*ಭರತನಾಟ್ಯ ಕಲೆ ಉಳಿಸಿ, ಬೆಳೆಸುವ ಕಾರ್ಯವಾಗಲಿ: ಶಾಸಕ ಡಾ.ಎನ್.ಟಿ ಶ್ರೀನಿವಾಸ್*

ಕೂಡ್ಲಿಗಿ: ಭರತನಾಟ್ಯ ಕಲೆ ಭಾರತೀಯ ಸಂಸ್ಕೃತಿಯ ಪುರಾತನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಶಾಸಕ ಡಾ ಎನ್‌.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಕಾನ ಹೊಸಹಳ್ಳಿಯ ಗಾಣಿಗರ ಸಮುದಾಯ ಭವನದಲ್ಲಿ ಭಾನುವಾರ ರಾತ್ರಿ ನಡೆದ ಲಾಸಿಕ ಫೌಂಡೇಶನ್ ವತಿಯಿಂದ ಪ್ರಸ್ತುತಿ ಕು" ಮೇಘನ ಎ.ಸಿ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿದರು 

ನಂತರ ಮಾತನಾಡಿದರು. ತಾಲೂಕಿನಡೆಗೆ ಬಂದಿರುವುದು ಸಂತಸದ ವಿಚಾರವಾಗಿದೆ. ಕು" ಮೇಘನಾ ರವರ ಭರತನಾಟ್ಯ ರಂಗ ಪ್ರವೇಶ ನೃತ್ಯ ಕಾನ ಹೊಸಹಳ್ಳಿ ಗ್ರಾಮೀಣ ಭಾಗದಿಂದ ದೇಶ, ವಿದೇಶದಲ್ಲಿ ಪ್ರಜ್ವಲಿಸಲಿ, ಕಲೆ ಯಾರದೇ ಸೊತ್ತಲ್ಲ. ಕಲೆ ಬಡವರು, ಶ್ರೀಮಂತರೆನ್ನದೇ ಯಾರು ಕಷ್ಟಪಟ್ಟು ಸಾಧನೆ ಮಾಡುತ್ತಾರೋ ಅವರಲ್ಲಿ ಕಲೆ ನೆಲೆಗೊಳ್ಳೂತ್ತದೆ ಎಂದರು. ಈ ಸಂದರ್ಭದಲ್ಲಿ ಭರತನಾಟ್ಯ ತರಬೇತುದಾರರಾದ ಶ್ವೇತ ಮಂಜುನಾಥ್ ಮಾತನಾಡಿ, ಕು" ಮೇಘನ ಎ.ಸಿ ಸಾಧನೆಯ ಹಿಂದೆ ಅಪಾರವಾದ ಶ್ರಮವಿದೆ. ಇವರ ಸಾಧನೆಗೆ ಇವರ ಕುಟುಂಬದವರು ಬಹಳಷ್ಟು ಬೆಂಬಲ ನೀಡಿದ್ದರಿಂದ ಈ ಸಾಧನೆ ಮಾಡಲು ಅನುಕೂಲವಾಯಿತು ಎಂದರು. ಈ ವೇಳೆ ನಟರಾಜ ದೇವರಿಗೆ ಪೂಜೆ ಸಲ್ಲಿಸಿ ಕು" ಮೇಘನ ಎ.ಸಿ ಇವರಿಂದ ವಿವಿಧ ರೂಪಕಗಳ ಭರತನಾಟ್ಯ ನೃತ್ಯ ನಡೆಯಿತು. ತಂಡದವರು ಮೃದಂಗ, ವಾಯೋಲಿನ್ ನುಡಿಸುವುದರ ಮೂಲಕ ಸಾಥ್ ನೀಡಿದರು. ಈ ಕಾಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ರಾಮ.ಮ. ಐಮಡಿ ಶರಣಾರ್ಯರ ದಾಸೋಹ ಮಠ ಕಾನಾ ಮಡಗು ಇವರ ವಹಿಸಿದರು, ಮುರುಳಿದಾರ್ ಪಿ ಗಜೇಂದ್ರಗಡ ಕಾರ್ಯದರ್ಶಿಗಳು ವೈಭವ ಶಾಲೆ ಹೊಸಹಳ್ಳಿ, ಶ್ರೀಮತಿ ವಿಜಯಲಕ್ಷ್ಮಿ ಎಸಿ ಚೇತನ್, ಎಸಿ ಚೇತನ್ ಗ್ರಾಮ ಪಂಚಾಯತಿ ಅಧ್ಯಕ್ಷರು ಹೊಸಹಳ್ಳಿ, ಮಂಜುನಾಥ್ ಭಗವತ್ ಕಾರ್ಯದರ್ಶಿಗಳು ಲಾಸಿಕಾ ಫೌಂಡೇಶನ್ ಚಿತ್ರದುರ್ಗ ಸೇರಿದಂತೆ ಕಾನಹೊಸಹಳ್ಳಿ ಸುತ್ತಮುತ್ತಲಿನ ಮುಖಂಡರು ನೂರಾರು ಮಹಿಳೆಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ