*ಚಂದ್ರಯಾನ 3ರ ಮಾದರಿಯಲ್ಲಿ ಪ್ರತಿಭಾ ಕಾರಂಜಿ ಉದ್ಘಾಟನೆ*
ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ,ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚೌಡಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ರಾದ ನವೀನ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ವಿದ್ಯೆಯ ಜೊತೆಗೆ ಬೌದ್ಧಿಕ ವಿಕಾಸಕ್ಕೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಕ್ರೀಡೆ , ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಬೆಳವಣಿಗೆ ಹೊಂದಲು ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ, ಎಂದು ಅಭಿಪ್ರಾಯಪಟ್ಟರು.
ಸಿ ಆರ್ ಪಿ ಪ್ರಕಾಶ್ ಅವರು ಮಾತನಾಡಿ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ , ತಮ್ಮ ಸೋಲು ಗೆಲುವು ಸಹಜ ,ಮಕ್ಕಳು ಎರಡನ್ನೂ ಸಹ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಎಂದರು.
ಶಾಲಾ ಮಕ್ಕಳು ವಿವಿಧ ಸ್ಪರ್ಧೆ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳ ಮೂಲಕ ಸಂಭ್ರಮಿಸಿದರು,ಹಾಗೂ ಉದ್ಘಾಟನೆಗೆ ಚಂದ್ರಯಾನ 3ರ ಮಾದರಿಯಲ್ಲಿ ತಯಾರಿಸಿದ ಕ್ಷಿಪಣಿ ನೋಡುಗರ ಕಣ್ಮನ ಸೆಳೆಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಎರ್ರಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎನ್ ಪಿ ಎಸ್ ಜಿಲ್ಲಾ ಅಧ್ಯಕ್ಷರಾದ ಎಂ,ಮಂಜುನಾಥ, ಸಿ ಆರ್ ಪಿ ದೊಡ್ಡಪ್ಪ,ಶೇಖರಪ್ಪ, ಕೆ, ಸಿ,ಪ್ರಕಾಶ್,ಪ್ರದೀಪ್,ನಾಗೇಶ್, ತಿಪ್ಪೇಸ್ವಾಮಿ,ಎನ್ ಜಿ ಓ ಸದಸ್ಯರಾದ ಆರ್,ಬಿ,ಬಸವರಾಜ್,ಪಾಂಡುರಂಗ, ಸೇರಿದಂತೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಹಾಗೂ ಶಾಲಾ ಸಿಬ್ಬಂದಿ ವರ್ಗ,ಶಾಲಾಮಕ್ಕಳು,ಪೋಷಕರು,ಗ್ರಾಮಸ್ತರು, ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ