*SDMC, ಸದಸ್ಯರಿ ಗೆ ಪಟ್ಟಣ ಹಾಗೂ ಹಳ್ಳಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಜರಿಗೆ ಜಾಗೃತಿ ಮೂಡಿಸಿ, ಗುನ್ನಳ್ಳಿ ರಾಘವೇಂದ್ರ*

ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮೇಲ್ ಉಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕು ಘಟಕದ ವತಿಯಿಂದ ತಾಲೂಕಿನ ಎಸ್ಡಿಎಂಸಿ ಸದಸ್ಯರಿಗೆ ಪೂರ್ವಭಾವಿ ಸಭೆ ಆಯೋಜನೆ. ಈ ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡ ವಿರುಪಾಕ್ಷಪ್ಪ ವಕೀಲರು ಭಾಗವಹಿಸಿ ಮಾತನಾಡುತ್ತ ಎಲ್ಲರೂ ಸೇರಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವಂತಹ ಕೆಲಸ ಎಸ್ಡಿಎಂಸಿ ಅಧ್ಯಕ್ಷರಿಗೆ ಇದೆ. ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸುವುದರ ಬಗ್ಗೆ ನಾವುಗಳು ಯೋಚನೆ ಮಾಡಬೇಕು,ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಜಿಲ್ಲಾಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ ಮಾತನಾಡಿ ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಹೆಚ್ಚಾಗಿದೆ. ಈ ಹಾವಳಿಯನ್ನು ತಪ್ಪಿಸಬೇಕೆಂದರೆ ನಮ್ಮ ಪಟ್ಟಣ ಹಾಗೂ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ನಾವು ಎಸ್ ಡಿಎಂ ಸಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಶಾಲೆಯ ಅಭಿವೃದ್ಧಿಯತ್ತ ಸಾಗೋಣ ಎಂದು ತಿಳಿಸುತ್ತ ಶಾಲೆಯ ಅಧ್ಯಕ್ಷರಾಗಬೇಕೆಂದರೆ ಪುಣ್ಯದ ಕೆಲಸ ನಾವು ಮಕ್ಕಳ ಮನಸ್ಸಲ್ಲಿ ಉಳಿವಂತ ಒಳ್ಳೆಯದನ್ನು ಮಾಡಿದರೆ ಮುಂದೊಂದು ದಿನ ಆ ಮಕ್ಕಳು ನಮ್ಮನ್ನು ಒಳ್ಳೆಯ ಕೆಲಸದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ಸೌಲಭ್ಯಗಳು ಇವೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅಲ್ಲ ನಮ್ಮ ಹಳ್ಳಿಗಳಲ್ಲಿ ಜನರಿಗೆ ಹೇಳಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಸಬೇಕೆಂದು ತಿಳಿಸಿದರು‌. ತಾಲೂಕಿನ ಎಲ್ಲಾ ಎಸ್‌ಡಿಎಂಸಿ ಅಧ್ಯಕ್ಷರು ತಮ್ಮ ತಮ್ಮ ಶಾಲೆಯಲ್ಲಿ ಶೌಚಾಲಯ, ಆಟದ ಮೈದಾನ, ಕುಡಿಯುವ ನೀರಿನ ಸಮಸ್ಯೆ ಶಿಕ್ಷಕರ ಕೊರತೆ, ಮಕ್ಕಳಿಗೆ ಮಕ್ಕಳಿಗೆ ಒಳ್ಳೆ ಗುಣಮಟ್ಟದ ಶೂ ಖರೀದಿಸುವ ಬಗ್ಗೆ, ಕೊಠಡಿಗಳ ಮೇಲ್ಚಾವಣಿ ಬಿರ್ಕು ಬಿಟ್ಟಿರುವ ಕುಂದು ಕೊರತೆಗಳನ್ನು ಎಲ್ಲಾ ಸದಸ್ಯರು ಚರ್ಚಿಸಿದರು. ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ರಾಜ್ಯ ಕಮಿಟಿ ಸದಸ್ಯರು ಲಕ್ಷ್ಮೀದೇವಿ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಭಾಗ್ಯಮ್ಮ ಟಿ, ಕೊಟ್ಟೂರು ತಾಲೂಕ ಅಧ್ಯಕ್ಷ ಹರೀಶ್, ಜಿಲ್ಲಾ ಕಾರ್ಯದರ್ಶಿ ಹೊನ್ನೂರಪ್ಪ, ಬಣವಿಕಲ್ಲು ಎಸ್ ಡಿ ಎಂ ಸಿ ಅಧ್ಯಕ್ಷರು ಬಸವರಾಜ್, ರಾಜ್ಯ ಕಮ್ಮಿಟಿ ಸದಸ್ಯ ಮಂಜುನಾಥ್, ಆದರ್ಶ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗಣೇಶ್ ಅಂಗಡಿ, ಸೇರಿದಂತೆ ತಾಲೂಕಿನ ಎಲ್ಲಾ ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಸಮನ್ವಯ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ