ಗುಣಮಟ್ಟದ ಶಿಕ್ಷಣಕ್ಕೆ ಶಾಲೆಗಳು ಒತ್ತು ನೀಡಬೇಕು
ಕೂಡ್ಲಿಗಿ: ಸ್ಪರ್ಧಾತ್ಮಕ ಮನೋಭಾವ ರೂಪಿಸಲು ಪ್ರತಿಭಾ ಕಾರಂಜಿ ಕಲೋತ್ಸವದಂತ ಕಾರ್ಯಕ್ರಮಗಳು ಅಗತ್ಯವಾಗಿದ್ದು ಮೂಲಕ ಪ್ರತಿಭೆಗಳನ್ನು ಗುರುತಿಸಬಹುದಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಂದು ಶಾಸಕ ಡಾ. ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಜುಮ್ಮೊಬನಹಳ್ಳಿ ಮ್ಯಾಸರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಹೂಡೇಂ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಅಡಿಯಲ್ಲಿ ಕೂಡ್ಲಿಗಿ ತಾಲ್ಲೂಕಿಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಈ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ.
ಆರ್ಥಿಕವಾಗಿ ಹಿಂದುಳಿದಿರುವುದರಿಂದ ಅಭಿವೃದ್ಧಿ ಚಿಂತನೆಯಲ್ಲಿ ಶಿಕ್ಷಣಕ್ಕೆ ಹೆಬ್ಬಾಗಿಲು ಆಗಬೇಕಾಗಿದೆ. ನಾವು ಎಲ್ಲರೂ ಶ್ರಮ ವಹಿಸಿ ಗುಣಮಟ್ಟ ಶಿಕ್ಷಣಕ್ಕೆ ಒತ್ತುಕೊಡುವ ನೆಲೆಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಭಾಗದಲ್ಲಿ ವಸತಿ ಶಾಲೆಗಳ ಬೇಡಿಕೆ ಹೆಚ್ಚು ಇರುವುದರಿಂದ ಹುರುಳಿಹಾಳು ಹಾಗೂ ಬಿಷ್ಣಹಳ್ಳಿ ವಸತಿ ಶಾಲೆಗಳು ಈಗಾಗಲೇ ನಿರ್ಮಾಣ ಹಂತದಲ್ಲಿ ಇವೆ. ಅಧಿಕಾರಿಗಳು ಸಹಿತ ಶ್ರಮವಹಿಸಿ ವಸತಿಶಾಲೆಗಳ ನಿರ್ಮಾಣಕ್ಕೆ ಸಿದ್ಧರಾಗಿದ್ದಾರೆ. ಈ ವೇಳೆ ಜೆ ಮ್ಯಾಸರಹಟ್ಟಿ ಗ್ರಾಮದ ಗಣ್ಯಮಾನ್ಯರು ಪ್ರೌಢಶಾಲೆಯ ಬೇಡಿಕೆಯನ್ನು ಒದಗಿಸಿಕೊಡಲು ಶಾಸಕರಿಗೆ ಮನವಿ ಮಾಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಸಾಕಮ್ಮ ಬೋರೆಯ ವಹಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಮಾಜಿ ತಾ.ಪಂ ಸದಸ್ಯರು ನೇತ್ರ ಜಿ ಓಬಣ್ಣ, ಉಪಾಧ್ಯಕ್ಷೆ ಗಂಗಮ್ಮ, ಮಾಜಿ ಗ್ರಾ.ಪಂ ಚನ್ನಬಸಮ್ಮ, ಮುಖಂಡರಾದ ಪಾಪ ಮುತ್ತಿ, ಸಿ ಆರ್ ಪಿ ಹೊಸಹಳ್ಳಿ ಜಿಲ್ಲನ್ ಭಾಷ್, ಮಂಜುನಾಥ, ಜಿನಾಬಿ, ಬಿಆರ್ಪಿ ನಾಗವೇಣಿ, ಶಿಕ್ಷಕರು ನಿಂಗಪ, ಮುಖ್ಯ ಶಿಕ್ಷಕರು ರಂಗಪ್ಪ, ಬಿ.ಹಾಲೇಶ್ ಕಾಂಗ್ರೆಸ್ ಮುಖಂಡ ಜಿ ಓಬಣ್ಣ ಸೇರಿದಂತೆ ಶಾಲೆ ಶಿಕ್ಷಕರು, ಮುಖಂಡರು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ