*ಅಭಿವೃದ್ಧಿಯ ಪಥದತ್ತ ಪಿಕಾರ್ಡ್ ಬ್ಯಾಂಕ್*
ಕೊಟ್ಟೂರು: ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಾಲ ಹಂಚಿಕೆ ಹಾಗೂ ವಸೂಲಾತಿ ಸುಗಮವಾಗಿ ನಡೆಯುತ್ತಿದ್ದು ಬ್ಯಾಂಕ್ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎಂದು ಶ್ರೀ ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೆ.ಸಿದ್ದಪ್ಪ ಹೇಳಿದರು.
ಪಟ್ಟಣದ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ 2022-23 ನೇ ಸಾಲಿನ ವಾರ್ಷಿಕ ಮಹಾಜನ ಸಭೆ ಉದ್ಘಾಟಿಸಿ ಮಾತನಾಡಿ ನಬಾರ್ಡ್ ವಿಭಾಗದಿಂದ 65.37 ರಷ್ಟು ವಸೂಲಾತಿಯಾಗಿದ್ದು ಬಿ.ಡಿ.ಬಿ ವಿಭಾಗದಿಂದ 82.01 ರಷ್ಟು ವಸೂಲಾತಿಯಾಗಿರುತ್ತದೆ, ಮುಂದಿನ ಸಾಲಿನಲ್ಲಿ ಶೇ 90 ರಷ್ಟು ವಸೂಲಾತಿಗೆ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ನ್ನು ಕೊಟ್ಟೂರಿನಿಂದ ಕೂಡ್ಲಿಗಿಗೆ ಪ್ರತ್ಯೇಕ ಸ್ಥಾಪನೆಗೆ ಕಳೆದ ಸಾಲಿನಲ್ಲಿ 45 ದಿನಗಳ ಅವಧಿ ಒಳಗೆ 750 ಷೇರುಗಳ ಸಂಗ್ರಹಕ್ಕೆ ಸಹಕಾರ ಸಂಘಗಳ ಉಪನಿಬಂಧಕರು ಆದೇಶಿಸಿದ್ದರೂ ನಿಗದಿತ ಅವಧಿ ಒಳಗೆ ಗುರಿ ಮುಟ್ಟದ ಕಾರಣ ಕೂಡ್ಲಿಗಿಯಲ್ಲಿ ಸ್ಥಾಪನೆಗೆ ಹಿನ್ನಡೆಯಾಗಿದೆ ಆದ ಕಾರಣ ಈ ವರ್ಷ ಸ್ಥಾಪನೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯರು, ನಿರ್ದೇಶಕರಾದ ಡಾ.ಬಿ.ಕೆ ಜಯಾನಂದ, ಡಿ.ನಾಗೇಶ್, ಪಿ.ಎಚ್.ರಾಘವೇಂದ್ರ, ಎಚ್.ಬಿ.ಸತೀಶ್, ಟಿ.ಬಸವರಾಜ್, ಬಿ.ಡಿ.ಸೋಮಣ್ಣ, ಟಿ.ಬಸವೇಶ್ವರ, ಮಮತ, ಕೆ.ಶಿವಪ್ಪ, ಜೆ.ಆರ್ ಸಿದ್ದೇಶ್ವರ, ಕೆ.ಬಸಪ್ಪ, ಮುಖಂಡರಾದ ಸಾವಜ್ಜಿ ರಾಜೇಂದ್ರಪ್ರಸಾದ್, ಕೆ.ಎಂ.ಶಶಿಧರ್, ಎಂ.ಜಿ.ಸ್ವಾಮಿ, ಟಿ.ಎಂ.ಸೋಮಯ್ಯ, ಕೆ.ಟಿ.ಸುಭಾಸ್ ಚಂದ್ರ ಹಾಗೂ ಪ್ರಭಾರಿ ವ್ಯವಸ್ಥಾಪಕ ಎಂ.ಸಾಮ್ಯನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ