ಪರಿಸರ ಸ್ನೇಹಿ ಗಣೇಶನ ವಿಗ್ರಹಗಳಿಗೆ ಹೆಚ್ಚಿದ ಬೇಡಿಕೆ:ಹಬ್ಬಕ್ಕೆ ಸಿದ್ದಗೊಂಡಿರುವ ಗಣೇಶನ ಮೂರ್ತಿಗಳು
ಕೊಟ್ಟೂರು: ಇದೇ ತಿಂಗಳಿನಲ್ಲಿ ಆಚರಿಸಲು ಪಡುವ ಗಣೇಶ ಹಬ್ಬದಂದು ಪ್ರತಿಷ್ಠಾಪನೆಗೊಳ್ಳಿಲು ಈಗಾಗಲೇ ತರಹೇವಾರಿ ಗಣೇಶನ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ವಿಗ್ರಹ ತಯಾರಕರಿಗೀಗ ಬಿಡುವಿಲ್ಲದ ಕೆಲಸ.
ಕೊಟ್ಟೂರಿನಲ್ಲಿ ನಾಲ್ಕೈದು ಕುಟುಂಬಗಳು ಹಲವು ವಂಶ ಪಾರಂಪರಿಕವಾಗಿ ವಿಗ್ರಹಗಳನ್ನು ತಯಾರಿಸುತ್ತಿವೆ. ಈಗಾಗಲೇ ವಿವಿಧ ಯುವಕರು ಸಂಘ ಸಂಸ್ಥೆ ಅವರು ಗಣೇಶನ ಪ್ರತಿಷ್ಠಾಪನೆ ತಮಗಿಷ್ಟವಾದ ಮಾದರಿಯಲ್ಲಿ ವಿಗ್ರಹಗಳನ್ನು ನಿರ್ಮಿಸಲು ತಯಾರಕರಿಗೆ ತಿಳಿಸಿದ್ದಾರೆ. ಅದರಂತೆ ವಿಗ್ರಹ ಸಿದ್ಧವಾಗುತ್ತಿದೆ. ಗಲ್ಲಿಗಳಲ್ಲಿ ಚಿಣ್ಣರು ಮೂರ್ತಿಗಳನ್ನು ನಿರ್ಮಿಸುವ ಸ್ಥಳೀಯರಿಗೆ ಭೇಟಿ ನೀಡಿ ಖುಷಿಪಟ್ಟು ತಮ್ಮ ಗಲ್ಲಿಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಚಿಂತನೆಯನ್ನು ನಡೆಸಲು ತೊಡಗಿದ್ದಾರೆ.
ಪರಿಸರ ಸ್ನೇಹಿ ಗಣಪನ ಬೇಡಿಕೆ: ಜಲ ಮಾಲಿನ್ಯ ತಡೆಗಾಗಿ ಈಗಾಗಲೇ ಪಿಒಪಿ ಗಣೇಶನ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದೆ. ಜಾ ಗ್ರತರಾಗಿರುವ ಜನತೆಯೂ ಹೆಚ್ಚಾಗಿ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗೆ ಬೇಡಿಕೆಗಳನ್ನು ಇಟ್ಟಿದ್ದಾರೆ. ವಿಗ್ರಹ ತಯಾರಕರು ಸಹ ಇತ್ತೀಚೆಗಿನ ವರ್ಷಗಳಲ್ಲಿ ಆಯಿಲ್ ಪೇಂಟ್ ಗಿಂತ ವಾಟರ್ ಪೇಂಟನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಕೆಲವರು ಯಾವುದೇ ಪೇಂಟ್ ಹಚ್ಚಿದ ಗಣೇಶನ ಮೂರ್ತಿಗಳಿಗೆ ಆರ್ಡರ್ ಮಾಡುವುದಾಗಿ ತಿಳಿದು ಬಂದಿದೆ.
ಪಟ್ಟಣದ ವಿಗ್ರಹ ತಯಾರಕರಾದ ಸಿ., ಶ್ರೀಧರ್ ಅವರು ಪತ್ರಿಕೆ ದೊಂದಿಗೆ ಮಾತನಾಡಿ ಗಣೇಶನ ಹಬ್ಬಕ್ಕಾಗಿ ಈಗಾಗಲೇ ಒಂದುವರೆ ತಿಂಗಳಿಂದಲೇ ಮೂರ್ತಿಗಳನ್ನು ತಯಾರಿಸುತ್ತೇವೆ. ಶೇಕಡ 30ರಷ್ಟು ಜನರು ಬಣ್ಣ ಹಚ್ಚದ ಗಣೇಶನ ಮೂರ್ತಿಗಳಿಗೆ ಆರ್ಡರ್ ನೀಡಿದ್ದಾರೆ. ನಾವು ಜನರ ಬೇಡಿಕೆಗಳಿಗೆ ತಕ್ಕಂತೆ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಆಯಿಲ್ ಪೇಂಟ್ ಬದಲಾಗಿ ವಾಟರ್ ಪೇಂಟನ್ನು ಬಳಸುತ್ತಿದ್ದೇವೆ ಎಂದರು.
ಗಣೇಶನ ಹಬ್ಬ ಹತ್ತಿರ ಬರುತ್ತಿರುವುದರಿಂದ ಮೂರ್ತಿಗಳ ತಯಾರಕರು ವಿವಿಧ ಆಕಾರದ ಗಣೇಶನ ಮೂರ್ತಿಗಳ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಗಲ್ಲಿಗಳಲ್ಲಿನ ಹುಡುಗರು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಈಗಾಗಲೇ ಗಣೇಶನ ಪ್ರತಿಷ್ಠಾಪನೆಗೆ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. ಗಣೇಶನ ಹಬ್ಬದ ಪೂರ್ವದಲ್ಲಿ ಉತ್ತಮ ಮಳೆ ಯಾಗಬೇಕಾದ ಅಗತ್ಯವಿದೆ. ವರುಣ ದೇವ ಉತ್ತಮ ಮಳೆ ಸುರಿಸಿದರೆ ಹಬ್ಬದಲ್ಲಿ ಜನರ ಉತ್ಸಾಹ ಇಮ್ಮಡಿಯಾಗಲಿದೆ.
ಪ್ರತಿಕ್ರಿಯೆ
ನಾವು ಮೊದಲಿನಿಂದಲೂ ಅಚ್ಚನ್ನು ಬಳಸದೆ ಕೈಯಿಂದಲೇ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ ಸುಮಾರು ಗಣೇಶನ ವಿಗ್ರಹಗಳನ್ನು ನಾವು ಪ್ರತಿ ವರ್ಷ ತಯಾರಿಸುತ್ತಿದ್ದೇವೆ.
-ಸಿ. ಶ್ರೀಧರ
ಗಣೇಶನ ವಿಗ್ರಹ ತಯಾರಿಕ ಕೊಟ್ಟೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ