*ವಿಶ್ವಕರ್ಮರು ಪ್ರಪಂಚದ ಸೃಷ್ಠಿಕರ್ತರಾಗಿದ್ದಾರೆ-ಸಾಹಿತಿ ಕೆ.ಎಮ್.ವೀರೇಶ*
ವಿಜಯನಗರ ಜಿಲ್ಲೆ ಕೂಡ್ಲಿಗಿ: ಶ್ರೀಕೃಷ್ಣ ಪರಮಾತ್ಮರಿಗೆ ದ್ವಾರಕ ನಗರವನ್ನು, ಮನಮೋಹಕವಾಗಿ ನಿರ್ಮಿಸಿದವರು ವಿಶ್ವಕರ್ಮರಾಗಿದ್ದಾರೆ ಎಂದು. ಕರ್ನಾಟಕ ಜಾನಪದ ಕೂಡ್ಲಿಗಿ ಅಧ್ಯಕ್ಷ, ಸಾಹಿತಿ ಹಾಗೂ ಪತ್ರಕರ್ತ ಕೆ.ಯಂ. ವೀರೇಶ್ ನುಡಿದರು. ಅವರು ಸೆ17ರಂದು ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ. ಮತ್ತು ಪಟ್ಟಣ ಪಂಚಾಯ್ತಿ ಯಿಂದ ಏರ್ಪಡಿಸಿದ್ದ, "ಕಲ್ಯಾಣ ಕರ್ನಾಟಕ ದಿನಾಚರಣೆ" ಮತ್ತು "ವಿಶ್ವಕರ್ಮ ಜಯಂತಿ" ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಾನು ದೇವತೆಗಳಿಗೆ ಅರಮನೆಗಳನ್ನು, ಆಯುಧಗಳನ್ನು ನೀಡುವ ಮೂಲಕ ಡಿವೈನ್ ಇಂಜಿನಿಯರ್ ಯಾಗಿ. ವಿಶ್ವಕರ್ಮ ಸಮಾಜದ ಬಂಧುಗಳಿಗೆ ದೈವಿಕ ಬಡಗಿ ಯಾಗಿ, ವಿಶ್ವಕರ್ಮರು ಪೂಜಿಸಲ್ಪಡುತ್ತಿದ್ದಾರೆ ಎಂದರು. ಸ್ಥಿತಿ ಕರ್ತನಾದ ವಿಷ್ಣುವಿಗೆ ಸುದರ್ಶನ ಚಕ್ರ, ಶಿವನಿಗೆ ತ್ರಿಶೂಲ ಹಾಗೂ ಇನ್ನಿತರ ಆಯುಧಗಳನ್ನು ನೀಡುವುದರ ಮೂಲಕ. ಲೋಹಗಳನ್ನು ಬಳಿಸುವ ಕಲೆಯನ್ನು ವಿಶ್ವಕರ್ಮರು, ದೇವಾನು ದೇವತೆಗಳ ಕಾಲದಿಂದ ಈವರೆಗೂ ನೀಡುತ್ತಲೇ ಬಂದಿದ್ದಾರೆ.
ವಿಶ್ವ ಕರ್ಮ ಕೇವಲ ಒಂದೇ ಸಮುದಾಯ ವರ್ಗದ ಕುಶಲಕರ್ಮಿಗಳಿಗೆ ಸೀಮಿತವಲ್ಲ, ಅವರು ಐದು ಬಗೆಯ ಕುಶಲ ಕರ್ಮಿಗಳಿಗೆ ಆರಾಧ್ಯ ದೈವಾಗಿದ್ದಾರೆ. ಹಾಗಾಗಿ ವಿಶ್ವಕರ್ಮರಿಗೆ ಐವರು ಮಕ್ಕಳಿದ್ದಾರೆ, ಎಂಬ ಉಲ್ಲೇಖವನ್ನು ಕಾಣಬಹುದಾಗಿದೆ. ಅವರು ಮನು, ಮಯ, ತ್ವಷ್ಟ್ರ, ಶಿಲ್ಪಿ ಮತ್ತು ದೈವಜ್ಞರಾಗಿದ್ದಾರೆ. ಇದರಲ್ಲಿ ಮನು ಕಬ್ಬಿಣದಿಂದ, ಮಯ ಮರದಲ್ಲಿ, ತ್ವಷ್ಟ್ರ ಕಂಚು ಮತ್ತು ತಾಮ್ರ, ಶಿಲ್ಪಿ ಇಟಗಿಯಲ್ಲಿ, ದೈವಜ್ಞ ಚಿನ್ನ ಮತ್ತು ಬೆಳ್ಳಿಯಲ್ಲಿ. ಇವರುಗಳು ವಿವಿಧ ಶೈಲಿಯ ವಾಸ್ತು ಶಿಲ್ಪದ ಕರ ಕುಶಲತೆಯ ಬಗ್ಗೆ, ಹಾಡಿ ಹೊಗಳಿದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆ. ಹೀಗೆ, ದೇವಮೂರ್ತಿಗಳನ್ನು ನಿರ್ಮಿಸುವುದರ ಜೊತೆಯಲ್ಲಿ, ದೇವತಾ ಆರಾಧನೆ ಪೂಜಾ ವಿಧಾನಗಳನ್ನು ಪರಿಚಿಯಿಸುವುದನ್ನು ವಿಶ್ವಕರ್ಮರು ಜಗತ್ತಿಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಜಗತ್ತಿನ ಸುಪ್ರಸಿದ್ಧಿಯಾದ ಜಗನ್ನಾಥ ಪುರಿ ದೇವಸ್ಥಾನ, ಪುಷ್ಪಕ ಮಿಮಾನ, ದರ್ಪಣ, ಮಾಯ ನಗರವನ್ನು ನಿರ್ಮಾಣ ಮಾಡಿದವರು ವಿಶ್ವಕರ್ಮರು ಎಂದರು. ಕಲ್ಯಾಣ ಕರ್ನಾಟಕ ದಿನಾಚರಣೆಯ ಆಚರಿಸುವ ಹಿನ್ನೆಲೆಯ, ಉಪನ್ಯಾಸವನ್ನು ಉಪನ್ಯಾಸಕ ಸಿ.ವೆಂಕಟೇಶ್ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ತಹಸೀಲ್ದಾರ್ ಟಿ. ಜಗದೀಶ್ ವಹಿಸಿದ್ದರು. ತಾಲೂಕು ಪಂಚಾಯ್ತಿ, ಕಾರ್ಯನಿರ್ವಹಣಾಧಿಕಾರಿವೈ. ರವಿಕುಮಾರ್. ಎಇಇ ಮಲ್ಲಿಕಾರ್ಜುನ, ಬಿಇಓ ಪದ್ಮನಾಭ ಕರ್ಣಂ, ಪಪಂ ಮುಖ್ಯಾಧಿಕಾರಿ ಫಿರೋಜ್‌ಖಾನ್, ರಾಜ್ಯ ನೌಕರರ ಸಂಘದ ತಾ.ಘ ಅಧ್ಯಕ್ಷ ಪಾಲ್ತೂರ್ ಶಿವರಾಜ್, ವಿಶ್ವಕರ್ಮ ಸಮಾಜದ ಯುವ ಮುಖಂಡ ಹಾಗೂ ಪತ್ರಕರ್ತರಾದ, ಬಿ. ನಾಗರಾಜ್, ಸಮಾಜದ ಹಿರಿಯ ಕರಿಯಪ್ಪ ಆಚಾರ್, ಮುಖಂಡರಾದ ಈರಣ್ಣ, ಶ್ರೀಧರ, ಷಣ್ಮಖಾಚಾರ್. ತಾಲೂಕ ಕಚೇರಿಯ ಸಿಬ್ಬಂದಿ ವರ್ಗ ಸೇರಿದಂತೆ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ, ವಿಶ್ವಕರ್ಮ ಸಮಾಜದ ಬಾಂಧವರು. ಗಣ್ಯರು ಹಾಗೂ ನಾಗರೀಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎರಡು ಪ್ರತ್ಯೇಕ ವಿಷಯಗಳ ಜಂಟಿ ಕಾರ್ಯಕ್ರಮ ನೆರವೇರಸಾಲಾಗಿ ಕೇವಲ ವಿಶ್ವಕರ್ಮ ಆಚರಣೆಯ ವಿಷಯಗಳು ಹೆಚ್ಚಿನ ಪ್ರಮಾಣದಲ್ಲಿ ವಿವರಿಸಲಾಗಿದೆ ಇತಿಹಾಸದ ಎಲ್ಲಾ ಆಧಾರಗಳಿರುವ ಕಲ್ಯಾಣ ಕರ್ನಾಟಕದ ನಮ್ಮ ಸ್ಥಳೀಯ ಇತಿಹಾಸವನ್ನು ಪ್ರೋ. ವೆಂಕಟೇಶ್ ಸರ್ ಬಹಳ ಸರಳವಾಗಿ ಮತ್ತು ಎಳೆ ಎಳೆ ಯಾಗಿ ವಿವರಣೆ ನೀಡಿದರು ಆ ವಿಷಯದ ಯಾವುದೇ ಪ್ರಸ್ತಾಪವಿಲ್ಲ ನಿರ್ದಿಷ್ಟತೆ, ನಿಖರತೆ ಯನ್ನು ಹೊಂದಿರುವುದು ತುಂಬಾ ಮುಖ್ಯ ಅನಿಸುತ್ತೆ
ಪ್ರತ್ಯುತ್ತರಅಳಿಸಿ