ಕೆ. ರಾಯಪುರ ಗ್ರಾಮದ ಬಾಲಕ ಸಾವು ದುರಂತ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸ್ಥಳಕ್ಕೆ ಬೇಟಿ,ಎರಡು ಲಕ್ಷ ನೆರವು.

ಕೂಡ್ಲಿಗಿ : ತಾಲೂಕಿನ ಕೆ. ರಾಯಪುರ ಗ್ರಾಮದಲ್ಲಿ ಗುಡಿಸಲು ಬಂಡೆ ಕುಸಿದು ನಾಲ್ಕು ವರ್ಷದ ಬಾಲಕ ತೇಜಸ್ ಮೃತ ಪಟ್ಟ ಕುಟುಂಬಕ್ಕೆ ವಸತಿ, ಅಲ್ಪಸಂಖ್ಯಾತರ ಹಾಗೂ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ವೈಯಕ್ತಿಕವಾಗಿ ಎರಡು ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು, ಮಂಗಳವಾರ ಘಟನೆ ತಿಳಿದು ಶಾಸಕ ಶ್ರೀನಿವಾಸ್ ಜತೆಗೂಡಿ ಗ್ರಾಮಕ್ಕೆ ಭೇಟಿ ನೀಡಿ ಮಗುವಿನ ತಂದೆ ಶಾಂತಕುಮಾರ್ -ತಾಯಿ ಮಲ್ಲೇಶ್ವರಿಗೆ ದುರಂತದ ಕುರಿತು ಸಾಂತ್ವನ ಹೇಳಿ ಶಾಸಕರು ಹಾಗೂ ಸಚಿವರು ಎರಡು ಲಕ್ಷ ಪರಿಹಾರ ನೀಡಿದರು. ಹಾಗೆ ಇವರಿಗೆ ಮನೆ ಇಲ್ಲದೆ ಇರುವುದನ್ನು ತಿಳಿದು ವಸತಿ ಸಚಿವರು ತಮ್ಮ ಅಧಿಕಾರಿಗಳನ್ನು ಕರೆದು ಆ ಬಡ ಕುಟುಂಬಕ್ಕೆ 

ರಾಜೀವ್ ಗಾಂಧಿ ವಸತಿ ನಿಗಮದಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಡುವ ಭರವಸೆ ಸಹ ನೀಡಿದರು.ಹಾಗೂ ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಯಿಂದಲೂ ನೆರವು ಕೊಡಿಸುವುದಾಗಿ ಹೇಳಿದರು.

ಶಾಸಕ ಶ್ರೀನಿವಾಸ್ ಈ ಸಂದರ್ಭದಲ್ಲಿ DSS. ಮುಖಂಡ ಚಂದ್ರು ಇವರು ಮಗುವಿನ ಘಟನೆಯ ದುರಂತದ ವಿಷಯ ತಿಳಿಸಿ ಕೆಲವು ಫೋಟೋಗಳನ್ನು ಶಾಸಕರಿಗೆ ವಾಟ್ಸಾಪ್ ಕಳಿಸಿದ ತಕ್ಷಣ ಶಾಸಕರು ಈ ವಿಷಯವನ್ನು ತುಂಬಾ ಗಂಬೀರವಾಗಿ ತೆಗೆದುಕೊಂಡು ಘಟನೆಯ ಬಗ್ಗೆ ಸಚಿವರಿಗೆ ತಿಳಿಸಿ,ಈ ದಿನ ಸಮಯ ಬಿಡುವು ಮಾಡಿಕೊಂಡು ಗ್ರಾಮಕ್ಕೆ ಮಂಗಳವಾರ ರಾತ್ರಿ ಸಮಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮಗುವನ್ನು ಕಳೆದುಕೊಂಡಿದ್ದ ದಲಿತ ಕುಟುಂಬಕ್ಕೆ ಧೈರ್ಯ ತುಂಬಿದರು. ಹಾಗೆ ಪತ್ರಿಕಾ ಮಾಧ್ಯಮದವರಿಗೆ ಶಾಸಕರಾದ N.T. ಶ್ರೀನಿವಾಸ್ ವರಿಗೆ ಈ ಹಿಂದೆ ಇಂತ ಘಟನೆಗಳು ಆಗಿರಬದು ಆದರೆ ಇಂತ ಸುದ್ದಿ ತಿಳಿದ ತಕ್ಷಣವೇ ಯಾವ ಸಚಿವರು ಸ್ಥಳಕ್ಕೆ ಬೇಟಿ ನೀಡಿರಲಿಲ್ಲಾ ಆದರೆ ನಮ್ಮ ನೆಚ್ಚಿನ ಜಿಲ್ಲಾ ಮಂತ್ರಿಗಳಾದ ಜಮೀರ್ ಅಹಮದ್ ಖಾನ್ ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ಬೇಟಿ ನೀಡಿ ತಮ್ಮ ವೈಯಕ್ತಿಕ ಪರಿಹಾರ ನೀಡಿದ ಸಚಿವರಿಗೆ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಸಂರ್ಭದಲ್ಲಿ ಕೆಲವು ಅಧಿಕಾರಿಗಳು ದಲಿತ ಮುಖಂಡರುಗಳು ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ