ಚಂದ್ರಯಾನ-3 ಜಗತ್ತಿನ ಗಮನ ಸೆಳೆದಿದೆ:ಇಸ್ರೋ ವಿಜ್ಞಾನಿ ಬಿ ಎಚ್ ಎಂ ದಾರುಕೇಶ
ಕೊಟ್ಟೂರು ಉಜ್ಜಿನಿ: ನಾವು ಸಮುದ್ರದ ಆಳದಲ್ಲಿ ಇಳಿದಿದ್ದೇವೆ, ಅಂತರಿಕ್ಷದಲ್ಲಿ ನೆಲೆ ಕಂಡುಕೊಂಡಿದ್ದೇವೆ. ಇಷ್ಟೆಲ್ಲ ಅದ ಮೇಲೆ ನಾವು ಚಂದ್ರನ ಮೇಲೆ ಜೀವಿಸುವ ದಿನ ದೂರವಿಲ್ಲ ಎಂದು ಇಸ್ರೋ ವಿಜ್ಞಾನಿ ದಾರುಕೇಶ್ ಹೇಳಿದರು.
ಶ್ರೀ ಸದ್ಧರ್ಮ ಪೀಠದಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕಾರಸಿ ಮಾತನಾಡಿದ ಅವರು, ತಾಯಿಯೊಬ್ಬಳು ಚಂದ್ರನ ಮೇಲೆ ನಿಂತು ತನ್ನ ಮಗುವಿಗೆ ಭೂಮಿಯನ್ನು ತೋರಿಸಿ ಅದು ತನ್ನ ತವರು ಮೆನೆ ಎಂದು ಹೇಳುತ್ತಾಳೆ.
ಅಂರ್ಜೇಟೇನ, ಬ್ರೆಜಿಲ್ ಪುಟ್ಬಾಲ್ ಪಂದ್ಯದಂತೆ ಮೊದಲ ಬಾರಿಗೆ ವಿಜ್ಞಾನ ವಿಷಯದಲ್ಲಿ ಇಸ್ರೋದ ಚಂದ್ರಯಾನ-3 ಜಗತ್ತಿನ ಗಮನ ವಿಶ್ವದ ಗಮನ ಸೆಳೆಯಿತು. ಇದರ ಯಶಸ್ಸು ಮರೆಯಲಾರದ ಕ್ಷಣ. ಇಡೀ ದೇಶವೇ ಹೆಮ್ಮಯಿಂದ ವಿಜ್ಞಾನಿಗಳು ನಮ್ಮವರು ಎಂಬ ಅಭಿಮಾನದಿಂದ ನಮ್ಮ ಜೊತೆ ಇದ್ದು ಆರೈಸಿ, ಆಶೀರ್ವಾದ ಮಡಿದ್ದು ಯಶಸ್ಸಿನ ಮತ್ತೊಂದು ಗುಟ್ಟು ಎಂದು ಅಭಿಮಾನದಿಂದ ಹೇಳಿದರು.
ಚಂದ್ರನ ದಕ್ಷಣ ದ್ರುವ ಗುಡ್ಡಗಾಡು ಪ್ರದೇಶ,ಇಲ್ಲಿ ಸಮತಟ್ಟಾದ ಪ್ರದೇಶ ಹುಡುಕಿ ಜಯಿಸಿದ್ದು ಭಾರತ. ಇಂತಹ ಹುಡುಕಾಟಕ್ಕೆ ನನ್ನ ಮತ್ತು ಗೋವಿಂದ್ ರಾಜ್ ಅವರ ಸಣ್ಣ ಕಾಣಿಕೆಯೂ ಇದೆ. ಹಳೆ ವೈಪಲ್ಯಗಳನ್ನು ಮೆಟ್ಟಿ ನಿಲ್ಲುವ ಸವಾಲುಗಳು ಇಸ್ರೋದ ಪ್ರತಿಯೊಂದು ವಿಭಾಗದಲ್ಲಿಯೂ ಇತ್ತು. ಒಂದು ನೌಕೆಯನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸುವುದು, ಒಂದು ಬಂಡಿಯನ್ನು ಚಂದ್ರನ ಮೇಲೆ ಓಡಿಸುವುದು, ಅಲ್ಲಿ ಒಂದು ವೈಜ್ಞಾನಿಕ ಪ್ರಯೋಗ ಮಾಡಬೇಕು. ಈ ಮೂರು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿತ್ತು. ಚಂದ್ರನ ಮೇಲೆ ನಮ್ಮ ವಾಹನವನ್ನು ಹೇಗೆ ಇಳಿಸಬೇಕು ಎಂಬ ಬಗ್ಗೆ ಚಳ್ಳಕೆರೆಯಲ್ಲಿ ಇರುವ ಡಿಆರ್‍ಡಿಒ ದಲ್ಲಿ 300 ಬಾರಿ ಪ್ರಯೋಗ ಮಾಡಿ ಖಚಿತ ಮಾಡಿಕೊಳ್ಳಲಾಗಿತ್ತು ಎಂದು ವಿವರಿಸೈದ ಅವರು, ಇದರ ಯಶಸ್ಸು ವಿಶ್ವದ ಎಲ್ಲರಿಗೂ ಸಲ್ಲಬೇಕು. ರೋವರ್ ವಿಕ್ರಂ ಚಂದ್ರನ ಮೇಲೆ ಇಳಿವುವ ನೇರ ಪ್ರಸಾರವನ್ನು ಯೂ ಟ್ಯೂಬಲ್ಲಿ 80 ಲಕ್ಷ ಜನ ವೀಕ್ಷಣೆ ಮಾಡಿದ್ದು, ಯೂ ಟ್ಯೂಬಲ್ಲಿ ಇದೊಂದು ವಿಶ್ವ ದಾಖಲೆಯಾಗಿದೆ ಎಂದರೆ ಇದರ ಮಹತ್ವ ತಿಳಿಯುತ್ತದೆ ಎಂದರು.
ಈ ಮೊದಲು ಚಂದ್ರನ ಮೇಲೆ ಹೋಗಬಹುದು ಎಂದು ಕೇಳುತ್ತಿದ್ದ ಮಕ್ಕಳು, ಈಗ ನಾವು ಮಂಗಳ ಶುಕ್ರಕ್ಕೆ ಹೋಗಬಹುದ ಎಂದು ಕೇಳುತ್ತಿದ್ದಾರೆ. ನಾವು ಇನ್ನೂ ಮೇಲೆಕ್ಕೇರುತ್ತೇವೆ ಎಂದು ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ನಂತರ ಸಭಿಕರೊಂದಿಗೆ ಸಂವಾದ ನಡೆಸಿ ಹಲವಾರಿ ಪ್ರಶ್ನೆಗಳಿಗೆ ಉತ್ತರಿಸಿದರು.
ಗೋವಿಂದಾರಾಜು ಶ್ರೇಷ್ಠಿ ಅವರು ಇಸ್ರೋ ಕೈಗೊಂಡ ಚಂದ್ರಯಾನ ಕುರಿತು ಮಾತನಾಡಿದರು.
ನಂತರ ಶ್ರೀ ಇಸ್ರೋ ವಿಜ್ಞಾನಿಗಳಾದ ಕೊಟ್ಟೂರಿನ ಬಿ.ಎಚ್.ಎಂ. ದಾರುಕೇಶ್ ಹಾಗೂ ತೂಲಹಳ್ಳಿಯ ಗೋವಿಂದಾರಾಜು ಶ್ರೇಷ್ಠಿ ಅವರನ್ನು ಶ್ರೀ ಸದ್ಧರ್ಮ ಪೀಠದ ಉಜ್ಜನಿ ಸದ್ಧರ್ಮ ಸಿಂಹಾಸನಧಿಶ್ವರ ಜಗದ್ಗುರು ಕೊಟ್ಟೂರಿನ ಡೋಣೂರು ಚಾನಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಉಪಸ್ಥಿತರಿದ್ದರು. ಎ.ಎಂ. ವೀರೇಂದ್ರಸ್ವಾಮಿ ಅಧ್ಯಕ್ಷತೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಹರಪನಹಳ್ಳಿ ಎಸಿ ಟಿ.ವಿ. ಪ್ರಕಾಶ್, ಹುಲಿಮನೆ ತಿಮ್ಮಣ್ಣ, ರೇವಯ್ಯ ಒಡೇಯರ್ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ