ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ಮಸ್ಕಿ, ಸೆ.17: ಪಟ್ಟಣದ ಕಾಳಿಕಾ ದೇವಿ ದೇವಸ್ಥಾನದಲ್ಲಿ ರವಿವಾರ ವಿಶ್ವಕರ್ಮ ಜಯಂತಿ ನಡೆಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಬಸನಗೌಡ ತುರುವಿಹಾಳ ಶಿಲ್ಪದಲ್ಲಿ ಕಲೆ ಅರಳಿಸುವ ವಿಶ್ವಕರ್ಮ ಸಮುದಾಯದವರ ಕೆಲಸಗಳು ಭಾರತವನ್ನು ವಿಶ್ವದೆಲ್ಲಡೆ ಆಕರ್ಷಿಸುತ್ತದೆ. ಪುರಾಣದಲ್ಲಿ ಉಲ್ಲೇಖವಾಗಿರುವ ಹಲವು ನಗರಗಳ, ಮಂದಿರಗಳು, ಗೋಪುರಗಳು, ನಿರ್ಮಾಣ ಸಹಿತ ದೇಶದ ಅಪೂರ್ವ ಶಿಲ್ಪಕಲೆಗಳಿಗೆ ನೀಡಿದ ವಿಶ್ವಕರ್ಮ ಸಮುದಾಯದ ಕೊಡುಗೆಗಳು ಅಪಾರ,
ದೇವ ಶಿಲ್ಪಿ ವಿಶ್ವಕರ್ಮರ ಕಲಾ ಕೌಶಲ್ಯ ಜಗತ್ತಿಗೆ ಮಾದರಿಯಾಗಿದೆ ಎಂದರು.
ಸಮಾಜದ ಅಧ್ಯಕ್ಷ ಉದಯಕುಮಾರ್ ಪತ್ತಾರ ಮಾತನಾಡಿ ನಾಗರಿಕತೆ ಹಾಗೂ ಸಾಂಸ್ಕೃತಿಕ ಪರಂಪರೆ ನಿರ್ಮಿಸುವಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಹಿರಿದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕುಲ ವೃತ್ತಿ ಕೈಗೊಳ್ಳುವುದು ಕಷ್ಟವಾಗಿದೆ. ಸೌಲಭ್ಯಗಳ ಕೊರತೆ ಕಾಡುತ್ತಿದೆ. ಈ ಜನಾಂಗ ವಿಶ್ವಕರ್ಮರ ಚೈತನ್ಯ ಪಡೆದು ಸಂಘಟಿತ ಪ್ರಯತ್ನದ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ,ಶಿವಣ್ಣ ನಾಯಕ,
ಕಾಂಗ್ರೆಸ್ಸಿನ ವಿವಿಧ ಮುಖಂಡರು, ವಿಶ್ವಕರ್ಮ ಸಮಾಜದ ಮುಖಂಡರು,ಸಮಾಜದ ಪದಾಧಿಕಾರಿಗಳು, ಯುವಕರು,ಮಹಿಳೆಯರು ವಿವಿಧ ಗ್ರಾಮದ ವಿಶ್ವಕರ್ಮ ಸಮಾಜದ ಬಾಂಧವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ