*ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಂವಿಧಾನ ಪೀಠಿಕೆ ಅಳವಡಿಕೆ ಕಡ್ಡಾಯ*

ಕೂಡ್ಲಿಗಿ:ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಂಗ್ಲ ಭಾಷೆ ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಸಂವಿಧಾನದ ಪೀಠಿಕೆಯ ಅಳವಡಿಕೆ ಕಡ್ಡಾಯವಾಗಿ ಹಾಕಬೇಕು ಮಾನ್ಯ ತಹಶೀಲ್ದಾರರು ಸಭೆಯಲ್ಲಿ ತಿಳಿಸಲಾಯಿತು.ಹಾಗೆ ಸರ್ಕಾರದ ಆದೇಶದಂತೆ ಪ್ರತಿ ದಿನಾಲು ಇನ್ನು ಮುಂದೆ ತಾಲೂಕಿನ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಶಾಲೆ ಪ್ರಾರಂಭ ಸಮಯದಲ್ಲಿ ಪ್ರಾರ್ಥನೆ ಮಾಡುವ ಸಮಯದಲ್ಲಿ ಸಂವಿಧಾನದ ಪೀಠಿಕೆಯನ್ನು ಸಹ ಓದುವಂತೆ ಸಭೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಟಿ ಜಗದೀಶ್ ತಹಶೀಲ್ದಾರರು ತಿಳಿಸಿದರು.

ಅತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರ-ಸಮಾಜ ಕಲ್ಯಾಣ ಇಲಾಖೆಯು ಸೆಪ್ಟಂಬರ್ 15, ಬೆಳಿಗ್ಗೆ 10 ಗಂಟೆಗೆ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದುವುದರ ಮುಖಾಂತರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ಧರಿಸಿರುತ್ತದೆ, ಆ ಮುಖಾಂತರ ಜಗತ್ತಿನ ಹೆಚ್ಚು ಜನರು ಏಕಕಾಲಕ್ಕೆ ಸಂವಿಧಾನದ ಪ್ರಸ್ತಾವನೆಯನ್ನು ಓದಿದ ವಿಶ್ವ ದಾಖಲೆಯನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿಕೊಂಡಿದೆ. 

ಪ್ರಯುಕ್ತ ಅಂತ ಮಹತ್ವದ ಕಾರ್ಯದಲ್ಲಿ ತಾವೂ ಕೂಡ ಕೈಜೋಡಿಸಲು ಈ ಕೆಳಕಂಡ ಲಿಂಕ್ thepreamble-swdkar.in/#home ಮುಖಾಂತರ ಸೆಪ್ಟಂಬರ್ 12 ರ, ಸಂಜೆ 6:00 ಗಂಟೆ ಒಳಗಾಗಿ ನೋಂದಣಿ ಮಾಡಿಕೊಂಡು, ಸೆಪ್ಟಂಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮುಖಾಂತರ ಭಾರತ ದೇಶದ ಪ್ರಜೆಗಳಾದ ನಾವುಗಳು ಹಾಗೂ ಪಟ್ಟಣದ ಎಲ್ಲಾ ಸಾರ್ವಜನಿಕರು ಸಂಘ-ಸಂಸ್ಥೆಯವರು ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಕೂಡ್ಲಿಗಿ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 9:30ಕ್ಕೆ ಪಟ್ಟಣದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಲ್ಲಾರು ಸೇರ ಬೇಕು ಹಾಗೂ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ರಾಜ್ಯದ್ಯಂತ ಏಕಕಾಲದಲ್ಲಿ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಯವರು ಶಾಲೆಗಳ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸರ್ಕಾರದ ಆದೇಶದ ಅನ್ವಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ಪ್ರಯುಕ್ತ ಸಂವಿಧಾನದ ಅರಿವು ಮೂಡಿಸಲು ಮತ್ತು ಸಂವಿಧಾನದ ಪ್ರಾಮುಖ್ಯತೆ ತಿಳಿಸಲು ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ಟಿ ಜಗದೀಶ್ ತಹಶೀಲ್ದಾರರು ಹಾಗೂ ಮಾನ್ಯ ಶಾಸಕರಾದ ಎನ್‌ಟಿ ಶ್ರೀನಿವಾಸ್ ಇವರ ಸಮ್ಮುಖದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಜಗದೀಶ್ ದಿಗಡೂರು, ರವರು ಪೂರ್ವಭಾವಿ ಸಭೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೈ. ರವಿಕುಮಾರ್ ಪರಿಶಿಷ್ಟ ಪಂಗಡದ ಅಧಿಕಾರಿಗಳಾದ ಭಾಷಾ, ಸಿ ಡಿ ಪಿ ಓ ಅಧಿಕಾರಿಗಳಾದ ನಾಗನಗೌಡ್ರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭಕರಣಂ, ಸಮನ್ವಯ ಅಧಿಕಾರಿಗಳಾದ ಜಗದೀಶ್, ಅರಣ್ಯ ಇಲಾಖೆ ಅಧಿಕಾರಿಗಳು, ಉಪ ನೊಂದಣಿ ಅಧಿಕಾರಿಗಳಾದ ತಿಪ್ಪೇಸ್ವಾಮಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೊತ್ಲಮ್ಮ ಕೃಷಿ ಇಲಾಖೆ ಸುನಿಲ್ ಕುಮಾರ್, ಅಬಕಾರಿ ಇಲಾಖೆಯ ನಾಗರಾಜ್, ಪೊಲೀಸ್ ಇಲಾಖೆ ಎಎಸ್ಐ ಜಗದೀಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯಾದ ಫಿರೋಜ್ ಖಾನ್,ಹಾಗೆ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಡಿ ಎಚ್ ದುರ್ಗೇಶ್ ವಕೀಲರು, ಚಲವಾದಿ ಮಹಾಸಭಾ ರಾಜ್ಯ ಕಾರ್ಯದರ್ಶಿಯಾದ ಉಮೇಶ್, ದಲಿತ ಮುಖಂಡರಾದ ಬಂಡೆ ರಾಘವೇಂದ್ರ ಪೆಟ್ರೋಲ್ ಬಂಕ್ ಮಾಲೀಕರು, ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಗುಣಸಾಗರ ಕೃಷ್ಣಪ್ಪ, ಶ್ರೀ ಸಂತೋಷ್ ಕುಮಾರ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರು,ಬಿ ಮಹೇಶ್ ಡಿಎಸ್ಎಸ್, ಕೊಟ್ರೇಶ್ ಚಲವಾದಿ ಇನ್ನು ಮುಂತಾದವರು ಉಪಸ್ಥಿತರಿದ್ದರು

*ರಾಘವೇಂದ್ರ ಸಾಲುಮನೆ ಕೂಡ್ಲಿಗಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ