ಶ್ರೀ ಕೃಷ್ಣಜನ್ಮಾಷ್ಟಮಿ ಸಂಭ್ರಮದ ಕಾರ್ಯಕ್ರಮ
ಮಸ್ಕಿ , ಶಿವಶಕ್ತಿ ಪೀಠ ಇರಕಲ್
ಮಠದಲ್ಲಿ ಶ್ರೀ ಜ್ಞಾನಾಕ್ಷಿ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಷ್ಟಾಮಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಕುರಿತು ಶ್ರೀ ಬಸವಪ್ರಸಾದ ಶರಣರು ಮಾತನಾಡುತ್ತಾ ಶ್ರೀ ಕೃಷ್ಣ ಪರಮಾತ್ಮನು ಭಾರತದ ಒಂದು ಭಾಗವಾಗಿದ್ದು, ಭಾರತದ ಚರಿತ್ರೆಯಲ್ಲಿ ಅವರ ಹೆಸರು ಪ್ರಸಿದ್ದಿ ಪಡೆದಿದೆ, ಜಗತ್ತು ವಂದಿಸುವ ವ್ಯಕ್ತಿಯಾಗಿದ್ದನು, ಯೋಗೀಶ್ವರ ಅನ್ನುವ ಪದ ಕೃಷ್ಣನನ್ನು ಹೊರೆತುಪಡಿಸಿದರೆ ಬೇರೆ ಯಾರಿಗೂ ಆ ಪದ ಇರಲಿಲ್ಲ, ಧರ್ಮದ ರಕ್ಷಣೆಗೊಸ್ಕರ ಶ್ರೀ ಕೃಷ್ಣ ಸದಾ ಜನ್ಮತಾಳುತ್ತಾನೆಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಎಂದು ಶ್ರೀ ಕೃಷ್ಣನ ಕುರಿತು ವಿವರವಾಗಿ ಶ್ರೀ ಬಸವಪ್ರಸಾದ ಶರಣರು ಹೇಳಿದರು.
ಈ ಸಂದರ್ಭದಲ್ಲಿ ಮಾತಾಜಿ ಶಾರದದೇವಿ, ಶ್ರೀಕಾಂತ್ ಪ್ರಾಚಾರ್ಯರು,ಗುಂಡರಾವ್ ಕುಲಕರ್ಣಿ, ಸಿದ್ದಾರ್ಥ ಪಾಟೀಲ್, ಪರಮೇಶ,ದೇವರಾಜ, ಹನುಮಂತ, ರವಿಶಂಕರ, ಶಿಕ್ಷಕಿಯರಾದ ಶ್ವೇತಾ ಅಮಿನಗಡ,ಉಮಾದೇವಿ,ಚಂದ್ರಕಲಾ, ಗಂಗಮ್ಮ,ಅಶ್ವಿನಿ, ಗಂಗಮ್ಮ ಟಿ, ಚಂದ್ರಕಲಾ ಟಿ,ವಿದ್ಯಾರ್ಥಿ ಪಾಲಕರು ಇದ್ದರು. ನಂತರ ಶ್ರೀ ಕೃಷ್ಣ ರಾಧೆಯರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ವಿವಿಧ ನೃತ್ಯ ಹಾಗೂ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮವೂ ಯಶಸ್ವಿಯಾಗಿ ಜರುಗಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ