ಬರವನ್ನು ತಪ್ಪಿಸಲು ಕೃಷಿಯೇತರ ಚಟುವಟಿಕೆ ಅಳವಡಿಸಿ

  

ಕೊಪ್ಪಳ ತಾಲೂಕಿನ ಲೇಬಗೆರೆ ಸಂಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿ ತರಬೇತಿ ಆಯೋಜಿಸಲಾಯಿತು ಸಭೆಯಲ್ಲಿ ಮಾನ್ಯ ಯೋಜನಾಧಿಕಾರಿಗಳು ಶ್ರೀ ರಘುರಾಮ್ ಅವರು ಕೊಪ್ಪಳ ಸಿರಿ ರೈತರ ಉತ್ಪಾದಕಂಪನಿಯ ಮಂಜುನಾಥ್

 ಸೋಲಾರ್ ಕಂಪನಿಯ ದೊಡ್ಡ ಬಸವರಾಜ

 ಕೃಷಿಕರು ಕಂಪನಿ ನಿರ್ದೇಶಕರಾದ ಪ್ರಾಣೇಶ್ ಆ ನಾಗಪ್ಪ ವಸಂತ್ ಶಶಿಧರ್ ಹನುಮಂತಪ್ಪ ಯೋಜನೆಯ ಕೃಷಿ ಮೇಲ್ವಿಚಾರಕ ಜಗದೀಶ್ ಉಪಸ್ಥಿತರಿದ್ದರು


 ಯೋಜನೆಯು ಹತ್ತಾರು ಕೃಷಿ ಕೃಷಿಯೇತರ ಸ್ನೇಹಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಹಲವು ಅನುದಾನಗಳನ್ನು ಸ್ವಸಹಾಯ ಸಂಘದ ಸದಸ್ಯರು ಪ್ರಗತಿ ನಿಧಿಯನ್ನು ಪಡೆದುಕೊಂಡು ಹೈನುಗಾರಿಕೆ ಕುರಿ ಸಾಕಾಣಿಕೆ ಆಡು ಸಾಕಾಣಿಕೆ ಕೋಳಿ ಸಾಕಾಣಿಕೆ ರೇಷ್ಮೆ ಸಾಕಾಣಿಕೆ ಅಣಬೆ ಬೇಸಾಯ ರೇಷ್ಮೆ ಬೇಸಾಯ ಜೇನು ಕೃಷಿ ಇತರೆ ಕೃಷಿ ಚಟುವಟಿಕೆಗಳನ್ನು ಅನುಷ್ಠಾನ ಮಾಡಿಸಲು ಪ್ರಗತಿ ನಿಧಿಯನ್ನು ನೀಡುತ್ತಿದ್ದು ಅದಕ್ಕೆ ವಿನಿಯೋಗಿಸಿದರೆ ಶೇಕಡ 10% ರಂತೆ ಐವತ್ತು ಪರ್ಸೆಂಟ್ ಮೀರದಂತೆ ಒಂದರಿಂದ ಐದು ಸಾವಿರ ರೂಪಾಯಿ ತನಕ ಅನುದಾನಗಳನ್ನು ಕೇಂದ್ರ ಕಚೇರಿ ಧರ್ಮಸ್ಥಳದಿಂದ ನೇರ ಸದಸ್ಯರ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸುತ್ತಿದ್ದು ರೈತರಿಗೆ ಪೂರಕವಾದ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಂಡು ರೈತರಲ್ಲಿ ಜಾಗೃತಿಯನ್ನು ಮೂಡಿಸಿದರೆ ಜೊತೆಗೆ ಕೃಷಿ ವೆಚ್ಚ ಕಡಿಮೆ ಮಾಡಿ ಅಧಿಕ ಲಾಭವನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು 


 ಬರದಿಂದ ತತ್ತರಿಸಿದ ಗ್ರಾಮಗಳ ಸ್ವಸಾಯ ಸಂಘದ ಸದಸ್ಯರಿಗೆ ಕೃಷಿಯೇತರ ಚಟುವಟಿಕೆಗಳ ಬಗ್ಗೆ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು   


ಬರಗಾಲದಿಂದ ಕೃಷಿ ಮೇಲೆ ತೀವ್ರ ಹೊಡೆತ ಬೀಳುತ್ತಿದ್ದು, ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೃಷಿಯೇತರ ಚಟುವಟಿಕೆಯ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಸ್ವಸಹಾಯ ಮಹಿಳಾ ಗುಂಪುಗಳ ಮೂಲಕ ಕುರಿ ಸಾಕಣೆ ಚಟುವಟಿಕೆಯ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಂಡು ಗ್ರಾಮೀಣ ಮಟ್ಟದ ಜನರಿಗೆ ರೈತರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ