ಶಾಸಕರ ಕಾರ್ಯಾಲದ ಮುಂಭಾಗದಲ್ಲಿರುವ ರಸ್ತೆಗೆ ಶ್ರೀ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಎಂದು ಮನವಿ
ಮಸ್ಕಿ : ತಾಲೂಕಿನ ಶಾಸಕರ ಕಾರ್ಯಾಲದ ಮುಂಭಾಗದಲ್ಲಿರುವ ರಸ್ತೆಗೆ ಶ್ರೀ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಹಾಗೂ ಪುರಸಭೆಯ ಹೊಸ ಮಳಿಗೆ ಪಕ್ಕದಲ್ಲಿ ಶ್ರೀ ಭಗವಾನ್ ವಿಶ್ವಕರ್ಮ ಎಂದು ನಾಮಫಕಲ ಹಾಕಲು ಪರವಾನಿಗೆ ನೀಡಬೇಕೆಂದು ಮಸ್ಕಿ ತಾಲೂಕಿನ ವಿಶ್ವಕರ್ಮ ಸಮಾಜ ವತಿಯಿಂದ ಪುರಸಭೆ ಮುಖ್ಯ ಅಧಿಕಾರಿಗೆ ಮನವಿ ಮಾಡಿದರು.
ಮಸ್ಕಿ ತಾಲೂಕಿನ ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಶಾಸಕರ ಕಾರ್ಯಾಲದ ಮುಂಭಾಗದಲ್ಲಿರುವ ರಸ್ತೆಯಲ್ಲಿ ಹಳೆಯ ಪುರಾತನ ದೇವಸ್ಥಾನವಿದ್ದು ಅ ರಸ್ತೆಗೆ ಶ್ರೀ ಕಾಳಿಕಾದೇವಿ ರಸ್ತೆ ಎಂದು ಹೆಸರಿಡಬೇಕು ಮತ್ತು ಮಸ್ಕಿ ತಾಲೂಕಿನಲ್ಲಿ ಹಲವಾರು ವೃತ್ತಗಳಿಗೆ ಗಣ್ಯ ಮಾನ್ಯರು ಸಮಾಜ ಸುಧಾಕರರವರುಗಳ ಹೆಸರುಗಳು ಇದ್ದು. ವಿಶ್ವಕರ್ಮ ಸಮಾಜದ ಯಾವ ರಸ್ತೆ ಅಥವಾ ವೃತ್ತಕ್ಕೂ ಹೆಸರು ಇಲ್ಲದ ಕಾರಣ ವಿಶ್ವಕರ್ಮ ಸಮಾಜದ ಸೃಷ್ಟಿ ಕರ್ತ ಶ್ರೀ ಭಗವಾನ್ ವಿಶ್ವಕರ್ಮ ಇವರ ಹೆಸರಿನ ನಾಮಫಕಲ ಹಾಕಲು ಪರವನಿಗೆ ನೀಡಬೇಕು ಈ ಹಿಂದೆ ಪುರಸಭೆ ಮುಖ್ಯಾಧಿಕಾರಿ ಗಳು ವಿಶ್ವಕರ್ಮ ಸಮಾಜದ ವತಿಯಿಂದ ಮನವಿ ಪತ್ರ ನೀಡಿದರು ಈ ಕೆಲಸ ಆಗಿರಲಿಲ್ಲ ಆದ್ದರಿಂದ ವಿಶ್ವಕರ್ಮ ಸಮಾಜದವರು ಶಾಸಕರ ಗಮನಕ್ಕೆ ತಂದ ನಂತರ ಶಾಸಕರು ಮನವಿ ಪತ್ರವನ್ನು ಪುರಸಭೆಗೆ ಮುಖ್ಯ ಅಧಿಕಾರಿಗೆ ಸಲ್ಲಿಸಿ ಎಂದು ತಿಳಿಸಿದರು. ನಂತರ ಸಮಾಜದವರೆಲ್ಲ ಸೇರಿ ಪುರಸಭೆ ಮುಖ್ಯ ಅಧಿಕಾರಿ ನರಸ ರೆಡ್ಡಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯ ಬಡಿಗೇರ್, ಅಮರೇಶ ಪತ್ತಾರ್, ಮೌನೇಶ ಬಡಿಗೇರ್, ಅಮರೇಶ ಪತ್ರಕರ್ತರು, ಕಾಳಪ್ಪ ಕಣ್ಣೂರು, ದೇವರಾಜ ಕಂಬಾರ, ರಾಮಚಂದ್ರಪ್ಪ ಪತ್ತಾರ್, ಮೌನೇಶ ಬಡಿಗೇರ ಜಂಬಲದಿನ್ನಿ, ಮಂಜುನಾಥ ಹಸಮಕಲ್, ಪಿ.ಕಾಲೊಪ್ಪ, ವೀರೇಶ್ ಬಡಿಗೇರ್, ಕಾಳಪ್ಪ ಪತ್ತರ್,ಮಹೇಶ್ ಬುದ್ಧಿನ್ನಿ, ಸಂತೋಷ್ ಪತ್ತರ್, ಸೋಮನಾಥ ಬಡಿಗೇರ್ ಹಾಗೂ ಇತರರು ಭಾಗಿಯಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ