ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ

ಮಸ್ಕಿ, ಪಟ್ಟಣದ ಭಾರತೀಯ ಜನತಾ ಪಕ್ಷ ಮಸ್ಕಿ ಕಾರ್ಯಾಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಮಾಡಲಾಯಿತು.

ಕಾರ್ಯಕ್ರಮದ ಕುರಿತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಅವರ ಕುರಿತಾಗಿ ಜನಪ್ರಿಯ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಅವರು ಮಾತನಾಡಿ ಜನಸಂಘದ ನೇತಾರರು, ಏಕಾತ್ಮ ಮಾನವತವಾದದ ಪ್ರವರ್ತಕರು, ಬಲಪಂಥೀಯ ಚಿಂತಕರು, ಅಂತ್ಯೋದಯದ ಪ್ರೇರಣೆ, ರಾಷ್ಟ್ರಭಕ್ತ ಹಾಗೂ ಮಹಾನ್ ದಾರ್ಶನಿಕ ಅವರು ಈ ದೇಶಕ್ಕೆ ನೀಡಿರುವ ಏಕಾತ್ಮ ಮಾನವ ದರ್ಶನ, ತತ್ವ- ಆದರ್ಶಗಳು ಸದಾ ಸ್ಫೂರ್ತಿ ಮತ್ತು ಮಾದರಿಯ ದೇಶವೇ ಸರ್ವಶ್ರೇಷ್ಠ ಎಂಬ ಭಾವನೆಯಿಂದ ಜನರನ್ನು ಸಂಸ್ಕಾರಗೊಳಿಸಿ ಸಂಘಟಿತರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ.  

ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ ತತ್ವವನ್ನು ನೀಡುವ ಮೂಲಕ ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟವರು ಎಂದು ಮಾತನಾಡಿದರು.



 ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಹರಳಹಳ್ಳಿ , ಪಕ್ಷದ ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಮಲ್ಲಪ್ಪ ಅಂಕುಶದೊಡ್ಡಿ, ಡಾಕ್ಟರ್ ಬಿ.ಎಚ್ ದಿವಟರ, ಬಸವಂತರಾಯ ಕುರಿ, ಶಿವಪ್ಪ ಹುಬ್ಬಳ್ಳಿ, ಶಿವಶಂಕರಪ್ಪ ಹಳ್ಳಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಯುವ ಮೋರ್ಚಾ ಅಧ್ಯಕ್ಷರಾದ ಶರಣೇಗೌಡ ತಿಡಿಗೋಳ, ಪುರಸಭೆ ಸದಸ್ಯರಾದ ಮೌನೇಶ್ ಮುರಾರಿ, ಮಲ್ಲಿಕಾರ್ಜುನ್ ಬ್ಯಾಳಿ, ಸುರೇಶ್ ಹರಸಸೂರು,ಮಲ್ಲಯ್ಯ ಅಂಬಾಡಿ, ಸಿದ್ದಪ್ಪ ಬಸರೆಡ್ಡಿ, ಯಮುನಪ್ಪ ಭೋವಿ, ನಾಗರಾಜ್ ಯoಬಲದ,ಕಿರಣ್ ಕುಮಾರ್, ಅಭಿಜಿತ್ ಮಾಲಿಪಾಟೀಲ್, ಮೌನೇಶ್ ನಾಯಕ್, ಸಿದ್ದೇಶ್ ಗುರಿಕಾರ್ ಸೂಗಣ್ಣ ಬಾಳೆಕಾಯಿ, ಶರಣಯ್ಯ ಗುಡದೂರು, ಮಲ್ಲಿಕಾರ್ಜುನ ಗೌಡನಬಾವಿ, ರಮೇಶ್ ಉದ್ಬಾಳ್, ಗಂಗಾಧರ್ ಕಂಬಳಿ ಮಠ,ಬಸವರಾಜ್ ಗುಡಿಹಾಳ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ