ಪ್ಲಾಸ್ಟಿಕ್ ಮುಕ್ತ ಎಲ್ಲಿ ಅಧಿಕಾರಿಗಳೇ: ಪ್ಲಾಸ್ಟಿಕ್ ಕಸದ ರಾಶಿ ಕಾಣುತ್ತಿಲ್ಲವೇ..!
ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ : ಎಲ್ಲೆಂದರಲ್ಲಿ ಕಸದ ರಾಶಿ: ರೋಗ ಹರಡುವ ಭೀತಿ
ಕೊಟ್ಟೂರು :ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುವ ನಗರವಾಗಿದ್ದು ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳು ಮನೆ, ಸುಸಜ್ಜಿತ ಕಟ್ಟಡಗಳು ನಿರ್ಮಾಣವಾಗುತ್ತಿದೆ.
ಈ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿಗಳ ಕಾಣುತ್ತಿವೆ.ತ್ಯಾಜ್ಯ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯದಿರುವುದರಿಂದ ರೋಗ ಹರಡುವ ಭೀತಿ ಜನರಲ್ಲಿ ಮನೆ ಮಾಡಿದೆ.
ಪ್ರತಿ ನಿತ್ಯ ನೂರಾರು ಮಂದಿ ಬರುತ್ತಾರೆ ಹೋಗುತ್ತಾರೆ. ಒಮ್ಮೆ ಈ ಕಸದ ರಾಶಿ ನೋಡಿದರೆ ಪಟ್ಟಣದ ಗೌರವ ಘನತೆಯನ್ನು ಗೇಲಿ ಮಾಡುವಂತೆ ಇರುತ್ತದೆ ಎಂಬುದು ನೊಂದ ನಾಗರಿಕರ ಅಭಿಮತ.
ಇಲ್ಲಿಯ ಸ್ಥಳಿಯರು ಪ್ರತಿಯೊಬ್ಬರು ಮೂಗು ಮುಚ್ಚಿಕೊಂಡೇ ತಿರುಗಾಡಬೇಕಾಗಿದೆ. ಹೆಚ್ಚಿನ ಪ್ರಮಾಣದ ರಾಶಿ ರಾಶಿ ಮಧ್ಯ ಸೇವನೆಯ ಪಾಕೆಟ್ ಗಳು ,ಪ್ಲಾಸ್ಟಿಕ್ ಗ್ಲಾಸ್ ತ್ಯಾಜ್ಯ ತಿಂಗಳುಗಳವರೆಗೆ ಕೊಳೆತರೆ ಏನಾಗಬಹುದು? ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಬಹಳಷ್ಟಿವೆ.
ಪಟ್ಟಣ ಪಂಚಾಯಿತಿಯಲ್ಲಿ ಈಗಾಗಲೇ ಮನೆ ಟ್ಯಾಕ್ಸ್ ಬಿಲ್‌ನಲ್ಲಿ ಇಂತಿಷ್ಟು ಹಣ ಎಂದು ಕಟಾವು ಮಾಡುತ್ತಿದ್ದು ತ್ಯಾಜ್ಯ ನಿರ್ವಹಣೆಯ ಶುಲ್ಕವಾಗಿ ಪ್ರತಿಯೊಬ್ಬರಿಂದ ಪಡೆಯಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಜನರ ಆರೋಪವಾಗಿದೆ.
ವೈಫಲ್ಯ ಮತ್ತು ನಿರ್ಲಕ್ಷ್ಯದ ಕಾರಣದಿಂದ ಪಟ್ಟಣದಾದ್ಯಂತ ಕಸದ ರಾಶಿ ಜಮಾವಣೆಯಾಗುತ್ತಿದೆ. ಆದ್ದರಿಂದ ಆದಷ್ಟು ಬೇಗನೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘನತ್ಯಾಜ್ಯ ವಿಲೇವಾರಿಗೂ ವೈಜ್ಞಾನಿಕ ಕ್ರಮವನ್ನು ಅನುಸರಿಸಬೇಕು.
ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಸವೋ ಕಸ ಹಾಗೂ ಪ್ಲಾಸ್ಟಿಕ್ ಮಯವಾಗಿದೆ. ಅಗಿದೆ ಎನ್ನುವ ಅಧಿಕಾರಿಗಳು ಕಾಲಿಟ್ಟಲ್ಲಿ ಮಧ್ಯದ ಬಾಟಲ್ ಗಳು, ಕಣ್ಣು ಹಾಯಿಸಿದ್ದಲ್ಲಿ ಕಸದ ರಾಶಿ. ಒಟ್ಟಿನಲ್ಲಿ ಭ್ರಷ್ಟ ವ್ಯವಸ್ಥೆಗೆ ಅಧಿಕಾರಿ ವರ್ಗ ಶಾಮಿಲಾಗಿದೆಯೇ ..! ಎಂದು ಪಟ್ಟಣ ಪಂಚಾಯತಿ ವಿರುದ್ಧ ಸ್ಥಳೀಯರಾದ ಆನಂದ, ರಮೇಶ್ , ಮಂಜು,ಪ್ರಸಾದ್, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ