ವರುಣನನ್ನು ಬರಮಾಡಿಕೊಳ್ಳಲು ವಾಸುದೇವರ ಮೆರವಣಿಗೆ

ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಜಾತಿಬೇಧ ಮರೆತು ಹಿಂದು ಸಂಪ್ರದಾಯದಂತೆ ವಾಸುದೇವರ ಮದುವೆ ಮಾಡಿದ್ದಾರೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತಿರುವ ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಶೇಂಗಾ ಬೆಳೆ ಇತರೆ ಕೆಲ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಇನ್ನು ಕೆಲವು ಹೂ ಬಿಡುವ ಹಂತದಲ್ಲಿ ಇದ್ದು, ಈಗ ಅವಶ್ಯವಾಗಿ ಮಳೆಯು ಬೇಕಾಗಿದೆ. ಆದರೆ ಎರಡು ತಿಂಗಳಾದರೂ ಮಳೆ ಸರಿಯಾದ ಸಮಯಕ್ಕೆ ಬಂದಿಲ್ಲವಾದ್ದರಿಂದ ಗ್ರಾಮದ ಮುಖಂಡರು, ಯುವಕರು ಹೆಣ್ಣು ಗಂಡು ಜೋಡಿ ಕತ್ತೆಗಳನ್ನು ಹಿಡಿದು ತಂದು ಅವುಗಳನ್ನು ತೊಳೆದು ಸ್ವಚ್ಛಗೊಳಿಸಿ ಮದುವೆ ಸಿಂಗಾರ ಮಾಡಿ ಕತ್ತೆಗಳಿಗೆ ಮದುವೆ ಮಾಡಿ ಸಂಪ್ರದಾಯ ಬದ್ಧವಾಗಿ ಮದುವೆಯಲ್ಲಿ ಅನುರಿಸುವ ಎಲ್ಲ ಪದ್ಧತಿಗಳನ್ನು ಇಲ್ಲಿ ಮಾಡಿದ್ದಾರೆ. ಕತ್ತೆಗಳ ಮೆರವಣಿಗೆ ಮಾಡಿದರೆ ಮಳೆ ಬರಬಹುದೆಂಬ ಜನರಲ್ಲಿ ನಂಬಿಕೆ ಇರುವುದರಿಂದ ಇಂಥದ್ದೊಂದು ಆಚರಣೆ ನಡೆದಿದೆ. ನೀರು ತುಂಬಿದ ಮಡಿಕೆ ಕುಂಭವನ್ನು ಹೊತ್ತುಕೊಂಡು ಊರ ಬಾಗಿಲು ಬಳಿಯ ಬುಡ್ಡೆಕಲ್ಲಿಗೆ ನೀರು ಸುರಿದು ಪೂಜೆ ಸಲ್ಲಿಸಿದರು. ಎರಡು ಜೋಡಿ ಕತ್ತೆಗಳಿಗೆ ಸಿಂಗರಿಸಿಕೊಂಡು ಪ್ರಮುಖ ಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಸರ್ವ ಸದಸ್ಯರು, ಗ್ರಾಮದ ಮುಖಂಡರು, ಯುವಕರು ಮೆರವಣಿಗೆಯಲ್ಲಿ ಭಾಗವಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ