*ನಡೆ ನುಡಿ ಹಾಗೂ ಏಕತೆಯ ವಿಶ್ವ ಬಂಧು ಶಿವಕುಮಾರ ಶ್ರೀಗಳು.-ಬಿ, ಬಿ,ಶಿವಾನಂದ್.*

ಕೂಡ್ಲಿಗಿ: ಶ್ರೀ ಶಿವಕುಮಾರ ಶ್ರೀಗಳು ಶೈಕ್ಷಣಿಕ ಧಾರ್ಮಿಕ ಸಾಮಾಜಿಕವಾಗಿ ಕೊಡುಗೆ ನೀಡಿ ನಡೆ ನುಡಿಯಿಂದ ಏಕತೆಯ ಪ್ರತೀಕರಾದವರು ಎಂದು ವಿಜಯನಗರ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ, ಬಿ,ಶಿವಾನಂದ ನುಡಿದರು.

ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀ ತರಳಬಾಳು ಶಾಲಾ ಆವರಣದಲ್ಲಿ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಶ್ರದ್ಧಾಂಜಲಿ ಪ್ರಯುಕ್ತ, ಪ್ರಾದೇಶಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ಜೀವನ ಗಾಥೆ ವಿಷಯದ ಕುರಿತು ಉಪನ್ಯಾಸ ನೀಡುತ್ತಾ "ತರಳಬಾಳು ಬೃಹನ್ಮಠದ ಪರಂಪರೆಯಲ್ಲಿ ಲಿಂಗೈಕ್ಯ ಗುರುಗಳ ಅವಧಿಯು ಉತ್ತುಂಗಕ್ಕೆ ಏರಿತು. ಮರುಳಸಿದ್ಧರ-ಬಸವಣ್ಣನವರ ಅಭಿನವ ಅವತಾರ ಎಂಬಂತೆ ಬಾಳಿ-ಬೆಳಗಿದ ಶ್ರೀಗಳವರು ವಿಶ್ವಬಂಧುವಾದವರು. ಅವರ ಚಿಂತನೆಗಳು ನಮಗೆ ಜ್ಯೋತಿಪಥವಾಗಿರುವರು", ಎಂದು ಅಭಿವ್ಯಕ್ತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಯು ಜಿ ಶರಣಪ್ಪ, ಪ್ರಾದೇಶಿಕ ಅಧಿಕಾರಿಗಳು, ಹರಪನಹಳ್ಳಿ ವಲಯ ಇವರು ಮಾತನಾಡಿ "ತರಳಬಾಳು ಮಠ ಮತ್ತು ವಿದ್ಯಾಸಂಸ್ಥೆಗಳು ಸಮಾಜ ಕಟ್ಟುವಲ್ಲಿ ಮುಂಚೂಣಿಯಲ್ಲಿವೆ. ಕಲೆ-ಸಂಸ್ಕೃತಿ ಉಳಿಸಿ ಬೆಳೆಸಲು ತರಳಬಾಳು ಹುಣ್ಣಿಮೆ, ವಚನ ಪ್ರಸಾರವೂ ಸೇರಿದಂತೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದೆ. ಸರ್ವರೂ ಸಮಾಜ ಕಟ್ಟುವ ಕಾರ್ಯಗಳಿಗೆ ಧರ್ಮಾತೀತ-ಜಾತ್ಯಾತೀತವಾಗಿ ಸಹಕರಿಸಬೇಕು", ಎಂದು ಕರೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಭಿನಂದಿಸಲಾಯಿತು.

ನಾಟಕ;ಹರಪನಹಳ್ಳಿ ಕಲಾತಂಡ ಪ್ರಥಮ, ಉತ್ತಂಗಿ ದ್ವಿತೀಯ, ವಚನಗಾಯನ; ಭುಜಂಗನಗರ ಪ್ರಥಮ, ಉತ್ತಂಗಿ ದ್ವಿತೀಯ, ಚಿತ್ರಕಲೆ;ಹೊಳಲು ಪ್ರಥಮ, ಕೂಡ್ಲಿಗಿ ದ್ವಿತೀಯ, ವಚನ ನೃತ್ಯ; ಕೂಡ್ಲಿಗಿ ಪ್ರಥಮ, ಭುಜಂಗನಗರ ದ್ವಿತೀಯ, ಜಾನಪದ ನೃತ್ಯ; ಕೊಟ್ಟೂರು ಪ್ರಥಮ, ಹೊಳಲು ದ್ವಿತೀಯ ಸ್ಥಾನ ಪಡೆದರು ಎಂದು ತರಳಬಾಳು ಸಂಸ್ಥೆಯ ಮುಖ್ಯೋಪಾಧ್ಯಾಯ ನಾಗರಾಜ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸಿದ್ಧನಗೌಡ, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಮಾಜದ ಹರಪನಹಳ್ಳಿ ತಾಲೂಕು ಅಧ್ಯಕ್ಷ ಮಂಜುನಾಥ ಗುಂಡಗತ್ತಿ, ಕೂಡ್ಲಿಗಿ ತಾಲೂಕು ಅಧ್ಯಕ್ಷ ರಾಜಶೇಖರ ಬಿ, ತರಳಬಾಳು ಕೂಡ್ಲಿಗಿ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಕೆ ಬಿ ಮಂಜುನಾಥ, ಉಪಾಧ್ಯಕ್ಷ ಬಿ ನಾರಪ್ಪ, ಕಾರ್ಯದರ್ಶಿ ಕರಿಬಸವರಾಜ ಹೆಚ್, ಖಜಾಂಚಿ ಬಿ ಶಿವಣ್ಣ, ಮುಖಂಡರಾದ ಕ್ಯಾರಿ ಚನ್ನಪ್ಪ, ಶಿಕ್ಷಣ ಸಂಯೋಜಕ ಮಂಜುನಾಥ, ಸಿ.ಆರ್.ಪಿ. ಶೇಖರಪ್ಪ, ಹಾಗೂ ಹರಪನಹಳ್ಳಿ ವಲಯದ ತರಳಬಾಳು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ