ಉಜ್ಜಯಿನಿ ಶ್ರೀಗಳ ವಿರುದ್ಧ ಅಪಪ್ರಚಾರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ
ಉಜ್ಜಯಿನಿ ಶ್ರೀಗಳ ವಿರುದ್ಧ ಅಪಪ್ರಚಾರ ಮತ್ತು ಮಾನಹಾನಿ ಗೆ ಸಂಬಂಧದ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ
ಕೊಟ್ಟೂರು ತಾಲೂಕಿನ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ವಿರುದ್ದ, ಪ್ರತಿವಾದಿಗಳು ಮತ್ತು ಅವರ ಪರವಾಗಿರುವ ಯಾರೇ ಆಗಲಿ ಜಗದ್ಗುರು ಮತ್ತು ಶ್ರೀ ಪೀಠದ ಕುರಿತಾಗಿ ನೀಡುವ ಮಾಹಿತಿ ಹೇಳಿಕೆ ಗಳನ್ನು ಯಾವುದೇ ರೀತಿಯಲ್ಲಿ ಮುದ್ರಣ, ಪ್ರಕಟಣೆ, ಪ್ರಸಾರ ಮಾಡದಂತೆ ಪತ್ರಿಕಾ ಮಾಧ್ಯಮ ಮತ್ತು ಪ್ರಿಂಟ್ ಮಾದ್ಯಮಗಳಿಗೆ , ಸೋಶಿಯಲ್ ಮೀಡಿಯಾ,ಕೂಡ್ಲಿಗಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಮದ್ಯಾಂತರ ತಡೆಯಾಜ್ಞೆನೀಡಿ ಶುಕ್ರವಾರದಂದು ಆದೇಶ ನೀಡಿದೆ ಎಂದು ಕೊಟ್ಟೂರು ಕಟ್ಟೆಮನಿ ಬಳಗದ ಮುಖ್ಯಸ್ಥ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದ್ದಾರೆ.
ಈ ಸಂಬಂದ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಪೀಠ ಮತ್ತು ಸ್ವಾಮೀಜಿಗಳ ವಿರುದ್ಧ ಇ ಪೇಪರ್, ವೆಬ್‌ಮೀಡಿಯ, ವಿದ್ಯೂನ್‌ಮಾನ ಮಾದ್ಯಮ , ವೆಬ್ ಸಮೂಹ ಮಾದ್ಯಮ ಸಾಮಾಜಿಕ ಜಾಲ ತಾಣಗಳು , ವಾದಿಗಳ ಕುರಿತು ಯಾವುದೇ ರೀತಿಯಲ್ಲಿ ಅರ್ಥೈಯಿಸದಂತೆ ನಿರ್ಭಂದಿಸಿ ನ್ಯಾಯಾಲಯದ ನ್ಯಾಯಾದೀಶರು ಮುಂದಿನ ವಿಚಾರಣೆ ವರೆಗೂ ಮಧ್ಯಂತರ ತಡೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಮೈದೂರು ಕೊಟ್ರೇಶ್, ಟಿ.ಮಂಜುನಾಥ, ಜಿ.ಕಾರ್ತಿಕ್ , ಅಟವಾಳ್ಗಿ ಸಂತೋಷ, ಕರಿಬಸವನಗೌಡ ಕೆ. (ಅಜ್ಜನಗೌಡ) ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ