ಕೊಟ್ಟೂರೇಶ್ವರ ಕಾಲೇಜಿನ |ವಿದ್ಯಾರ್ಥಿಗಳ ಜೊತೆಗೆ ಸಂವಾದ ಕಾರ್ಯಕ್ರಮ| ಇಸ್ರೋ ವಿಜ್ಞಾನಿಯಾದ ಬಿ.ಎಚ್. ಎಂ ದಾರುಕೇಶ್

ಸಾಧನೆಗೆ ಮಣ್ಣಿನ ಗುಣವೇ ಸಾಕ್ಷಿಯಾಗಿದೆ:ಬಿ.ಎಚ್. ಎಂ ದಾರುಕೇಶ್

ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ಕಾಲೇಜ್ ನ ರಾಜ್ ಭವನದಲ್ಲಿ ಕಾಲೇಜ್ ವತಿಯಿಂದ ಯಶಸ್ವಿ ಚಂದ್ರಯಾನ 3 ಸಂದೇಶ ವಾಹಕದ ರೂವಾರಿ ಇಸ್ರೋ ವಿಜ್ಞಾನಿಯಾದ ಬಿ.ಎಚ್. ಎಂ ದಾರುಕೇಶ್ ಇವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೊಟ್ಟೂರೇಶ್ವರ ಕಾಲೇಜಿನ ಅಧ್ಯಕ್ಷರಾದ ಸಿದ್ದರಾಮ್ ಕಲ್ಮಠ, ಕಾಲೇಜಿನ ಡಿಗ್ರಿ ಪ್ರಿನ್ಸಿಪಾಲ್ ಡಾ.ರವಿಕುಮಾರ್ ,ಗುಲಾಬಿ ಹೂವು ಕೊಡುವ ಮೂಲಕ ಇಸ್ರೋ ವಿಜ್ಞಾನಿಗಳಾದ ಬಿ ಎಚ್ ಎಮ್ ದ್ವಾರಕೇಶ್ ಅವರಿಗೆ ಸ್ವಾಗತಿಸಿಕೊಂಡರು.

ನಂತರ ಕಾಲೇಜಿನ ಎನ್ ಸಿ ಸಿ ಸ್ಟುಡೆಂಟ್ ಗಳಿಂದ ಮಾರ್ಚ್ ಫೋರ್ಸ್ ಗೌರವ ನೀಡಿ ಸ್ವಾಗತಿಸಿದರು .ಮತ್ತು ಕಾಲೇಜಿನ ಮಹಾದ್ವಾರಕ್ಕೆ ರಿಬ್ಬನ್ ಕತ್ತರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ದಾರಿಕೇಶ್ ಇಸ್ರೋದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದು ಸಾಧನೆಗೆ ಗುಣವೇ ಮಣ್ಣಿನ ಸಾಕ್ಷಿಯಾಗಿದೆ ಎಂದು ಭಾವಿಸಿದ್ದೇನೆ ಎಂದು ಇಸ್ರೋ ವಿಜ್ಞಾನಿಯಾದ ಬಿ ಹೆಚ್ ಎಂ ದಾರುಕೇಶ ಅಭಿವ್ಯಕ್ತಪಡಿಸಿದರು.

ಅರ್ಹತಾ ವಿದ್ಯಾರ್ಥಿಗಳು ಇಸ್ರೋಗೆ ಅರ್ಜಿಯನ್ನು ಸಲ್ಲಿಸಿ ನೀವು ಆಯ್ಕೆಯಾದರೆ ತಮಗೂ ಇಸ್ರೋದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಇಸ್ರೋದಲ್ಲಿ ಮೂರು ರೀತಿಯಾಗಿ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ನುಡಿದಂತಹ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ಧರಾಮ ಕಲ್ಮಠ ಮಾತನಾಡಿ ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಚಂದ್ರಯಾನ 3 ಸಂದೇಶ ವಾಹಕದ ರೂವಾರಿಯಾಗಿ ದಾರುಕೀಶ್ ಕಾರ್ಯ ನಿರ್ವಹಿಸಿದ್ದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು. ನಮ್ಮ ನಾಡು ನಮ್ಮ ದೇಶದ ಪ್ರತಿಭೆ ಬಿ ಹೆಚ್ ಎಂ ದಾರಕೇಶ ರವರ ಸಾಧನೆ  ಅತೀವ ಹೆಮ್ಮೆಯಾಗಿದೆ ಎಂದು ತಿಳಿಸಿದರು
ಇಸ್ರೋ ವಿಜ್ಞಾನಿಯಾದ ಬಿ.ಎಚ್.ಎಂ ದಾರುಕೀಶ್ ಅವರಿಗೆ ಕಾಲೇಜ್ ಆಡಳಿತ ವತಿಯಿಂದ ಸನ್ಮಾನಿಸಲಾಯಿತು.

ಪದವಿ ಕಾಲೇಜ್ ಪ್ರಾಂಶುಪಾಲರಾದ ಡಾ.ಎಮ್ ರವಿಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು ,ಪದವಿ ಪೂರ್ವ ಕಾಲೇಜ್ ನ  ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಕುಮಾರ್, ಪದವಿ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಪ್ರೊ ಶಾಂತಮೂರ್ತಿ ಕುಲಕರ್ಣಿ, ಸದಸ್ಯರಾದ ಶಿವಕುಮಾರ್, ಕೊಟ್ರೇಶ್, ಅಡಕಿ ಮಂಜುನಾಥ್, ಗುರುಪ್ರಸಾದ್ ಕೋರಿ ಬಸವರಾಜ್ ಮಂಜುನಾಥ್ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಶಾಂತ ಸ್ವಾಗತವನ್ನು ಪ್ರೊಫೆಸರ್ ಕೃಷ್ಣಪ್ಪ ನಿರೂಪಣೆಯನ್ನು ಉಪನ್ಯಾಸಕಿ ವಿಜಯಲಕ್ಷ್ಮಿ ನೆರವೇರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*