ಕಾನೂನು ವಿಧ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ.

ಲಿಂಗಸೂಗೂರು ಸೆ.13 ಶ್ರೀ ಮತಿ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಸ್ಥೆಯ ಅಧ್ಯಕ್ಷ ಸಂಜೀವ ಕಂದಗಲ್ ರವರು ಸಸಿಗೆ ನೀರು ಹಾಕಿ ಕೆಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

     ಕಾನೂನು ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಈ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಅವರು ಒಂದು ಅಕ್ಷರ ಕಲಿಸಿದಾತನೂ ಸಹ ಗುರು' ಎಂಬ ಗುರು ಪರಂಪರೆಯ ಶಿಕ್ಷಣ ವ್ಯವಸ್ಥೆ ನಮ್ಮ ದೇಶದಲ್ಲೀಗ ಇಲ್ಲದೇ ಹೋದರೂ ಸಹ ಶಿಕ್ಷಣ ನೀಡುವ ಶಿಕ್ಷಕರಿಗೆ ಎಲ್ಲಿಲ್ಲದ ಗೌರವ ನಮ್ಮ ದೇಶದಲ್ಲಿ ಮಾತ್ರ. ಗುರುಗಳೆಂದ್ರೆ ಪೋಷಕರಿಗಿಂತ ಹೆಚ್ಚು ಎಂಬ ಭಾವನೆ ನಮ್ಮೆಲ್ಲರಲ್ಲೂ ಇರುವುದು ಮಿಥ್ಯವಲ್ಲ. ಭಾರತ ದೇಶದಲ್ಲಿ ಈ ದಿನಾಚರಣೆಗೆ ಎಲ್ಲಿಲ್ಲದ ಮಹತ್ವ. ಏಕೆಂದರೆ ನಮ್ಮ ದೇಶದಲ್ಲಿ ಶಿಕ್ಷಕ ವೃತ್ತಿಗೆ ಸಿಗುವ ಗೌರವ, ಮನ್ನಣೆ ಬೇರೆ ಯಾವುದೇ ವೃತ್ತಿಗೂ ಸಿಗುವುದಿಲ್ಲ.ಇಂದಿನ ವಾತಾವರಣದಲ್ಲಿ ಶಿಕ್ಷಕರಿಗೆ ವಿಧ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡದೆ ಇರುವುದು ದುರಂತ ಹಾಗೇಯೇ ಮಾಡದೆ ಶಿಕ್ಷಕರಿಗೆ ಗೌರವನ್ನು ನೀಡಬೇಕೆಂದರು.

ಶಿಕ್ಷಕರಿಗೆ ವಿವಿಧ ಬಗೆಯ ಆಟವನ್ನು ಆಡಿಸಲಾಯಿತು ಈ ಗೇಮ್ ನಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಿಗೆ ಪುಸ್ತಕ ಪೆನ್ ಗಳನ್ನು ವಿತರಣೆ.

    ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಮರೇಶ ಗೌಡೂರು,ಶಿಕ್ಷಕರಾದ ಗೌತಮ್ ವಾಲೇಕಾರ ,ಚನ್ನಬಸವ ಇತರೆ ಶಿಕ್ಷಕರು ಇದ್ದರೂ.

   ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ವರ್ಷದ ವಿಧ್ಯಾರ್ಥಿನಿ ಅಂಬುಜಾ ಮಾಡಿದರು.ಅಂತಿಮ ವರ್ಷದ ಹಾಗೂ ದ್ವಿತೀಯ ಹಾಗೂ ಪ್ರಥಮ ವರ್ಷದ ವಿಧ್ಯಾರ್ಥಿಗಳು ಎಲ್ಲರೂ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ