ಶ್ರೀ ಸಿದ್ದಲಿಂಗ ಜಗದ್ಗುರು ಇಂದಿಗೂ ಜನಮಾನಸದಲ್ಲಿ ಅಮರ
ಕೊಟ್ಟೂರು: ಶ್ರೀ ಸಿದ್ದಲಿಂಗ ಜಗದ್ಗುರು ಗಳವರನ್ನು ಸ್ಮರಣೆ ಮಾಡಿ ಒದಗಿದ ಕಷ್ಟವೆಲ್ಲ ಪರಿಹಾರವಾಗುತ್ತೆ ದೂರವಾಗುತ್ತೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ತಾಲ್ಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಶುಕ್ರವಾರ ನಡೆದ ಶ್ರೀ ಸಿದ್ದಲಿಂಗ ಜಗದ್ಗುರು ಗಳವರ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಸಿದ್ದಲಿಂಗ ಜಗದ್ಗುರುಗಳವರು ರಾಜ್ಯ ಹೊರ ರಾಜ್ಯಗಳಲ್ಲಿ ದೇಶದೆಲ್ಲೆಡೆ ಸಂಚರಿಸಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿ ರುವ ಶ್ರೀಗಳು ಇಂದಿಗೂ ಜನಮಾನಸದಲ್ಲಿ ಇದ್ದಾರೆ .ಅವರ ಜೀವಿತ ಅವಧಿಯಲ್ಲಿ ಅನೇಕ ಪವಾಡಗಳನ್ನು ಲೀಲೆಗಳನ್ನು ತಪಸ್ಸು ಮಾಡಿ ಪವಾಡ ಪುರುಷ ಮಹಾ ತಪಸ್ವಿ ಎಂದೆನಿಸಿ ಕೊಂಡರು ಅವರು ವ್ಯಕ್ತಿಯಲ್ಲ ಶ್ರೀ ಪೀಠಕ್ಕೆ ದೊಡ್ಡ ಶಕ್ತಿಯಾಗಿದ್ದರು ಎಂದರು . ತಂದೆ ತಾಯಿಯ ಮನಸ್ಸನ್ನು ನೋಯಿಸಬೇಡಿ
ಸಮಾಜದಲ್ಲಿ ಗುರು ಹಿರಿಯರಿಗೆ ತಂದೆ ತಾಯಿಗಳಿಗೆ ಗೌರವ ಕೊಡುವ ಗುಣ ಬೆಳೆಯಲಿ ಎಂದು ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಶಿವಾಚಾರ್ಯ ಸ್ವಾಮೀಜಿಗಳು, ವೀರೇಶ್ ತೆರಿಗೆ ಸಲಹೆಗಾರರು. ಪುರಾಣ ಪ್ರವಚನಕಾರ ಪಂಡಿತ್ ಪುಟ್ಟರಾಜ ಶಾಸ್ತ್ರಿಗಳು ಹಿರೇಮಠ, ಪೀಠದ ವ್ಯವಸ್ಥಾಪಕ ವೀರೇಶ್, ಕುರುಗೋಡು ಸಿದ್ದೇಶ್, ಬಂಗಾರಿ ಶಿವಣ್ಣ, ಸದ್ಧರ್ಮ
ಹಿರಿಯ ನಾಗರಿಕಾರ ಸಂಘದ ಚನ್ನವೀ ಸ್ವಾಮಿ.ಸಂಗೀತ ಕಲಾವಿದರಾದ ವಾಗೀಶಯ್ಯ ಸಂತೋಷ್ ಕುಮಾರ್. ಸಿದ್ದಲಿಂಗಯ್ಯ, ಯು ಎಂ ವೀರಪ್ಪಯ್ಯ ಕಾರ್ತಿಕ ಮಠದ ನಟರಾಜ್ ಇತರರು ವೇದಿಕೆಯಲ್ಲಿದ್ದರು ನಿವೃತ್ತಿ ಶಿಕ್ಷಕ ಜೋಷಿ ನಿರೂಪಿಸಿದರು .ಹಂಸಪ್ರಿಯ ನೃತ್ಯ ನಿಕೇತನ ನಾಟ್ಯಶಾಲೆ ತಂಡದವರಿಂದ ಭರತನಾಟ್ಯ ನಿರ್ವಹಿಸಿದರು. ಅಂತರಾಷ್ಟ್ರೀಯ ಯೋಗಪಟು ಹರಿಹರದ ಕುಮಾರಿ ಸೃಷ್ಟಿ ಯೋಗಾಸನ ನೃತ್ಯ ಕಲೆ ಪ್ರದರ್ಶನ ನೀಡಿದರು.
ಉಜ್ಜಿನಿ ಶ್ರೀ ಸಿದ್ದಲಿಂಗ ಜಗದ್ಗುರುಗಳವರನ್ನು ಸ್ಮರಣೆ ಮಾಡಿದ್ರೆ ದುಃಖ ದುಮ್ಮಾನಗಳು ದೂರ. ಸಮಾಜದಲಿ ಗುರು ಹಿರಿಯರಿಗೆ ತಂದೆ ತಾಯಿಗಳಿಗೆ ಗೌರವ ಕೊಡುವ ಗುಣ ಬೆಳೆಯಲಿ-ಉಜ್ಜಯಿನಿ ಜಗದ್ಗುರುಗಳು ಸಿದ್ಧಲಿಂಗ ಶ್ರೀಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ