ಮನೆ ಮನೆಗೂ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ : ಇರಕಲ್ ಮಠದ ಶ್ರೀ ಕರೆ
ಮಸ್ಕಿ : ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ವತಿಯಿಂದ ಪರಿಸರ ಮತ್ತು ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಮಣ್ಣಿನಿಂದ ತಯಾರಿಸಿರುವ ಪರಿಸರ ಸ್ನೇಹಿ ಗಣೇಶ್ ಮೂರ್ತಿಯನ್ನು ಭಕ್ತರಿಗೆ ಉಚಿತವಾಗಿ ವಿತರಿಸುವ ಮಹತ್ವದ ಕಾರ್ಯಕ್ಕೆ ಇಂದು ಇರಕಲ್ ಮಠದ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಚಾಲನೆ ನೀಡಿದರು.
ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ ಇವರು ಯುವಕರ ಜೊತೆಗೂಡಿಸಿಕೊಂಡು ನಿರಂತರವಾಗಿ ಪ್ರಕೃತಿಮಾತೆಯ ಸೇವೆಗೆ ಪಣತೊಟ್ಟು ನಿಂತಿದ್ದಾರೆ ಇದೀಗ ಕೆಂಪು ಮಣ್ಣು ಹಾಗೂ ಸಗಣಿ ಬಳಸಿ ಅದರಲ್ಲಿ ವಿವಿಧ ಜಾತಿಯ ಬೀಜಗಳನ್ನು ಸೇರಿಸಿ ತಯಾರಿಸಿರುವ ಪರಿಸರ ಪ್ರೇಮಿ 101 ಗಣಪತಿಯನು ವಿತರಿಸುತ್ತಿದ್ದಾರೆ ಎಲ್ಲಾ ಭಕ್ತರು ಈ ಮಣ್ಣಿನ ಗಣಪತಿಯನ್ನು ತೆಗೆದುಕೊಂಡು ಪ್ರತಿಷ್ಠಾಪನೆ ಮಾಡಿ ಅರ್ಥಪೂರ್ಣ ಗಣೇಶ್ ಚತುರ್ಥಿ ಹಬ್ಬವನ್ನು ಆಚರಿಸಿ ಎಂದರು.
ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ ಪ್ರತಿವರ್ಷದಂತೆ ಇಂದು 4 ನೇ ವರ್ಷ 101 ಮಣ್ಣಿನ ಗಣೇಶ್ ಮುರ್ತಿಯನ್ನು ಭಕ್ತರಿಗೆ ಪರಿಸರ ಪ್ರೇಮಿಗಳಿಗೆ ಉಚಿತವಾಗಿ ನೀಡಿದರು .
ಈ ಬಾರಿ ಅತಿಯಚ್ಚು ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ ಪರಿಸರ,ಜಲ,ಪ್ರಾಣಿ, ಪಕ್ಷಿ ಗಳನ್ನು ರಕ್ಷಣೆ ಮಾಡಿ ಎಂದು ಈ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಫೌಂಡೇಶನ್ ಸದಸ್ಯರು ಬಿ ಮೌನೇಶ್, ಬಿ ಹನುಮಂತ್, ಸಂದೀಪ್, ಹಾಗೂ ಶ್ರೀ ಮಠದ ಭಕ್ತಾದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ