ವಿದ್ಯಾರ್ಥಿನಿಯರ ಕಬ್ಬಡಿ ಜಿಲ್ಲಾ ಮಟ್ಟಕೆ ಆಯ್ಕೆ

 


ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರು ತಾಲೂಕು ಮಟ್ಟದಲ್ಲಿ ಕಬ್ಬಡಿ ಪಂದ್ಯಾವಳಿಯಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಪಡೆದಿದ್ದಾರೆ.

ಗುರುವಾರ ಕೂಡ್ಲಿಗಿ ತಾಲೂಕಿನ ವಾಸವಿ ಪ್ರೌಢಶಾಲೆ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ರಾಂಪುರ ಗ್ರಾಮದ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರು ಬಡಲಡುಕು ಪ್ರೌಢಶಾಲೆ ವಿದ್ಯಾರ್ಥಿನಿಯರ ವಿರುದ್ಧ 08 ಅಂಕ ಅಂತರದಿಂದ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ದೈಹಿಕ ಶಿಕ್ಷಕರಾದ ಎಲ್. ಸಿ. ಅನಿಲ್ ಕುಮಾರ್ ರವರು ತಿಳಿಸಿದರು.

....................................................................

ಕೋಟ್.

ಭಾರತದ ಗ್ರಾಮೀಣ ಕ್ರೀಡೆಯಾದ ಕಬ್ಬಡಿ ಪಂದ್ಯವು ಅತ್ಯಂತ ಪುರಾತನವಾದದ್ದು ಈ ಕ್ರೀಡೆಯಲ್ಲಿ ಗಂಡು ಮಕ್ಕಳು ಹೆಚ್ಚು ಆಸಕ್ತಿ ಇರುವಾಗ ಇಂತಹ ಕ್ರೀಡಾ ಚಟುವಟಿಕೆಗಲ್ಲಿ ಮಹಿಳೆಯರ ಪಾತ್ರ ಇತ್ತೀಚಿಗೆ ಘಣನಿಯವಾಗುತ್ತಿದೆ ರಾಂಪುರ ಗ್ರಾಮದ ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ಸಂತೋಷದ ವಿಷಯವಾಗಿದೆ ಇವರು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳಲಿ ಎಂದು ಗ್ರಾಮಸ್ಥರ ಆಶಯವಾಗಿದೆ 


ರಮೇಶ್ . ರಾಂಪುರ ಗ್ರಾಮದ ನಿವಾಸಿ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*