ಹಗಲು-ರಾತ್ರಿ ಎನ್ನದೇ ಸರ್ವೆ ಮಾಡಿ ಐದೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಪಿ.ಎಂ.ಶ್ರೀ ಧನಗರವಾಡಿ ಶಾಲೆಯ ಅತಿಥಿ ಶಿಕ್ಷಕ ಸಿದ್ದಯ್ಯ ಹಿರೇಮಠ
ಮಸ್ಕಿ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಆರಂಭವಾಗಿದ್ದು, ನೆಟ್‌ವರ್ಕ್ ಸಮಸ್ಯೆ, ಸರ್ವರ್ ಸಮಸ್ಯೆ ಮಧ್ಯೆ ಶಿಕ್ಷಕರು ನಿಧಾನಕ್ಕೆ ಸರ್ವೆ ಮುಗಿಸುತ್ತಿದ್ದಾರೆ. ಸಿಟಿಗಳಲ್ಲೇ ಜನರು ಸರ್ವೆಗೆ ಸರಿಯಾಗಿ ಸ್ಪಂದನೆ ನೀಡದೇ ಇರುವುದು, ನಾಳೆ ಬನ್ನಿ ಎನ್ನುವುದು, ಒಟಿಪಿ ಹೇಳಲು ಹೆದರುತ್ತಿದ್ದಾರೆ.
ಈ ಸಮಸ್ಯೆಗಳ ಮಧ್ಯೆ ಶಿಕ್ಷಕರಯೊಬ್ಬರು ಬರೀ ಐದೇ ದಿನಗಳಲ್ಲಿಯೇ ಸರ್ವೆ ಮುಗಿಸಿದ್ದಾರೆ. ಸಿಟಿಗಳಲ್ಲಿ ಶಿಕ್ಷಕರಿಗೆ 121 ಮನೆಗಳ ಟಾರ್ಗೆಟ್ ನೀಡಲಾಗಿದೆ. ಈ ಟಾರ್ಗೆಟ್‌ನ್ನು ಮಸ್ಕಿ ಪಟ್ಟಣದ ಗಾಂಧಿ ನಗರದಲ್ಲಿ ಅತಿಥಿ ಶಿಕ್ಷಕರಾದ ಸಿದ್ದಯ್ಯ ರವರು ಮುಗಿಸಿದ್ದಾರೆ.
ಇಡೀ ಪಟ್ಟಣದಲ್ಲಿ ಸರ್ವೆ ಮುಗಿಸಿದ ಮೊದಲ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಟ್ಟಣದ ಶಿಕ್ಷಕ ಸಿದ್ದಯ್ಯ ಅವರು ಮೊದಲ ದಿನ ಸರ್ವೆ ಮಾಡಲಾಗದೆ ಒದ್ದಾಡಿದ್ದಾರೆ. ಇಡೀ ದಿನಕ್ಕೆ ಕೇವಲ ಒಂದು ಸರ್ವೆ ಮಾತ್ರ ಪೂರ್ಣಗೊಂಡಿದೆ. ಆದರೆ ನಂತರ ಸರ್ವೆ ಸರಾಗವಾಗಿ ನಡೆದಿದೆ. ಜನ ಕೆಲಸಕ್ಕೆ ಹೋಗಿಬಿಡುತ್ತಾರೆ. ಇನ್ನು ಸಿಗುವುದು ರಾತ್ರಿಯೇ! ಹಾಗಾಗಿ ಅತಿಥಿ ಶಿಕ್ಷಕರಾದ
ಸಿದ್ದಯ್ಯ ರವರು ಜನ ಕೆಲಸಕ್ಕೆ ಹೊರಡುವ ಮುನ್ನ, ಕೆಲಸದಿಂದ ಬಂದ ನಂತರ, ಹೀಗೆ ಹಗಲು ರಾತ್ರಿ ಎನ್ನದೇ ಸರ್ವೆ ಮುಗಿಸಿದ್ದಾರೆ.
ನಾನು ಪಿ.ಎಂ.ಶ್ರೀ ಸರ್ಕಾರಿ ಪ್ರಾಥಮಿಕ ಶಾಲೆ ಧನಗರವಾಡಿ ಶಾಲೆಯ ಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡ್ತಿದ್ದೇನೆ. ಹಗಲು ಹೊತ್ತು ಸರ್ವರ್ ಸಿಗ್ತಿರಲಿಲ್ಲ, ರಾತ್ರಿ ಹೊತ್ತು ಸುಲಭವಾಗಿ ಸರ್ವರ್ ಲಭ್ಯ ಇರುತ್ತಿದ್ದರಿಂದಾಗಿ ರಾತ್ರಿ ಹೊತ್ತು ಮನೆಗಳಿಗೆ ತೆರಳಿ ಮಧ್ಯ ರಾತ್ರಿ ಜನ ಸಹಕರಿಸಿ ಮಾಹಿತಿ ನೀಡ್ತಿದ್ದರು. ಸರ್ಕಾರ ನೀಡಿದ ಜವಾಬ್ದಾರಿ ಯನ್ನು ಪ್ರಮಾಣವಾಗಿ ನಿಭಾಯಿಸಿದ್ದೇನೆ. ಸಮೀಕ್ಷೆ ಮಾಡುವ ವೇಳೆ ಸಮಸ್ಯೆ ಆಯ್ತು, ಆದರೆ ಸಮಸ್ಯೆ ಇಲ್ಲದ ಕೆಲಸ ಇಲ್ವಲ್ಲ ಎಂದು ಸಮೀಕ್ಷೆ ಮಾಡಿದ್ದೇನೆ ಎಂದಿದ್ದಾರೆ.
ಅದೇ ರೀತಿ ಅತಿಥಿ ಶಿಕ್ಷಕರಾದ ಸ.ಹಿ.ಪ್ರಾ.ಶಾಲೆ ರಂಗಾಪೂರ ಸುವರ್ಣಪ್ಪ ಸಾನಬಾಳ ಸ.ಹಿ.ಪ್ರಾ.ಶಾಲೆಯ ಮಂಜುನಾಥ ತಮ್ಮ ಗೆ ನೀಡಿದ ಗಣಿತ ಕಾರ್ಯ ಮುಗಿಸಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ