75 ನೇಯ ಕಲ್ಯಾಣ ಕರ್ನಾಟಕ ಉತ್ಸವ
ಸಿಂಧನೂರು: ಸೆ.17.ತಾಲೂಕು ಆಡಳಿತದಿಂದ ಕಲ್ಯಾಣ ಕರ್ನಾಟಕ ಉತ್ಸವ ಅಥವಾ ಹೈದರಾಬಾದ್ ಕರ್ನಾಟಕ ದಿನಾಚರಣೆ 75 ನೇಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ತಹಸಿಲ್ ಕಚೇರಿ ಆವರಣದಲ್ಲಿ ತಾಲೂಕ ದಂಡಾಧಿಕಾರಿ ಅರುಣ್ ಹೆಚ್ ದೇಸಾಯಿಯವರು ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ಕಲ್ಯಾಣ ಕರ್ನಾಟಕಕ್ಕೆ ವಿಮೋಚನಾ ದಿನಾಚರಣೆ ಕಾರಣಿಕರ್ತರಾದ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ ರವರ ಭಾವಚಿತ್ರ ಪೂಜೆ ಸಲ್ಲಿಸಲಾಯಿತು ಪುಷ್ಪಾರ್ಪಣೆ ಮಾಡಿದರು.
ನಂತರ ಮಾತನಾಡದ ಅವರು ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ದೇಶಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ ಸಿಕ್ಕರೆ, ಕಲ್ಯಾಣ ಕರ್ನಾಟಕ ಭಾಗ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡದ್ದು ಅಂದರೆ, ದೇಶಕ್ಕೇ ಸ್ವಾತಂತ್ರ್ಯ ಸಿಕ್ಕಿದ್ದರೂ ಕಲ್ಯಾಣ ಕರ್ನಾಟಕ ನಿಜಾಮರ ಹಿಡಿತದಲ್ಲಿತ್ತು.ಅಭಿವೃದ್ಧಿಯಲ್ಲಿ ಮಾತ್ರವಲ್ಲ. ಈ ಪ್ರದೇಶ ಸ್ವಾತಂತ್ರ ಪಡೆಯುವಲ್ಲಿಯೂ ಹಿಂದೆಯೇ ಉಳಿದಿತ್ತು. ಆದರೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲ ಪ್ರದೇಶಗಳು 1947 ರ ನಂತರವೂ ಸ್ವಾತಂತ್ರ್ಯಗೊಂಡಿರಲಿಲ್ಲ. ಹೈದ್ರಾಬಾದ್ ರಾಜ್ಯದ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಒಪ್ಪರಲಿಲ್ಲ.ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ 1948, ಸೆಪ್ಟೆಂಬರ್ 17 ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು ಕಲ್ಯಾಣ ಕರ್ನಾಟಕ ಭಾಗ ವಿಮೋಚನೆಗೊಂಡು ಅಖಂಡ ಭಾರತದಲ್ಲಿ ಸೇರ್ಪಡೆಯಾಯಿತು. ಅಂದಿನಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಆಚರಿಸಲಾಯಿತು.
ನಂತರ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಇನ್ನೂ ಮೂರು - ನಾಲ್ಕು ತಿಂಗಳೋಳಗಾಗಿ ಸಿಂಧನೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯವನ್ನು ನಿರ್ವಹಿಸಲಾಗುವುದು.ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಈ ಭಾಗಕ್ಕೆ ಮೊದಲನೇ ಆದ್ಯತೆ ಶಿಕ್ಷಣಕ್ಕೆ ನೀಡುವುದಕ್ಕೆ ತಿರ್ಮಾನಿಸಿದ್ದೇವೆ.ಈ ಭಾಗದಲ್ಲಿ ಬರುವ ಎಲ್ಲಾ ಶಾಲಾ - ಕಾಲೇಜ್ ಗಳಲ್ಲಿ ಮೂಲಭೂತ ಒದಗಿಸಲಾಗುವುದೆಂದು ಹೇಳಿದರು. ಶಾಲಾ ವಿಧ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು.
ಇದೇ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ ಅಧ್ಯಕ್ಷ ರಾದ ಎಂ.ದೊಡ್ಡ ಬಸವರಾಜ,ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರು. ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ,ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಗಪ್ಪ ಅಂಗಡಿ,ಡಿವೈಎಸ್ ಪಿ ಬಿ.ಎಸ್.ತಳವಾರ ಸಿಸಿಐ ರವಿಕುಮಾರ,ಪಿ ಐ ಡಿ ದುರುಗಪ್ಪ,ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾದ ಚಂದ್ರಶೇಖರ ಹಿರೇಮಠ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು,ಡಾ.ರಾಮಣ್ಣ ಗೋನವಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ