ಬಸಾಪೂರ ಕೆರೆ ಮಾರಾಟ : ಹೈಕೋರ್ಟ್ ಮಧ್ಯಂತರ ಆದೇಶ
AISL/MSPL ಕಂಪನಿಯ ವಿರುದ್ಧ : ಕ್ರಮಕ್ಕೆ ಆಗ್ರಹ
ವರದಿ- ಮಂಜುನಾಥ್ ಕೋಳೂರು, ಕೊಪ್ಪಳ
ಕೊಪ್ಪಳ : ಜಲ ಸಂರಕ್ಷಣೆಗೆ ಕೆರೆಗಳ ನಿರ್ಮಾಣಕ್ಕೆ ರೈತರ ಸ್ವಂತ ಜಮೀನೇ ನೀಡಿದ ಉದಾರಹಣೆಗಳು ಸಾಕಷ್ಟವೆ.
ಇದರ ಏತನ್ಮಧ್ಯೆ ಕೊಪ್ಪಳ ತಾಲೂಕಿನ ಬಸಾಪೂರ ಕೆರೆಯನ್ನು ಅಂದಿನ ಸರ್ಕಾರ AISL/MSPL ಕಂಪನಿಗೆ ಸರ್ವೆ ನಂಬರ್ 143 ರಲ್ಲಿ 44 ಎಕರೆ 35 ಗುಂಟೆಯ ವಿಸ್ತೀರ್ಣವನ್ನು ಕೇವಲ 33 ಲಕ್ಷ 95 ಸಾವಿರಕ್ಕೆ ಮಾರಾಟ ಮಾಡಿದ್ದನ್ನು ಇಲ್ಲಿನ "ಕೊಪ್ಪಳ ಜಿಲ್ಲಾ ಬಚಾವ್ ಆಂದೋಲನ" ಸಮಿತಿ ಅವರು ಹೋರಾಟ ಮಾಡಿ, ನಂತರದಲ್ಲಿ ಅದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲ (WP : 5713/2009) ಹೈಕೋರ್ಟ್ ಮೊರೆ ಹೋಗಿದ್ದರು. ಈ ಬೆನ್ನೆಲ್ಲೆ 5/1/2022ರಲ್ಲಿ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಈ ಕೆರೆಯ ಕುರಿತು, ಸಾಕು ಪ್ರಾಣಿ, ಪಕ್ಷಿ, ಮನುಷ್ಯರಿಗೂ ಬಳೆಕೆ ಪೂರಕವಾಗಿದೆ ಎಂದು ಯತಾಃಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಷರತ್ತು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಆಂದೋಲನದ ಪ್ರಮುಖ ಮುಖಂಡರಾದ ಡಿ.ಎಚ್.ಪೂಜಾರ, ಅಲ್ಲಮಪ್ರಭು ಬೆಟ್ಟದೂರು, ಜಿ.ಎಸ್.ಗೋನಾಳ, ಮೈಲಾರಪ್ಪ ಲಿಂಗದಹಳ್ಳಿ ಬಸಾಪೂರ, ಯಮನೂರಪ್ಪ ಹಾಲಹಳ್ಳಿ, ಶಿವಯ್ಯ ಹಿರೇಮಠ, ಫಕೀರಪ್ಪ ಬಂಗ್ಲಿ ಸೇರಿದಂತೆ ಇತರೆ ಸಂಘಟಕರು ಆರೋಪಿಸಿದರು. ಪ್ರಸ್ತುತ ಕಂಪನಿಯವರು ಈಗಾಗಲೇ ತಡೆ ಗೋಡಿಯನ್ನು ತರಾತುರಿಯಲ್ಲಿ ನಿರ್ಮಿಸುತ್ತಿದ್ದು, ಇದನ್ನು ತತ್ತಾಕ್ಷಣವೇ ನಿಲುಗಡೆಗೊಳಿಸಬೇಕು. ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನೇ ಕೊಪ್ಪಳ ಜಿಲ್ಲಾಡಳಿತ ನಿಂದನೆ ಮಾಡುತ್ತಿದೆ ಎಂದು ಜನರಿಗೆ ಅನುಮಾನ ಹುಟ್ಟುತ್ತಿದೆ. ಶೀಘ್ರವಾಗಿ ಕೆರೆಯ ಸಂರಕ್ಷಣೆ ಮಾಡಿ ಅದನ್ನು ಪುನಃ ರೈತರ ಬಳಕೆಗೆ ನೀಡಬೇಕು ಎಂದು ಒತ್ತಾಯಿಸಿದರು. ಈ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದೇ ಇದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ