ಸಮಾಜ ಸೇವೆಯಲ್ಲಿ ತೊಡಗಿರುವ ಕ್ಷೌರಿಕ ವೃತ್ತಿಯ ಸಹೋದರರು

"ಅಮ್ಮ ಅನಾಥಾಶ್ರಮದ ವೃದ್ಧರಿಗೆ, ಕ್ಷೌರಿಕ ಸೇವೆ "

ಕೊಟ್ಟೂರು ಪಟ್ಟಣದಲ್ಲಿ ಸುಮಾರು ೬೦ ವರ್ಷಗಳಿಂದ ಜೀವನ ನಡೆಸುತ್ತಿರುವ ಸವಿತಾ ಸಮಾಜದ ಯಲ್ಲಪ್ಪ ,ರಮೇಶ್‌ರವರ ಕುಟುಂಬವು ಕಷ್ಟದಿಂದ ಕಡುಬಡತನದಿಂದ ಮೇಲಕ್ಕೆ ಬಂದಂತಹವರು. ಸಮಾಜ ಸೇವೆ ಮಾಡಬೇಕೆನ್ನುವ ಮನಸ್ಸು ಎಲ್ಲರಿಗೂ ಬರುವುದು ತುಂಬಾ ವಿರಳ. ಇದ್ದಂತವರು ಸಮಾಜ ಸೇವೆಯಲ್ಲಿ ತೊಡಗಿರುವುದರಲ್ಲಿ ಯಾವುದೇ ವಿಶೇಷವೂ ಇರುವುದಿಲ್ಲ. ಆದರೆ ತಾವುಗಳು ಕಾಯಕ ನಂಬಿ ಜೀವನ ನಡೆಸುವ ಸವಿತ ಸಮಾಜದ ಕಾಯಕದಿಂದ ಗುರುತಿಸಿಕೊಂಡ ಕೊಟ್ಟೂರು ಪಟ್ಟಣದ ಮೆಜೆಸ್ಟಿಕ್ ಸಲೂನ್‌ನ ಯಲ್ಲಪ್ಪ, ರಮೇಶ್  ರವರು ಸಹೋದರರು ಈಗ ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರು ಸತತವಾಗಿ ೨೨ ವರ್ಷಗಳಿಂದ ಕ್ಷೌರಿಕ ಕಾಯಕದಲ್ಲಿ ತೊಡಗಿದ್ದಾರೆ. 

ಪಟ್ಟಣದ ಅಮ್ಮ ಅನಾಥಾಶ್ರಮದ ವೃದ್ಧರಿಗೆ, ಅಂಗವಿಕಲರಿಗೆ, ಮಾನಸಿಕ ಅಸ್ವಸ್ಥರಿಗೆ ಸತತ ಐದು ವರ್ಷಗಳಿಂದ ಉಚಿತವಾಗಿ ಕ್ಷೌರಿಕ ಸೇವೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಅನಾಥಾಶ್ರಮ ಅಲ್ಲದೆ ಊರಿನಲ್ಲಿ ಮಾನಸಿಕ ಅಸ್ವಸ್ಥರು ಬುದ್ಧಿಮಾಂದ್ಯಾವರು ಇಂಥವರಿಗೆ ತಮ್ಮ ಕ್ಷೌರಿಕ  ಸೇವೆಯ ಮುಖಾಂತರ ಸಮಾಜಕ್ಕೆ ಕೊಡುಗೆ ಎಂದರೆ ತಪ್ಪಾಗಲಾರದು.

ಈ ಮೂಲಕ ತಮ್ಮ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ. ಈ ಕೆಲಸದಲ್ಲಿ ಅವರು ಯಾವ ಪ್ರಶಂಸೆಯನ್ನೂ ಬಯಸದ ಇವರು ಸಮಾಜದ ಕಣ್ಣಿಗೆ ಕಾಣದಂತೆ ಎಲೆಮರೆ ಕಾಯಿಯಂತೆ ಇದ್ದು, ಎಲ್ಲಿಯೂ ತಮ್ಮ ಸೇವೆಯನ್ನು ಹೇಳಲಿಚ್ಛಿಸದೆ ತಮ್ಮ ಪಾಡಿಗೆ ತಾವು ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. 

ಕೊಟ್ಟೂರಿನಲ್ಲಿ ಹಲವಾರು ರೀತಿಯ ವೃತ್ತಿಗಳಿದ್ದು, ತಮ್ಮ ತಮ್ಮ ವೃತ್ತಿಗಳಲ್ಲೇ ಆತ್ಮಸಂತೃಪ್ತಿಯನ್ನು ಪಡೆಯಲು ಇಂತಹ ಸೇವೆಗಳು ಕಾಯಕ ನಿರತರಾದವರಿಗೆ ಕೊಂಚ ನೆಮ್ಮದಿಯನ್ನು ತರುತ್ತವೆ. ಇಂತಹ ನೆಮ್ಮದಿಯಲ್ಲೇ ಜೀವನದ ಸಾರ್ಥಕ್ಯವನ್ನು ಪಡೆದಿರುವ ವ್ಯಕ್ತಿ ಗಳು ಯಲ್ಲಪ್ಪ ,ರಮೇಶ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾವು ಕಷ್ಟಪಟ್ಟು ಮೇಲೆ ಬಂದ ಕಾರಣ ಇನ್ನೊಬ್ಬರ ಕಷ್ಟವನ್ನು ಅರಿಯುವ ಮನಸಿರುವ ಯಲ್ಲಪ್ಪ ಅವರಿಗೆ ಪಟ್ಟಣದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಾವು ಬಂದ ಸಮಾಜವನ್ನು ಮೇಲಕ್ಕೆ ಎತ್ತುವಲ್ಲಿ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ಮನುಷ್ಯತ್ವವೇನಾದರೂ ಜೀವಂತವಿದೆ ಎನ್ನುವುದಾದರೆ ಇಂತಹ ಮನಸುಗಳಿಂದಲೇ ಇರಬಹುದು ಎಂಬ ಆಶಾಭಾವನೆ ಮೂಡುತ್ತದೆ.ಎಂದು ಕೊಟ್ರಯ್ಯ,ಬಂಜಾರ್ ನಾಗರಾಜ್, ವಿಕ್ರಂ,ಕೊಟ್ರೇಶ್, ಇರ್ಫಾನ್, ಶಫಿ, ಮಂಡಕ್ಕಿ ಪ್ರಕಾಶ್, ಅಭಿಪ್ರಾಯ ಪತ್ರಿಕೆಗೆ ತಿಳಿಸಿದರು.


ಕೋಟ್ -1

ಸವಿತಾ ಸಮಾಜದ ರಮೇಶ್ ಯಲ್ಲಪ್ಪ ಸಹೋದರರು ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕಾಯಕವೆನ್ನುವುದು ತಮ್ಮ ಹೊಟ್ಟೆಪಾಡಿಗಷ್ಟೇ ಅಲ್ಲದೇ, ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುವುದು ಇತರರಿಗೂ ಮಾದರಿಯಾಗಲಿ. ಸಮಾಜದಿಂದ ಇವರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು.ಎಂದು ಶ್ರೀಶ್ರೀಶ್ರೀ ಸವಿತಾನಂದನಾಥ ಸ್ವಾಮೀಜಿ .ಕುಂಚೂರು ಸವಿತಾ ಸಮಾಜ ಪೀಠ, ವಾಡಿ ತಾ. ಕಲಬುರ್ಗಿ ಜಿ.


ಕೊಟ್ -2

ಮಾನಸಿಕ ಅಸ್ವಸ್ಥರು ಬುದ್ಧಿಮಾಂದ್ಯಾವರು ಇಂಥವರಿಗೆ ತಮ್ಮ ಕ್ಷೌರಿಕ  ಸೇವೆಯ ಮುಖಾಂತರ ಸಮಾಜಕ್ಕೆ ಕೊಡುಗೆ ಎಂದರೆ ತಪ್ಪಾಗಲಾರದು.ಈ ಮೂಲಕ ತಮ್ಮ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ ಎಂದು ಡಾಕ್ಟರ್ ರಾಕೇಶ್ ಅಬಿಪ್ರಾಯ ಪತ್ರಿಕೆಗೆ ತಿಳಿಸಿದರು 

ನಮ್ಮ ಪ್ರಜಾ ಸಾಕ್ಷಿ ವಿಶೇಷ ವರದಿ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ