಾ ನಮಗೆ ಮನೆ ಹಾಕಿಲ್ಲ ನಿಮಗೆ ಮನೆ ಹಾಕಿಲ್ಲ ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿದರೆ ಇವಾಗ ಪರಿಶೀಲನೆ ಮಾತ್ರ ಮನೆ ಮಂಜೂರು ವಿಷಯ ಆಮೇಲೆ ಎಂದು ಮುಂದೆ ನಡೆದರು. ದಿನಾಂಕ 12 -08- 2025 ರ ಉಲ್ಲೇಖಿತ ಪತ್ರದಲ್ಲಿ ಮಸ್ಕಿ ತಾಲೂಕಿನ ತಲೇಖಾನ ಗ್ರಾಮ ಪಂಚಾಯಿತಿಗೆ 2024-25ನೇ ಸಾಲಿಗೆ ಡಾ||ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 100 ಹಾಗೂ ಬಸವ ವಸತಿ ಯೋಜನೆಯಡಿ 100 ಹೆಚ್ಚುವರಿ ಮನೆಗಳು ಮಂಜೂರಾಗಿದ್ದು ಸದರಿ ಮನೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಪಂಚಾಯತಿಯ ಗ್ರಾಮಸಭೆ ಇಲ್ಲದೇ, ಸದಸ್ಯರ ಗಮನಕ್ಕೆ ಇಲ್ಲದೇ, ಅರ್ಹ ಫಲಾನುಭವಿಗಳನ್ನು ನಿರ್ಲಕ್ಷಿಸಿ, ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿ, ತಲೇಖಾನ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಪಟ್ಟಿಯನ್ನು ತನಿಖೆ ಮಾಡಿ ಅರ್ಹ ಫಲಾನುಭವಿಗಳಗೆ ಮನೆಗಳನ್ನು ಕಲ್ಪಿಸಬೇಕೆಂದು ದೂರು ಅರ್ಜಿ ನಿಗಮಕ್ಕೆ ಸಲ್ಲಿಕೆಯಾಗಿರುತ್ತದೆ, ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ಒಂದು ತನಿಖಾ ತಂಡವನ್ನು ರಚಿಸಿ, ತಂಡವು ಸಲ್ಲಿಸುವ ವರದಿಯಲ್ಲಿ ನಿಯಮಬಾಹಿರವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಂಡು, ಕ್ರಮದ ಮಾಹಿತಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಪತ್ರ ತಲುಪಿದ 15 ದಿನಗಳೊಳಗಾಗಿ ಸಲ್ಲಿಸಲು ತಿಳಿಸಿರುತ್ತಾರೆ.ಪ್ರಯುಕ್ತ, ಸದರಿ ದೂರಿನ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಈ ಕೆಳಕಂಡಂತೆ ತನಿಖಾ ತಂಡವನ್ನುರಚಿಸಲಾಗಿದೆ.ತನಿಖಾ ತಂಡದ ಅಧಿಕಾರಿಗಳಾದ ಉಪ ನಿರ್ದೇಶಕರು, ಕೃಷಿ ಇಲಾಖೆ, ರಾಯಚೂರು,ಸಹಾಯಕ ನಿರ್ದೇಶಕರು (ಪಂ.ರಾಜ್), ತಾಲೂಕ ಪಂಚಾಯತಿ ಸಿಂಧನೂರು,ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿಂಧನೂರು ಈ ತನಿಖಾ ತಂಡವು ಉಲ್ಲೇಖಿತ ದೂರಿನಲ್ಲಿರುವ ಅಂಶಗಳ ಕುರಿತು ಸ್ಥಾನಿಕ ಪರಿಶೀಲನೆ ನಡೆಸಿ ಎಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಚೂರು ಇವರು ಆದೇಶ ಹೊರಡಿಸಿದ್ದರು. ಆ ತನಿಖೆ ಏನಾಯಿತು ? ಮತ್ತು ಅವರ ವರದಿಯಲ್ಲಿ ಏನಿತ್ತು? ಈಗ ಉಪ ನಿರ್ದೇಶಕರು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರು ಸಭೆ ನಡೆಸಿ ಮನೆ ಮನೆಗೆ ಭೇಟಿ ಮಾಡುತ್ತಿರುವ ವರದಿ ಏನು? ಎಂದು ಒಂದು ತಿಳಿಯುತ್ತಿಲ್ಲ ಒಂದು ರೀತಿಯಲ್ಲಿ ನಮ್ಮ ಅರ್ಜಿ ಸಲ್ಲಿಕೆಯಲ್ಲಿರುವ ಒಂದು ವಿಷಯವಾದರೆ ಪರಿಶೀಲನೆ ರೀತಿ ನೋಡಿದರೆ ಯಾಕೋ ತನಿಖೆಯ ಹಂತ ಹಳ್ಳ ಹಿಡಿಯುವ ರೀತಿಯಾಗಿ ಕಾಣುತ್ತಿದೆ ಹಾಗೆಯೇ ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಅಧಿಕಾರಿಗಳು ಅಂದಿನ ದಿನ ವಸತಿ ಮಂಜೂರು ಮಾಡಲು ಪ್ರಮುಖವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಜಿಲ್ಲಾಪಂಚಾಯತ್ ನೋಡಲ್ ಅಧಿಕಾರಿ ಗಳ ಲಾಗಿನ್ ಗೆ ಹೋಗಿಯೇ ಮುಂದಿನ ಕಾರ್ಯಕ್ಕೆ ತೆರಳುವ ಪ್ರಕ್ರಿಯೆ ವಾಡಿಕೆ ಇವರಿಗೆ ಮಾಹಿತಿ ಇದ್ದು ಮಂಜೂರು ಮಾಡಿದ್ದಾರೆಯೇ ಹಾಗಾದರೆ ಲಕ್ಷಾಂತರ ರೂಪಾಯಿಯ ಹೊಳೆಯೇ ಹರಿದಿದೆ ಎಂಬುದು ಮಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮೌನೇಶ್ ರಾಠೋಡ್ ಅವರು ಪತ್ರಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*