ತಾಲೂಕು ರೈತ ಸಂಪರ್ಕ ಕೇಂದ್ರಕ್ಕೆ ಅಧಿಕಾರಿಗಳು ನ್ನು ನೇಮಿಸಿ : ವಿಜಯ ಬಡಿಗೇರ ಒತ್ತಾಯ.

ಮಸ್ಕಿ : ತಾಲೂಕು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಇಲ್ಲದ ಕಾರಣ ರೈತರಿಗೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ, ಕೂಡಲೆ ಅಧಿಕಾರಿಗಳನ್ನ ಸ್ಥಳ ನಿಯೋಜನೆ ಮಾಡಬೇಕು ಎಂದು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಮಸ್ಕಿ ವತಿಯಿಂದ ಶಾಸಕರ ಕಾರ್ಯಾಲಯ ವಿಧಾನಸೌಧ ಕ್ಷೇತ್ರ ಮಸ್ಕಿ ಇವರಿಗೆ ಮನವಿಯನ್ನು ಸಲ್ಲಿಸಿದರು.


ಈ ವೇಳೆ, ತಾಲೂಕ ಅಧ್ಯಕ್ಷ ವಿಜಯ ಬಡಿಗೇರ ಮಾತನಾಡಿ,

ಮಸ್ಕಿ ತಾಲೂಕು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಸುಮಾರು ಎಂಟು ಒಂಬತ್ತು ತಿಂಗಳಾದರು ರೈತ ಸಂಪರ್ಕ ಕೇಂದ್ರಕ್ಕೆ ಅಧಿಕಾರಿಗಳೇ ಇಲ್ಲದಂತಾಗಿದೆ. ರೈತರಿಗೆ ಮುಂಗಾರು, ತೊಗರಿ ಬೀಜ, ಸ್ಯಾಂಪಲ್, ರೈತ ಸಂಪರ್ಕ ಕೇಂದ್ರಕ್ಕೆ ಬಂದರು. ಯಾವೊಬ್ಬ ರೈತರಿಗೆ ತಲುಪಿರುವುದಿಲ್ಲ, ಹಾಗೂ ಹಿಂಗಾರು ಪ್ರಾರಂಭವಾಗಿದ್ದು ಕಡ್ಲೆ ಬಿಜಾ ಭಿತ್ತನೆ ಕೂಡಲೇ ವಿತರಿಸಬೇಕು, ಹಾಗೆ 8 ತಿಂಗಳ ಹಿಂದೆ ತಾಡುಪತ್ರಗಳು(ತಾಡಪಲ) ಕೂಡ ರೈತ ಸಂಪರ್ಕ ಕೇಂದ್ರದಲ್ಲಿ ಬಂದಿದ್ದರು. ಕೂಡ ಅಧಿಕಾರಿಗಳು ಇಲ್ಲಿಯವರೆಗೂ ಹಂಚಿಕೆ ಮಾಡಿರುವುದಿಲ್ಲ. ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿ ಇರುವಂತ ಸಿಬ್ಬಂದಿಗಳಿಗೆ ಕೇಳಿದರೆ ಅವರು ಹೇಳುವ ಮಾತು ಅಧಿಕಾರಿಗಳು ಇಲ್ಲದ ಕಾರಣ ನಾವು ಏನು ಮಾಡಕ್ ಆಗೋದಿಲ್ಲ ಎಂದು ಆರಿಕೆ ಉತ್ತರ ಕೊಡುತ್ತಾರೆ, ಇದರಿಂದ ರೈತರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ತಕ್ಷಣದಲ್ಲಿ ಒಂದು ವಾರದ ಒಳಗಡೆ ಅಧಿಕಾರಿಗಳನ್ನು ನೇಮಕ ಮಾಡಬೇಕು.

ಒಂದು ವೇಳೆ ಒಂದು ವಾರದ ಒಳಗಡೆ ಅಧಿಕಾರಿಗಳನ್ನು ಸ್ಥಳ ನಿಯೋಜನೆ ಮಾಡದೆ ಹೋದಲ್ಲಿ, ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಇಲ್ಲವಾದರೆ ಶಾಸಕರ ಕಾರ್ಯಾಲಯ ಮುಂಭಾಗದಲ್ಲಿ ಧರಣಿ ಮಾಡಬೇಕಾಗುತ್ತದೆ ತಮಗೆ ಎಚ್ಚರಿಸುತ್ತಿದ್ದೇವೆ ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ,ದುರುಗಪ್ಪಕಡೆಮನಿ,ಜಾಕೋಬ,ಶಿವಕುಮಾರ ವಿಭೂತಿ, ಆಲಮಪ್ಪ,ದುರಗಪ್ಪ ಉಪ್ಪೇರಿ,ತಿಮ್ಮಣ್ಣ ಸಾಹುಕಾರ್,ಬಸವರಾಜ ವಿಭೂತಿ,ನಾಗರಾಜ್ ಸುಂಕನೂರು,ಬಸವರಾಜ ಅಗಸ್ತ್ಯ ತಿಮ್ಮಣ್ಣ ಭೋವಿ,ಹಾಗೂ ಸಂಘಟನೆಯ ಪದಾಧಿಕಾರಿಗಳು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ