*'ಕಲಾ ಸೇವಾ ರತ್ನ' ಸಿರಿ ಸಾಸಲವಾಡ ಚನ್ನವೀರ ಸ್ವಾಮಿ*

ಕೂಡ್ಲಿಗಿ:ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಾಸಲವಾಡ ಗ್ರಾಮದ ಕಲಾವಿದ ಸಿ, ಎಂ,ಚನ್ನವೀರ ಸ್ವಾಮಿ ಇವರಿಗೆ *ಕಲಾ ಸೇವಾ ರತ್ನ* ಪ್ರಶಸ್ತಿ ಲಭಿಸಿದೆ.

ಕವಿತಾ ಮೀಡಿಯಾ ಸೋರ್ಸ್ ಪ್ರೈ,ಲಿ, ಹೈ ಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಸತತ ಕಳೆದ ಐದು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿ ಸಾಧನಗೈದ ಸಾಧಕರಿಗೆ ಪುರಸ್ಕಾರ ನೀಡುತ್ತಿದ್ದು,ಸೆಪ್ಟೆಂಬರ್ 24 ರಂದು ಧಾರವಾಡದ ರಂಗಾಯಣದಲ್ಲಿ ಪರಮ ಪೂಜ್ಯ ಶ್ರೀ ಮಹೇಶ್ವರ ಮಹಾ ಸ್ವಾಮಿಗಳು,ಪುಣ್ಯಕ್ಷೇತ್ರ ನಂದಿಪುರ, ಶ್ರೀ ಸದ್ಗುರು ಗಾಡಿತಾತ ಶಿವಶರಣರು ಚೌಕಿಮಠ ಕೊಂಬಳಿ ಇವರ ಸಾನಿಧ್ಯದಲ್ಲಿ ಸುದ್ದಿವಾಹಿನಿಯ ಸಂಸ್ಥಾಪಕರಾದ ಬಿ, ಎನ್,ಹೊರಪೇಟೆ ಇವರು ಆಯೋಜಿಸಿದ್ದ ಕರುನಾಡ ಸಾಧಕರು 2023 ಕಾರ್ಯಕ್ರಮದಲ್ಲಿ ರಂಗಭೂಮಿಯ ಸಂಗೀತ ಕ್ಷೇತ್ರದಲ್ಲಿ ಸೇವೆಗೆ ಪರಿಗಣಿಸಿ ಕಲಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಂದು ಸಿ, ಎಂ, ಚನ್ನವೀರ ಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.

ಇವರಿಗೆ ಸಾಸಲವಾಡ ಸೇರಿದಂತೆ ತಾಲೂಕಿನ ಸಂಗೀತ ಕಲಾವಿದರು,ರಂಗಭೂಮಿ ಕಲಾವಿದರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಜನಪ್ರತಿನಿಧಿಗಳು,ಮೆಚ್ಚುಗೆ ವ್ಯಕ್ತಪಡಿಸಿ,ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*