ಬ್ರಿಟಿಷ್ ಕಾಲದ ಗಟ್ಟಿಮುಟ್ಟಾದ ಕಟ್ಟಡಗಳಿಂದ ಬಳ್ಳಾರಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ

 


#ballarynews #latestonbellary #ballarilatestnews

ಬಳ್ಳಾರಿ ನಗರ ಐತಿಹಾಸಿಕ ಹಾಗೂ ಬ್ರಿಟಿಷ್ ಕಾಲದ ಗಟ್ಟಿಮುಟ್ಟಾದ ಕಟ್ಟಡಗಳಿಂದ ಕೂಡಿದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.

ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ನಗರದ ಇತಿಹಾಸ ಹಾಗೂ ಬ್ರಿಟಿಷ್ ಕಾಲದ ಕಟ್ಟಡಗಳ ಕುರಿತು ತಿಳಿಯೋಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಬಳ್ಳಾರಿಯ ಏಕಶಿಲಾ ಬೆಟ್ಟದ ಮೇಲೆ ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸ ಹಂಡೆ ಹನುಮಪ್ಪ ನಾಯಕ ನಿರ್ಮಿಸಿದ ಕೋಟೆ,1869ರಲ್ಲಿ ನಿರ್ಮಾಣಗೊಂಡ ರೈಲ್ವೇ ಸ್ಟೇಷನ್.ಇದರ ವಿಶೇಷತೆ ಎಂದರೆ 1921 ಅಕ್ಟೋಬರ್ 1 ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಈ ಸ್ಥಳದಲ್ಲಿ ವಿಶ್ರಾಂತಿ ಪಡೆದಿರುವುದು.

ಕಡಪ,ಕರ್ನೂಲು,ಅನಂತಪುರಗಳನ್ನು ಒಳಗೊಂಡ ಬಳ್ಳಾರಿ ಜಿಲ್ಲೆಗೆ 1800ರಲ್ಲಿ  ಸರ್ ಥಾಮಸ್ ಮುನ್ರೋ ಅವರು ಮೊಟ್ಟಮೊದಲ ಜಿಲ್ಲಾಧಿಕಾರಿಯಾಗಿ ಬಂದು ಅಧಿಕಾರ ನಡೆಸಿದ ಈಗಿನ ಜಿಲ್ಲಾಧಿಕಾರಿ ಕಚೇರಿ,1872ರಲ್ಲಿ ನಿರ್ಮಾಣಗೊಂಡ ಕೇಂದ್ರ ಕಾರಾಗೃಹ, ಅಲ್ಲಿಪುರ ಕಾರಾಗೃಹ, ಟಿ.ಬಿ.ಸ್ಯಾನಟೋರಿಯಂ ಕಾರಾಗೃಹ, ಹಳೆ ಕೇಂದ್ರ ಅಂಚೆ ಕಛೇರಿ, ಜಿಲ್ಲಾಧಿಕಾರಿಗಳ ವಸತಿ ಗೃಹ,ಸಾಂಸ್ಕೃತಿಕ ಸಮುಚ್ಚಯ ಕಟ್ಟಡಗಳು ಇತಿಹಾಸ ನೆನಪಿಸುತ್ತವೆ.

ಇದರ ಜೊತೆಗೆ ಇತ್ತೀಚೆಗೆ 121ಕೋಟಿ ಹಣದಲ್ಲಿ ನಿರ್ಮಾಣಗೊಂಡ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಎಂಥವರನ್ನೂ ಕೈಬೀಸಿ ಕರೆಯುತ್ತಿದೆ ಎಂದು ಹೇಳಿದರು.

ಶಿಕ್ಷಕರಾದ ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಸುಮತಿ, ಸುಧಾ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ, ಮನೋಹರ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ