"ಎಸ್ ಸಿ ಹಾಸ್ಟೆಲ್ ಮೇಲ್ವಿಚಾರಕ ಸದಾನಂದ ಅಮಾನತ್ತಿಗೆ ಆಗ್ರಹ "
ವಿದ್ಯಾರ್ಥಿಗಳಿಗೆ ಅವಚ್ಯ ಶಬ್ದಗಳಿಂದ ನಿಂದನೆ..!
ಕೊಟ್ಟೂರು : ಪಟ್ಟಣದ ಎಸ್ ಸಿ ಹಾಸ್ಟೆಲ್ ಮೇಲ್ವಿಚಾರಕ ಸದಾನಂದ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅವಚ್ಯ ಶಬ್ದಗಳಿಂದ ನಿಂದನೆ ಮತ್ತು ಎದುರಿಸುವ ಕಾರ್ಯ ನಡೆದಿದೆ. ಎಂದು ಸೋಮವಾರ ಸಂಜೆ ವಿದ್ಯಾರ್ಥಿಗಳು ತಿಳಿಯಪಡಿಸಿದರು.
೨೦೧೪-೧೫ನೇ ಸಾಲಿನಲ್ಲಿ ಮಂಜೂರಾಗಿರುವ ಈ ವಿದ್ಯಾರ್ಥಿನಿಲಯಕ್ಕೆ ೨೦೧೯-೨೦ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ೭೮೬ ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಸೋಮವಾರದಂದು ಶಾಸಕರ ನೇತೃತ್ವದಲ್ಲಿ ನೂತನ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯವು 100 ವಿದ್ಯಾರ್ಥಿಗಳ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು. ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಈ ಸಮಯದಲ್ಲಿ ತಿಳಿಸಿದರು.
ಆದರೆ ಇಲ್ಲಿನ ಮೇಲ್ವಿಚಾರಕರಾದ ಸದಾನಂದ ಅವರು ನೂತನ ಕಟ್ಟಡದಲ್ಲಿ ಶೌಚಾಲಯಗಳು ಸ್ವಚ್ಛತೆ ಇಲ್ಲ, ಹಾಗೂ ಸಂಪು, ಕುಡಿಯುವ ನೀರಿನ ಆರ್ ಓ ಪ್ಲಾಂಟ್ ಗಳು, ಸ್ವಚ್ಛತೆ ಇಲ್ಲದೆ ಇರುವುದು ಮತ್ತು ಇಲ್ಲಿನ ಮೂಲಭೂತ ಸೌಕರ್ಯಗಳು ಸರಿಯಾದ ರೀತಿಯಲ್ಲಿ ಇಲ್ಲದಿರುವುದು ತಿಳಿದಿದ್ದರೂ ಶಾಸಕರ ಒತ್ತಡದಿಂದ ನಾವು ಈ ದಿನ ಉದ್ಘಾಟನೆ ಮಾಡಿದ್ದೇವೆ.ಎಂದು ಉತ್ತರಿಸಿದ ತಾನು ಮಾಡಿದ ತಪ್ಪನ್ನು ಶಾಸಕರ ತಲೆ ಮೇಲೆ ಹೊತ್ತು ಹಾಕುತ್ತಿರುವ ವಿದ್ಯಾರ್ಥಿನಿಲಯದ ಮೇಲ್ವಿಚಾರಕರು ಸದಾಶಿವ ವಿದ್ಯಾರ್ಥಿಗಳನ್ನು ಯಾವ ರೀತಿ ನೋಡಿಕೊಳ್ಳಬಹುದು.
ವಿದ್ಯಾರ್ಥಿಗಳ ನಿಂದನೆ ಹಾಗೂ ತಾನು ಮಾಡಿರುವ ತಪ್ಪನ್ನು ಶಾಸಕರ ತಲೆ ಮೇಲೆ ಹೊತ್ತು ಹಾಕುತ್ತಿರುವ ಇಂತಹ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಇಲ್ಲಿನ ವಿದ್ಯಾರ್ಥಿಗಳು ಪತ್ರಿಕೆ ಮೂಲಕ ಮೇಲೆಅಧಿಕಾರಿಗಳಿಗೆ ತಿಳಿಯಪಡಿಸಿದರು.
ಕೊಟ್ -1
ನೂರು ವಿದ್ಯಾರ್ಥಿಗಳ ನೂತನ ಕಟ್ಟಡದಲ್ಲಿ ಹಲವು ಸಮಸ್ಯೆಗಳು ಇರುವುದು ಅಲ್ಲದೆ,ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸದಾನಂದ ಅವರು ವಿದ್ಯಾರ್ಥಿಗಳಿಗೆ ಅವಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿದ್ಯಾರ್ಥಿಗಳನ್ನು ಎದುರಿಸುವ ಕಾರ್ಯ ಸೋಮವಾರ ಸಂಜೆ ನಡೆದಿದೆ. ಎಂದು ವಿದ್ಯಾರ್ಥಿಯಾದ ಸುನಿಲ್ ಎಂಬುವರು ಪತ್ರಿಕೆಗೆ ತಿಳಿಸಿದರು
ಕೊಟ್ -2
ವಿದ್ಯಾರ್ಥಿಗಳಿಗೆ ಅವಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿದ್ಯಾರ್ಥಿಗಳನ್ನು ಎದುರಿಸುವ ಕಾರ್ಯ ನಡೆದಿದೆ ಮತ್ತು ಶಾಸಕರ ಒತ್ತಡಕ್ಕೆ ಉದ್ಘಾಟನೆ ಮಾಡಿದ್ದೇವೆ ಎಂದು ಸದಾನಂದ ವಿರುದ್ಧ ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನು ಪರಿಶೀಲಿಸಿ ಕ್ರಮ ಕೊಳ್ಳಲಾಗುವುದು ಎಂದು ಜಗದೀಶ್ ದಿಂಡಗನೂರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೂಡ್ಲಿಗಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ