ಬರಗಾಲ ಪೀಡಿತ ಪಟ್ಟಿಯಲ್ಲಿ ಸಿಂಧನೂರನ್ನು ಕೈ ಬಿಟ್ಟಿರುವುದು ಖಂಡನೀಯ ನಿರುಪಾದಿ ಕೆ ಗೋಮರ್ಸಿ ಆಕ್ರೋಶ

ಸಿಂಧನೂರು: ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಮಾತನಾಡಿ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಸಿಂಧನೂರು ತಾಲೂಕಿನಾದ್ಯಂತ ಮಳೆ ಕೊರತೆಯಿಂದಾಗಿ ಬೆಳೆ ನಷ್ಟ ಬಿತ್ತನೆ ಸಮಸ್ಯೆ ಎದುರಾಗಿರುವ ನಡುವೆ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸಿಂಧನೂರು ತಾಲೂಕನ್ನು ಕಡೆಗಣಿಸಿರುವುದು ತುಂಬಾ ನೋವಿನ ಸಂಗತಿಯಾಗಿದೆ ಅದರಲ್ಲೂ ರಾಯಚೂರು ಜಿಲ್ಲೆಯ ಲಿಂಗಸುಗೂರು, ಮಾನ್ವಿ, ಸಿರಿವಾರ,ತೀವ್ರ ಬರ ಪೀಡಿತ ತಾಲೂಕುಗಳೆಂದು ದೇವದುರ್ಗ,ಮಸ್ಕಿ ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ ಆದರೆ ತೀವ್ರ ಬರಪೀಡಿತ ತಾಲೂಕಿಗೆ ಅರ್ಹವಾದ ಸಿಂಧನೂರನ್ನ ಪಟ್ಟಿಯಲ್ಲಿ ಕೈ ಬಿಟ್ಟಿರುವುದು ಎಷ್ಟು ಸೂಕ್ತ

ತಾಲೂಕಿನಲ್ಲಿ ತುಂಗಾಭದ್ರ ಎಡದಂಡೆ ನಾಲೆ ನದಿ ಪಾತ್ರದ ವ್ಯಾಪ್ತಿಯಲ್ಲಿ ನೀರಾವರಿ ಭೂಮಿಯ ಹೊರತುಪಡಿಸಿದರೆ ಉಳಿದರೆ ಖುಷ್ಕಿ ಭೂಮಿ ಇದೆ ಪ್ರಸಕ್ತ ವರ್ಷದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಯಾಗದೇ ಇರುವುದರಿಂದ ಖುಷ್ಕಿ ಬೇಸಾಯ ಭೂಮಿಯ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದರು ಬಿತ್ತಿದ ಬೆಳೆ ಬೆಳೆದಿಲ್ಲ ಮುಂಗಾರು ಕೈ ಕೊಟ್ಟ ಬಳಿಕ ಹಿಂಗಾರಿನಲ್ಲೂ ಉತ್ತಮ ಮಳೆಯಾಗಿಲ್ಲ ಈ ನಡುವೆ ನೀರಾವರಿ ಭಾಗದ ರೈತರು ನಿಗದಿತ ಸಮಯಕ್ಕೆ ನಾಟಿ ಮಾಡಲಾಗದೆ ನೀರಿಲ್ಲದೆ ಬೆಳೆ ಒಣಗುವ ಆತಂಕದಲ್ಲಿದ್ದಾರೆ ರೈತರು ಇಷ್ಟೆಲ್ಲ ಕಷ್ಟಗಳು ಅನುಭವಿಸುತ್ತಿದ್ದರು ಸರ್ಕಾರ ಮತ್ತು ಕ್ಷೇತ್ರದ ಶಾಸಕರು ಸಿಂಧನೂರನ್ನ ಬರಪೀಡಿತ ತಾಲೂಕನ್ನಾಗಿ ಘೋಷಿಸದೆ ಇರುವುದು ರೈತರಿಗೆ ಮತ್ತು ಬೇಸಾಯ ವರ್ಗದವರಿಗೆ ಮಾಡಿದ ದೊಡ್ಡ ವಂಚನೆಯಾಗಿದೆ.

ರಾಜ್ಯದಲ್ಲಿ ಬರಪೀಡಿತ ತಾಲೂಕನ್ನು ಆಯ್ಕೆ ಮಾಡುವ ಕುರಿತಂತೆ ಮೊದಲ ಪಟ್ಟಿಯನ್ನು ಸರ್ಕಾರ ಘೋಷಿಸಿದಾಗ ಸಿಂಧನೂರು ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸುವಂತೆ ಕೃಷಿ ಇಲಾಖೆಯಿಂದ ಸರ್ಕಾರಕ್ಕೆ ವರದಿಯನ್ನು ಕಳಿಸಲಾಗಿತ್ತು

ಆದರೆ ಸರ್ಕಾರ ಇದ್ಯಾವುದನ್ನ ಗಮನಿಸದೆ ಇರುವುದು ಅಚ್ಚರಿ ಮೂಡಿಸಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಿಂಧನೂರುಲ್ಲಿ ಅಧಿಕಾರಿಗಳ ತಂಡ ಮರು ಅಧ್ಯಯನ ನಡೆಸಿ ಸಿಂಧನೂರು ತೀವ್ರ ಬರಪೀಡಿತ ತಾಲೂಕ ಎಂದು ಘೋಷಿಸಬೇಕು ಇಲ್ಲದಿದ್ದರೆ ಕೆ ಆರ್ ಎಸ್ ಪಕ್ಷ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ