ಮಸ್ಕಿ ಮಿನಿವಿಧಾನಸೌಧ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿ ಹಸ್ತಾಂತರ
ಮಸ್ಕಿ : ಮಸ್ಕಿ ತಾಲೂಕು ಮಿನಿವಿಧಾನಸೌಧ ನಿರ್ಮಾಣದ ಸ್ಥಳಕ್ಕಾಗಿ ಕಳೆದ ಐದಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕ್ರೀಯೆ ಪೂರ್ಣ. ಕಂದಾಯ ಇಲಾಖೆಯ ಹೆಸರಿಗೆ ೫ ಎಕರೆ ಜಾಗ ನೊಂದಣಿ ಮಾಡಿಸಿದ ನೀರಾವರಿ ಇಲಾಖೆ. ಶೀಘ್ರ ಕಟ್ಟಡ ಕಾಮಗಾರಿ ಆರಂಭಿಸಲು ಬೇಕಾದ ಅನುಧಾನ ಬಿಡುಗಡೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಸಿದ್ದತೆ. ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು ಆರಂಭಕ್ಕಾಗಿ ಹೆಚ್ಚಿದ ನಿರೀಕ್ಷೆ.
ಕಳೆದ ಹಲವು ವರ್ಷಗಳಿಂದ ಮಿನಿವಿಧಾನಸೌಧ ನಿರ್ಮಾಣಕ್ಕೆ ಬೇಕಾಗುವ ಸ್ಥಳಕ್ಕಾಗಿ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಇದ್ದ ಅಡೆತಡೆಗಳು ಸೋಮವಾರ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಮಿನಿವಿಧಾನಸೌಧ ನಿರ್ಮಾಣಕ್ಕಾಗಿ ಇದ್ದ ಜಾಗದ ಸಮಸ್ಯೆ ಪರಿಹಾರವಾಗಿದ್ದು ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು ಆರಂಭದ ಕನಸು ನನಸಾಗುವ ಕಾಲ ಕೂಡಿ ಬಂದಿದೆ.
ಮಸ್ಕಿ ತಾಲೂಕು ಕೇಂದ್ರವಾಗಿ ಸುಮಾರು ೬ ವರ್ಷ ಗತಿಸಿದೆ. ಆದರೆ ಈವರೆಗೂ ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು ಇಲ್ಲದೆ ಸಾರ್ವಜನಿಕರು ಸರ್ಕಾರಿ ಧಾಖಲೆ ಪತ್ರಗಳಿಗಾಗಿ ಮಾನ್ವಿ, ಸಿಂಧನೂರು, ಲಿಂಗಸಗೂರು ತಾಲೂಕುಗಳಿಗೆ ಅಲೆದಾಡುವ ಪರಿಸ್ಥಿತಿ ಇತ್ತು ಕಳೆದ ಹಲವು ದಿನಗಳಿಂದ ಮಿನಿವಿಧಾನಸೌಧ ನಿರ್ಮಾಣಕ್ಕಾಗಿ ಬೇಕಾದ ಜಾಗದ ಸಮಸ್ಯೆ ಇತ್ಯರ್ಥಗೊಂಡು ಸೋಮವಾರ ಲಿಂಗಸಗೂರಿನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿ ಹಸ್ತಾಂತರಿಸಲಾಗಿದೆ. ಇದರಿಂದ ಪೂರ್ಣ ಪ್ರಮಾಣದ ಕಚೇರಿಗಳು ಆರಂಭವಾಗಲು ಇದ್ದ ಅಡೆತಡೆಗಳು ನಿವಾರಣೆಯಾಗಿದ್ದರಿಂದ ತಾಲೂಕಿನ ಜನರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
ಮಸ್ಕಿ ಮಿನಿವಿಧಾನಸೌಧದ ಸ್ಥಳ: ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪ್ ಬಳಿ ಇರುವ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಿನಿವಿಧಾನಸೌಧಕ್ಕೆ ಬೇಕಾದ ೫ ಎಕರೆ ಜಾಗವನ್ನು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸೆ.೪ ಸೋಮವಾರದಂದು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದ್ದು ಎರಡು ಇಲಾಖೆಗಳ ನಡುವೆ ಜಾಗದ ಸಂಭಂದದಿಂದ ತಿಕ್ಕಾಟ ನಡೆದು ನೆನೆಗುದಿಗೆ ಬಿದ್ದಿತ್ತು. ಆದರೆ ಶಾಸಕ ಆರ್. ಬಸನಗೌಡ ತುರುವಿಹಾಳ ಅವರ ನೇತೃತ್ವದಲ್ಲಿ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿಯನ್ನು ಹಸ್ತಾಂತರಿಸಲು ಬೇಕಾದ ಎಲ್ಲಾ ಸಿದ್ಧತೆಗಳು ಮಾಡಿದ್ದರು. ಅದರ ಫಲವಾಗಿ ಈಗ ಮಿನಿವಿಧಾನಸೌದಕ್ಕೆ ಬೇಕಾಗುವ ಭೂಮಿಯು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಒತ್ತಾಯ: ತಾಲೂಕು ಕೇಂದ್ರವಾಗಿ ಹಲವು ವರ್ಷಗಳು ಗತಿಸಿವೆ. ಆದರೆ ಇಲ್ಲಿ ಪೂರ್ಣ ಪ್ರಮಾಣದ ಕಚೇರಿಗಳು ಆರಂಭವಾಗದೇ ಇರುವುದರಿಂದ ಜನರು ಸರ್ಕಾರಿ ಕಾಗದ ಪತ್ರಗಳಿಗಾಗಿ ಮೂರು ತಾಲೂಕು ಕೇಂದ್ರಗಳಿಗೆ ಅಲೆದಾಟ ನಡೆಸುತ್ತಿದ್ದಾರೆ. ಇದೀಗ ಮಿನಿವಿಧಾನಸೌದ ನಿರ್ಮಾಣಕ್ಕೆ ಬೇಕಾದ ಬೂಮಿ ದೊರೆತಿರವುದರಿಂದ ಆದಷ್ಟು ಬೇಗ ಕಟ್ಟಡ ಕಾಮಗಾರಿ ಆರಂಭಕ್ಕೆ ಬೇಕಾದ ಅನುಧಾನ ಬಿಡುಗಡೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್:- ಮಸ್ಕಿ ತಾಲೂಕಿನಲ್ಲಿ ಮಿನಿವಿಧಾನಸೌಧ ನಿರ್ಮಾಣ ಮಾಡಲು ಬೇಕಾದ ಜಾಗ ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ ಸೋಮವಾರ ಹಸ್ತಾಂತರಿಸಿ ಕೊಳ್ಳಲಾಗಿದೆ.-ತಹಸೀಲ್ದಾರ್ ಅರಮನೆ ಸುಧಾ.
ಕೊಟ್:- ಮಸ್ಕಿ ತಾಲೂಕಿಗೆ ಅಗತ್ಯವಿರುವ ಮಿನಿವಿಧಾನಸೌಧ ನಿರ್ಮಾಣಕ್ಕೆ ನೀರಾವರಿ ನಿಗಮಕ್ಕೆ ಸೇರಿದ ಜಾಗ ಗೊತ್ತುಪಡಿಸಲಾಗಿತ್ತು. ಆದರೆ ಕೆಲ ಸಮಸ್ಯೆಗಳಿಂದ ಜಾಗ ಹಸ್ತಾಂತರಕ್ಕೆ ವಿಳಂಭವಾಗಿತ್ತು. ಆದ್ದರಿಂದ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಸಮಸ್ಯೆನಿವಾರಣೆ ಮಾಡಿದ್ದು, ಇದೀಗ ಕಂದಾಯ ಇಲಾಖೆ ಹೆಸರಿಗೆ ಜಾಗ ನೋಂದಣಿಯಾಗಿದೆ. ಆದಷ್ಟು ಬೇಗ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುಧಾನ ಬಿಡುಗಡೆ ಮಾಡಲಾಗುವುದು.
- ಶಾಸಕ ಆರ್.ಬಸನಗೌಡ ತುರ್ವಿಹಾಳ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ